ರೈಲು ಮೂಲಸೌಲಭ್ಯ ಅಭಿವೃದ್ಧಿ ಕಂಪನಿ(K-RIDE)ಯಲ್ಲಿ ಮ್ಯಾನೇಜರ್ ಹುದ್ದೆಗಳು

ಶಾರ್ಟ್‌ಲಿಸ್ಟ್‌ ಆಧಾರಿತ ಆಯ್ಕೆ

Published on:

ಕರ್ನಾಟಕ ಸರ್ಕಾರ ಮತ್ತು ರೈಲ್ವೆ ಸಚಿವಾಲಯದ ಜಂಟಿ ಉದ್ಯಮವಾಗಿರುವ ರೈಲು ಮೂಲಸೌಲಭ್ಯ ಅಭಿವೃದ್ಧಿ ಕಂಪನಿ(ಕರ್ನಾಟಕ) ಲಿಮಿಟೆಡ್‌ನಲ್ಲಿ ವಿವಿಧ ಮ್ಯಾನೇಜರ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ.

ವಿವಿಧ ವಿಭಾಗಗಳಲ್ಲಿ 09 ಅಭ್ಯರ್ಥಿಗಳನ್ನು ಡೆಪ್ಯುಟೇಶನ್/ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲಿದೆ. ಅರ್ಜಿ ಸಲ್ಲಿಸಲು ಇಚ್ಚಿಸುವ ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು ಫೆ.16ರೊಳಗೆ ಕೆ-ರೈಡ್‌ ಅಧಿಕೃತ ಜಾಲತಾಣ https://kride.in/careers-in-k-ride/ಕ್ಕೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಪ್ರಕಟಣೆಯ ದಿನಾಂಕ – ಜನವರಿ 16, 2026
  • ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ ಅರ್ಜಿ ಸಲ್ಲಿಕೆ ಈಗಾಗಲೇ ಪ್ರಾರಂಭವಾಗಿದೆ.
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಫೆಬ್ರವರಿ 16, 2026

ಹುದ್ದೆಗಳ ವಿವರ:

ಜನರಲ್ ಮ್ಯಾನೇಜರ್- 04 ಹುದ್ದೆಗಳು
ಜನರಲ್ ಮ್ಯಾನೇಜರ್(ಸಿಗ್ನಲಿಂಗ್ ಮತ್ತು ದೂರಸಂಪರ್ಕ)- 01 ಹುದ್ದೆಗಳು
ಜಾಯಿಂಟ್‌ ಜನರಲ್ ಮ್ಯಾನೇಜರ್- 01 ಹುದ್ದೆಗಳು
ಸೀನಿಯರ್‌ ಮ್ಯಾನೇಜರ್- 01 ಹುದ್ದೆಗಳು
ಡೆಪ್ಯುಟಿ ಮ್ಯಾನೇಜರ್- 02 ಹುದ್ದೆಗಳು

ಒಟ್ಟು – 09 ಹುದ್ದೆಗಳು

ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು:

✓ ಮ್ಯಾನೇಜರ್ (ಸಿವಿಲ್) ಹುದ್ದೆಗೆ;

*ಡೆಪ್ಯೂಟೇಶನ್ ಆಧಾರದ ಮೇಲೆ*: ಕನಿಷ್ಠ 14 ವರ್ಷಗಳ ಗ್ರೂಪ್ ‘ಎ’ IRSE ಸೇವೆಯೊಂದಿಗೆ SAG/NFSAG/SG ಅಥವಾ ತತ್ಸಮಾನ ದರ್ಜೆಯಲ್ಲಿರಬೇಕು.

*ಗುತ್ತಿಗೆ ಆಧಾರದ ಮೇಲೆ*: ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪೂರ್ಣಗೊಳಿಸಿರಬೇಕು.

✓ ಜನರಲ್ ಮ್ಯಾನೇಜರ್(S&T) ಹುದ್ದೆಗೆ;

*ಡೆಪ್ಯೂಟೇಶನ್ ಆಧಾರದ ಮೇಲೆ*: SAG/NFSAG/SG ಅಥವಾ ತತ್ಸಮಾನ ದರ್ಜೆಯಲ್ಲಿರಬೇಕು ಮತ್ತು ಗ್ರೂಪ್ ‘A’ IRSSE ನಲ್ಲಿ 14 ವರ್ಷಗಳ ಸೇವೆಯ ಸಾಬೀತಾದ ದಾಖಲೆಯನ್ನು ಹೊಂದಿರಬೇಕು.

*ಗುತ್ತಿಗೆ ಆಧಾರದ ಮೇಲೆ*: ಎಲೆಕ್ಟ್ರಾನಿಕ್ಸ್/ಎಲೆಕ್ಟ್ರಾನಿಕ್ ಮತ್ತು ಸಂವಹನ/ದೂರಸಂಪರ್ಕ ವಿಷಯಗಳಲ್ಲಿ ಬಿ.ಇ/ಬಿ.ಟೆಕ್ ಪದವಿ ಪೂರ್ಣಗೊಳಿಸಿರಬೇಕು.

✓ ಜಾಯಿಂಟ್‌ ಜನರಲ್ ಮ್ಯಾನೇಜರ್ ಹುದ್ದೆಗೆ;

*ಡೆಪ್ಯೂಟೇಶನ್ ಆಧಾರದ ಮೇಲೆ ಮಾತ್ರ*: ಗ್ರೂಪ್ “ಎ” ನಲ್ಲಿ ಕನಿಷ್ಠ 8 ವರ್ಷಗಳ IRSME/IRSEE ಸೇವೆಯೊಂದಿಗೆ SG / JAG ಅಥವಾ ತತ್ಸಮಾನ ದರ್ಜೆಯಲ್ಲಿರಬೇಕು.

✓ ಸೀನಿಯರ್‌ ಮ್ಯಾನೇಜರ್ ಹುದ್ದೆಗೆ;

*ಡೆಪ್ಯೂಟೇಶನ್ ಆಧಾರದ ಮೇಲೆ*: ಗ್ರೂಪ್ ಎ ಅಥವಾ ಗ್ರೂಪ್ ಬಿ ಐಆರ್‌ಎಸ್‌ಇ ಸೇವೆಗಳಲ್ಲಿ ಸೇವೆ ಸಲ್ಲಿಸಿರಬೇಕು ಮತ್ತು ಗ್ರೂಪ್ ಎ ನಲ್ಲಿ ಕನಿಷ್ಠ 4 ವರ್ಷಗಳು ಮತ್ತು ಗ್ರೂಪ್ ಬಿ ಸೇವೆಗಳಲ್ಲಿ 8 ವರ್ಷಗಳು ಸೇವೆ ಸಲ್ಲಿಸಿರಬೇಕು.

*ಗುತ್ತಿಗೆ ಆಧಾರದ ಮೇಲೆ*: ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪೂರ್ಣಗೊಳಿಸಬೇಕು.

✓ ಡೆಪ್ಯೂಟಿ ಮ್ಯಾನೇಜರ್ ಹುದ್ದೆಗೆ;

*ಡೆಪ್ಯೂಟೇಶನ್ ಆಧಾರದ ಮೇಲೆ*: ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಕನಿಷ್ಠ 5 ವರ್ಷಗಳ ಕಾಲ ಗ್ರೂಪ್ ‘ಬಿ’ ಅಥವಾ ಗ್ರೂಪ್ ‘ಸಿ’ ಸೇವೆಯಲ್ಲಿರಬೇಕು

*ಗುತ್ತಿಗೆ ಆಧಾರದ ಮೇಲೆ*: ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪೂರ್ಣಗೊಳಿಸಬೇಕು.

ವಯೋಮಿತಿ

ಗರಿಷ್ಠ ವಯಸ್ಸಿನ ಮಿತಿ – 55ವರ್ಷಗಳು

ವಯೋಮಿತಿ ಸಡಿಲಿಕೆ; ಡೆಪ್ಯುಟೇಶನ್ ಅಭ್ಯರ್ಥಿಗಳಿಗೆ ಮಾತ್ರ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ಆಯ್ಕೆ ವಿಧಾನ:

ಅರ್ಹತೆಯ ಆಧಾರದ ಮೇಲೆ ಅಭ್ಯರ್ಥಿಗಳ ಶಾರ್ಟ್‌ಲಿಸ್ಟ್
ಸಂದರ್ಶನ
ದಾಖಲೆ ಪರಿಶೀಲನೆ

ಸಂಬಳ:

ಜನರಲ್ ಮ್ಯಾನೇಜರ್ (ಸಿವಿಲ್)/ಇ8 ಹುದ್ದೆಗಳಿಗೆ – ₹2,61,000
ಜಾಯಿಂಟ್‌ ಜನರಲ್ ಮ್ಯಾನೇಜರ್ ಹುದ್ದೆಗಳಿಗೆ – K-RIDE ನಿಯಮಗಳ ಅನುಸಾರ
ಸೀನಿಯರ್ ಡಿಜಿಎಂ ಹುದ್ದೆಗಳಿಗೆ – ₹1,12,000-1,54,000
ಡೆಪ್ಯೂಟಿ ಮ್ಯಾನೇಜರ್ ಹುದ್ದೆಗಳಿಗೆ – ₹70,250-80,000

ಅರ್ಜಿ ಶುಲ್ಕ:

ಉಲ್ಲೇಖಿಸಲಾಗಿರುವುದಿಲ್ಲ

ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ

• ಅಭ್ಯರ್ಥಿಗಳು K-RIDE ಅಧಿಕೃತ ಜಾಲತಾಣ https://kride.in/careers-in-k-ride/ಕ್ಕೆ ಭೇಟಿ ನೀಡಿ.

• “K-RIDE/HR/195/20 ಹುದ್ದೆಗಳ ಅಧಿಸೂಚನೆ/02/2026” – ಡೆಪ್ಯುಟೇಷನ್/ಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳ ನೇಮಕಾತಿ ವಿಭಾಗದಲ್ಲಿ ನೀಡಲಾಗಿರುವ “ಈಗಲೇ ಅರ್ಜಿ ಸಲ್ಲಿಸಿ” ಲಿಂಕ್ ಮೇಲೆ ಕ್ಲಿಕ್ ಮಾಡಿ.

• ಬಳಿಕ ಅರ್ಜಿ ನಮೂನೆಯ ಗೂಗಲ್ ಫಾರ್ಮ್ ತೆರೆದುಕೊಳ್ಳುತ್ತದೆ. ಅರ್ಜಿಯಲ್ಲಿ ಕೇಳಲಾಗುವ ಸ್ವ ವಿವರ ವಿವರಗಳನ್ನು ನಮೂದಿಸಿ.

• ಮುಂದುವರೆದಂತೆ ಭಾವಚಿತ್ರ, ಸಹಿ, ಶೈಕ್ಷಣಿಕ ಮಾಹಿತಿ ಹಾಗೂ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.

• ನಂತರ ಅರ್ಜಿಯನ್ನು ಮತ್ತೊಮ್ಮೆ ಎಚ್ಚರಿಕೆಯಿಂದ ಪರಿಶೀಲಿಸಿ ಸಲ್ಲಿಸಿ.

• ಅಂತಿಮವಾಗಿ ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿದ ಪ್ರತಿಯನ್ನು ಡೌನ್ಲೋಡ್ ಮಾಡಿ ಮುದ್ರಣ ತೆಗೆದುಕೊಳ್ಳಿ.

Important Direct Links:

Official Notification PDFDownload
Online Application Form LinkApply Now
Official Websitehttps://kride.in/
More UpdatesKarnatakaHelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

1 thought on “ರೈಲು ಮೂಲಸೌಲಭ್ಯ ಅಭಿವೃದ್ಧಿ ಕಂಪನಿ(K-RIDE)ಯಲ್ಲಿ ಮ್ಯಾನೇಜರ್ ಹುದ್ದೆಗಳು”

Leave a Comment