ಇಂಡೋ- ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP)ನಲ್ಲಿ ಖಾಲಿ ಇರುವ ಕಾನ್ಸ್ಟೇಬಲ್ ಚಾಲಕ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು.
ಟಿಬೆಟಿಯನ್ ಬಾರ್ಡರ್ ಪೊಲೀಸ್ ಹೊಸದೊಂದು ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಲಾಗಿದ್ದು, ಕಾನ್ಸ್ಟೇಬಲ್ ಚಾಲಕ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ನೇಮಕಾತಿಯಲ್ಲಿ ಒಟ್ಟು ಖಾಲಿ ಇರುವ 545 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, 10ನೇ ತರಗತಿ ಪಾಸ್ ಮಾಡಿ HMV ವಾಹನ ಚಾಲನೆ ಪರವಾನಿಗೆ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು. ಸರ್ಕಾರಿ ಚಾಲಕ ಹುದ್ದೆಗಳನ್ನು ಬಯಸುತ್ತಿರುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣ ಅವಕಾಶವಾಗಿದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ದೈಹಿಕ ಪರೀಕ್ಷೆಯ, ಡ್ರೈವಿಂಗ್ ಟೆಸ್ಟ್ ನಡೆಸಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ITBP Constable Driver ನೇಮಕಾತಿ 2024ಕ್ಕೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ITBPಯ ಅಧಿಕೃತ ವೆಬ್ ಸೈಟ್ recruitment.itbpolice.nic.in ಭೇಟಿ ನೀಡಿ ನವೆಂಬರ್ 6 ಒಳಗೆ ಅರ್ಜಿಯನ್ನು ಸಲ್ಲಿಸಬಹುದು. ಈ ಲೇಖನದಲ್ಲಿ ITBP Constable Driver Recruitment 2024 ಕುರಿತಂತೆ ಹೆಚ್ಚಿನ ಮಾಹಿತಿಯನ್ನು ನೀಡಲಾಗಿದ್ದು, ಗಮನವಿಟ್ಟು ಓದಿರಿ.
Shortview of ITBP Constable Driver Notification 2024
Organization Name – Indo-Tibetan Border Police Force
Post Name – Constable(Driver)
Total Vacancy – 545
Application Process: Online
Job Location – All Over India
ನೇಮಕಾತಿಯ ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಅಕ್ಟೋಬರ್ 8, 2024
- ಅರ್ಜಿ ಸಲ್ಲಿಸಲು ಕೊನೆ ದಿನಾಂಕ – ನವಂಬರ್ 6, 2024
ವಿದ್ಯಾರ್ಹತೆ:
ITBP Constable Driver ನೇಮಕಾತಿಗೆ ಅರ್ಜಿ ಸಲ್ಲಿಸಲು 10ನೇ ತರಗತಿ ಪಾಸ್ ಮಾಡಿರಬೇಕು ಜೊತೆಗೆ HMV ವಾಹನ ಚಲಾವಣೆ ಪರವಾಗಿ(Heavy Motor Vehicle Licence) ಹೊಂದಿರಬೇಕು.
ವಯೋಮಿತಿ:
ITBP Constable Driver ನೇಮಕಾತಿ ಅಧಿಸೂಚನೆ ಪ್ರಕಾರ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ವಯೋಮಿತಿಯು ಕನಿಷ್ಠ 21 ವರ್ಷದಿಂದ ಗರಿಷ್ಠ 27 ವರ್ಷದ ಒಳಗೆ ಇರಬೇಕು.
ಆಯ್ಕೆ ಪ್ರಕ್ರಿಯೆ:
- ಲಿಖಿತ ಪರೀಕ್ಷೆ
- ದೈಹಿಕ ಪರೀಕ್ಷೆ
- ದಾಖಲಾತಿ ಪರಿಶೀಲನೆ
- ಡ್ರೈವಿಂಗ್ ಪರೀಕ್ಷೆ
- ವೈದ್ಯಕೀಯ ಪರೀಕ್ಷೆ
ವೇತನ ವಿವರ:
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕವಾಗಿ ₹27,700 ರಿಂದ ₹69,100 ವರೆಗೆ ವೇತನ ನೀಡಲಾಗುತ್ತದೆ.
ಅರ್ಜಿ ಶುಲ್ಕ:
- Gen/ OBC/ EWS ಅಭ್ಯರ್ಥಿಗಳಿಗೆ – ₹100/-
- SC/ ST/ ESM ಅಭ್ಯರ್ಥಿಗಳಿಗೆ – ಶುಲ್ಕ ವಿನಾಯಿತಿ ನೀಡಲಾಗಿದೆ
How to Apply for ITBP Constable Driver Recruitment 2024
ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೇಗೆ…?
- ಮೊದಲಿಗೆ ITBPಯ ಅಧಿಕೃತ ವೆಬ್ ಸೈಟ್ recruitment.itbpolice.nic.in ಭೇಟಿ ನೀಡಿ.
- ಮುಖಪುಟದಲ್ಲಿ ಕಾಣುವ ‘Recruitment’ ವಿಭಾಗವನ್ನು ಆಯ್ಕೆ ಮಾಡಿಕೊಳ್ಳಿ.
- ನಂತರ “ಖಾತೆ ರಚಿಸಿ” ಲಿಂಕ್ ಕ್ಲಿಕ್ ಮಾಡಿ ಅಗತ್ಯ ವಿವರಗಳೊಂದಿಗೆ ನಿಮ್ಮ ಖಾತೆಯನ್ನು ರಚಿಸಿಕೊಳ್ಳಿ.
- ನೀಡಲಾದ ಪಾಸ್ವರ್ಡ್ ಮತ್ತು ನೊಂದಣಿ ಸಂಖ್ಯೆಯಿಂದ ಲಾಗಿನ್ ಮಾಡಿ.
- ಪ್ರಕಟಣೆಗಳಲ್ಲಿ ಕಾಣುವ ITBP Constable Driver Recruitment 2024 ಲಿಂಕ್ ಆಯ್ಕೆ ಮಾಡಿ.
- ನಂತರ ಅರ್ಜಿ ನಮೂನೆಯಲ್ಲಿ ಕೇಳಲಾಗುವ ಎಲ್ಲ ವಿವರಗಳನ್ನು ಭರ್ತಿ ಮಾಡಿ.
- ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ, ಅರ್ಜಿ ಶುಲ್ಕವನ್ನು ಪಾವತಿಸಿ
- ಕೊನೆಯದಾಗಿ ಅರ್ಜಿಯನ್ನು ಸಲ್ಲಿಸಿ
Important Direct Links:
Official Short Notification PDF | Download |
Official Notification PDF | Soon |
Online Application Form Link (From 08/10/2024) | |
Official Website | itbpolice.nic.in |
More Updates | Karnataka Help.in |