ಐಡಿಬಿಐ ಬ್ಯಾಂಕ್ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 119 ಸ್ಪೆಷಲಿಸ್ಟ್ ಆಫೀಸರ್ (ಎಸ್‌ಒ) 2025 ಹುದ್ದೆಗಳಿಗೆ ನೇಮಕಾತಿ(IDBI Bank SO Recruitment 2025) ಅಧಿಸೂಚನೆಯನ್ನು ಹೊರಡಿಸಿದೆ. ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಬ್ಯಾಂಕಿಂಗ್ ವಲಯದಲ್ಲಿ ಕೆಲಸ ನಿರ್ವಹಿಸಲು ಆಸಕ್ತಿಯುಳ್ಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಐಡಿಬಿಐನಲ್ಲಿ ಖಾಲಿ ಇರುವ ಸ್ಪೆಷಲಿಸ್ಟ್ ಆಫೀಸರ್ (ಎಸ್‌ಒ) 2025 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಡೆಪ್ಯೂಟಿ ಜನರಲ್ ಮ್ಯಾನೇಜರ್, ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಮತ್ತು ಮ್ಯಾನೇಜರ್ ಗ್ರೇಡ್ ಬಿ ಹುದ್ದೆಗಳಿಗೆ ಬ್ಯಾಂಕ್ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಐಡಿಬಿಐ ಬ್ಯಾಂಕ್ ಅಧಿಕೃತ ವೆಬ್ ಸೈಟ್ www.idbibank.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಸದರಿ ನೇಮಕಾತಿಗೆ ಬೇಕಾದ ವಿದ್ಯಾರ್ಹತೆ, ವಯಸ್ಸಿನ ಮಿತಿ, ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕಗಳು ಹಾಗೂ ಇತರೆ ಮಾಹಿತಿಗಳನ್ನು ಈ ಲೇಖನದಲ್ಲಿ ನೀಡಿದ್ದೇವೆ. ತಪ್ಪದೇ ಕೊನೆವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಏಪ್ರಿಲ್ 07 ರಿಂದ ಪ್ರಾರಂಭವಾಗಿ, ಏಪ್ರಿಲ್ 20, 2025ರಂದು ಕೊನೆಗೊಳ್ಳಲಿದೆ.
ಖಾಲಿ ಇರುವ ಹುದ್ದೆಗಳ ವಿವರ:
- ಡೆಪ್ಯೂಟಿ ಜನರಲ್ ಮ್ಯಾನೇಜರ್ ಗ್ರೇಡ್ ಡಿ – 08
- ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಗ್ರೇಡ್ ಸಿ – 42
- ಮ್ಯಾನೇಜರ್ ಗ್ರೇಡ್ ಬಿ – 69
ಒಟ್ಟು 119 ಹುದ್ದೆಗಳು
ಶೈಕ್ಷಣಿಕ ಅರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಈ ಕೆಳಗಿನ ವಿದ್ಯಾರ್ಹತೆ ಹೊಂದಿರಬೇಕು.
ಬಿ ಟೆಕ್ / ಬಿಇ/BCA/ಯಾವುದೇ ವಿಭಾಗದಲ್ಲಿ ಪದವಿ(Any Degree) ಪಡೆದವರು ಅಥವಾ ಎಂಎಸ್ಸಿ (ಐಟಿ/ ಕಂಪ್ಯೂಟರ್ ಸೈನ್ಸ್)/ ಎಂಸಿಎ/ ಎಂ ಟೆಕ್ / ಎಂ ಇ/ ಚಾರ್ಟಡ್ ಅಕೌಂಟೆಂಟ್ (ಸಿಎಎಸ್)/(CAs)/ಐಸಿಡಬ್ಲ್ಯೂಎ /ಎಂಬಿಎ/ಕಾನೂನಿನಲ್ಲಿ ಪದವಿ(Law)
ಪ್ರತಿಯೊಂದು ಹುದ್ದೆಗೂ ಶಿಕ್ಷಣ ಮತ್ತು ಕೆಲಸದ ಅನುಭವದ ಆಧಾರದ ಮೇಲೆ ವಿಭಿನ್ನ ಅರ್ಹತಾ ಮಾನದಂಡಗಳಿದ್ದು, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ನಾವು ಕೆಳಗೆ ನೀಡಿರುವ ವಿವರವಾದ ಅಧಿಸೂಚನೆಯನ್ನು ಓದಲು ಸೂಚಿಸಲಾಗಿದೆ.
ವಯೋಮಿತಿ:
ಏಪ್ರಿಲ್ 01, 2025 ರಂತೆ
- ಕನಿಷ್ಠ ವಯಸ್ಸಿನ ಮಿತಿ – 25 ವರ್ಷಗಳು
- ಗರಿಷ್ಠ ವಯಸ್ಸಿನ ಮಿತಿ – 45 ವರ್ಷಗಳು
ಸರ್ಕಾರಿ ಮಾನದಂಡಗಳಿಗೆ ಅನುಗುಣವಾಗಿ ಮೀಸಲಾತಿ ವರ್ಗಗಳಿಗೆ ಅನ್ವಯವಾಗುವ ವಯೋಮಿತಿ ಸಡಿಲಿಕೆ ಇರುತ್ತದೆ.
ಆಯ್ಕೆ ಪ್ರಕ್ರಿಯೆ:
- ಅಭ್ಯರ್ಥಿಗಳ ಅರ್ಹತೆ ಮತ್ತು ಅನುಭವದ ಆಧಾರದ ಮೇಲೆ ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ.
- ವೈಯಕ್ತಿಕ ಸಂದರ್ಶನ ಅಥವಾ ಗುಂಪು ಚರ್ಚೆ.
- ದಾಖಲೆ ಪರಿಶೀಲನೆ.
ಅರ್ಜಿ ಶುಲ್ಕ:
- ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 1050 ರೂ.
- ಎಸ್‌ಸಿ, ಎಸ್‌ಟಿ ಮತ್ತು ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ 250 ರೂ.
- ಅಭ್ಯರ್ಥಿಗಳು ಅರ್ಜಿಯ ಶುಲ್ಕವನ್ನು ಆನ್ ಲೈನ್ ಮುಖಾಂತರವೇ ಪಾವತಿಸಬೇಕು.
How to Apply for IDBI Bank SO Recruitment 2025
ಅರ್ಜಿ ಸಲ್ಲಿಸುವ ವಿಧಾನ ಹೇಗೆ?
- ಐಡಿಬಿಐ ನ ಅಧಿಕೃತ ವೆಬ್‌ಸೈಟ್ @idbibank.in ಗೆ ಭೇಟಿ ನೀಡಿ.
- ಮುಖಪುಟದಲ್ಲಿ, ವೃತ್ತಿಗಳು – ಪ್ರಸ್ತುತ ಖಾಲಿ ಹುದ್ದೆಗಳ ಮೇಲೆ ಕ್ಲಿಕ್ ಮಾಡಿ.
- Recruitment of Specialist Officer – 2025-26 (New) ಎಂಬ ಅಧಿಸೂಚನೆಯ ಮೇಲೆ ಕ್ಲಿಕ್ ಮಾಡಿ .
- ಆನ್‌ಲೈನ್‌ನಲ್ಲಿ ಅನ್ವಯಿಸು ಮೇಲೆ ಕ್ಲಿಕ್ ಮಾಡಿ. ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ.
- ಅರ್ಜಿ ನಮೂನೆಯಲ್ಲಿ ನಿಮ್ಮ ವೈಯಕ್ತಿಕ ಮತ್ತು ಶೈಕ್ಷಣಿಕ ವಿವರಗಳನ್ನು ನಮೂದಿಸಿ.
- ಅಭ್ಯರ್ಥಿಗಳು ಪಾಸ್ ಪೋರ್ಟ್ ಅಳತೆಯ ಭಾವಚಿತ್ರ, ಸಹಿ ಹಾಗೂ ಅಗತ್ಯವಿರುವ ದಾಖಲೆಗಳನ್ನು ಅಪ್ಲೋಡ್ ಮಾಡಿ.
- ಆನ್ ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿ ಮಾಡಿ.
- ಕೊನೆಯದಾಗಿ ಅರ್ಜಿಯನ್ನು ಪರಿಶೀಲನೆ ಮಾಡಿ ಸಲ್ಲಿಸಿ.
Important Direct Links:
Official Notification PDF | Download |
Online Application Form Link | Apply Now |
Official Website | www.idbibank.in |
More Updates | KarnatakaHelp.in |