Gruha Lakshmi 9th Installment Credited: ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ (Gruha Lakshmi) ಯೋಜನೆಯ 8ನೇ ಕಂತು ಈಗಾಗಲೇ ಎಲ್ಲಾ ಮಹಿಳೆಯರ ಖಾತೆಗೆ ಸರ್ಕಾರವು ವರ್ಗಾವಣೆ ಮಾಡಲಾಗಿದ್ದು. 9ನೇ ಕಂತಿನ ಹಣವು ಯಾವಾಗ ಬರಲಿದೆ ಮತ್ತು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಅವರ ಅರ್ಜಿ ಮತ್ತು ಹಣ ಪಾವತಿ ಸ್ಥಿತಿಯನ್ನು ಪತ್ತೆ ಹಚ್ಚುವುದು ಹೇಗೆ ಎಂಬುವುದರ ಕುರಿತು ಸಂಪೂರ್ಣ ಮಾಹಿತಿ ಈ ಕೆಳಗಿನ ನೀಡಲಾಗಿದೆ.
ಮಹಿಳೆಯರನ್ನು ಉತ್ತೇಜನ ಮಾಡಬೇಕು, ಆರ್ಥಿಕ ವಾಗಿ ಅಭಿವೃದ್ಧಿ ಮಾಡಬೇಕು ಎಂಬ ಉದ್ದೇಶ ದಿಂದ ರಾಜ್ಯ ಸರಕಾರವು ಗೃಹಲಕ್ಷ್ಮಿ (Gruha Lakshmi) ಯೋಜನೆಯನ್ನು ಜಾರಿಗೆ ತಂದಿದೆ. ಲೋಕಸಭಾ ಚುನಾವಣೆಯು ನಡೆಯುತ್ತಿರುವ ಹಿನ್ನೆಲೆ ಹಲವು ಮಹಿಳೆಯರಲ್ಲಿ ಹಣ ಬರುತ್ತದೆಯೋ ಇಲ್ಲವೋ ಎಂದು ಗೊಂದಲವಿತ್ತು ಆದರೆ ರಾಜ್ಯ ಸರ್ಕಾರವು ಅರ್ಹ ಪಲಾನುಭವಿಗಳಿಗೆ 9ನೇ ಕಂತಿನ ಹಣವನ್ನು ಖಾತೆಗೆ ವರ್ಗಾವಣೆ ಮಾಡಲಾಗಿದೆ. ಈ ಯೋಜನೆಯಡಿಯಲ್ಲಿ ಮಹಿಳೆಯರು ತಿಂಗಳಿಗೆ 2 ಸಾವಿರ ರೂಗಳನ್ನು ಪಡೆಯುತ್ತಿದ್ದು,ಇಲ್ಲಿಯವರೆಗೆ 8 ಕಂತಿನ ವರೆಗೆ ಗೃಹಲಕ್ಷ್ಮಿ ಹಣ ಬಿಡುಗಡೆ ಬಿಡುಗಡೆ ಮಾಡಲಾಗಿದೆ. ಇದೀಗ 9ನೇ ಕಂತಿನ ಹಣವನ್ನು ಸರಕಾರ ಬಿಡುಗಡೆ ಮಾಡಲಾಗಿದೆ. ಆಧಾರ್ ಕಾರ್ಡ್ ಆಪ್ಡೆಟ್, ಇ- ಕೆವೈಸಿ, ರೇಷನ್ ಕಾರ್ಡ್ ಲಿಂಕ್, ಬ್ಯಾಂಕ್ ಖಾತೆ ಲಿಂಕ್, ಇತ್ಯಾದಿ ಕೆಲಸ ಆಗಿದ್ದರೆ ಮಾತ್ರ ಗೃಹಲಕ್ಷ್ಮಿ ಯ ಹಣ ಖಾತೆಗೆ ಜಮೆ ಆಗಲಿದೆ.