Karnataka Guest Lecturer Recruitment 2024: ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

Follow Us:

ಕರ್ನಾಟಕ ಸರ್ಕಾರದ ಕಾಲೇಜು ಶಿಕ್ಷಣ ಇಲಾಖೆಯು ರಾಜ್ಯದ ವಿವಿಧ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಬಹುದಿನಗಳ ಬೇಡಿಕೆಯಾಗಿದ್ದ ಅತಿಥಿ ಉಪನ್ಯಾಸಕರ ನೇಮಕಾತಿ(Karnataka Guest Lecturer Recruitment 2024)ಯ ಅಧಿಸೂಚನೆಯೂ ಪ್ರಕಟವಾಗಿದ್ದು, ರಾಜ್ಯ ಕಾಲೇಜು ಶಿಕ್ಷಣ ಇಲಾಖೆಯು 2024- 25 ನೇ ಶೈಕ್ಷಣಿಕ ಸಾಲಿಗೆ ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಗ್ರಂಥಪಾಲಕರು ಹಾಗೂ ದೈಹಿಕ ಶಿಕ್ಷಣ ಒಳಗೊಂಡಂತೆ ಆನ್‌ಲೈನ್ ಕೌನ್ಸಿಲಿಂಗ್ ಪ್ರಕ್ರಿಯೆ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಮೆರಿಟ್ ಪಟ್ಟಿ ಸಿದ್ಧಪಡಿಸಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

Karnataka Guest Lecturer Recruitment 2024-25
Karnataka Guest Lecturer Recruitment 2024-25

ಕರ್ನಾಟಕ ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್ ಸೈಟ್  dce.karnataka.gov.in ಭೇಟಿ ನೀಡಿ ಆನ್ ಲೈನ್ ಮೂಲಕ ಸೆಪ್ಟೆಂಬರ್ 7ರ ಒಳಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ಲೇಖನದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ನೇಮಕಾತಿ ಕುರಿತು ಹೆಚ್ಚಿನ ಮಾಹಿತಿಯನ್ನು ನೀಡಲಾಗಿದ್ದು ಗಮನವಿಟ್ಟು ಓದಿರಿ.

Shortview of Guest Faculty 2024-25 Notification

Organization Name – Department of Collegiate Education
Post Name – Guest Lecturer Posts
Application Process: Online
Job Location – Karnataka

ನೇಮಕಾತಿಗೆ ಸಂಬಂಧಿಸಿದ ತಾತ್ಕಾಲಿಕ ವೇಳಾಪಟ್ಟಿ

  • ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – 31.08.2024
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 09.09.2024
  • ತಾತ್ಕಾಲಿಕ ಮೆರಿಟ್ ಪಟ್ಟಿ ಪ್ರಕಟಿಸುವ ದಿನಾಂಕ: 10.09.2024
  • ಸಲ್ಲಿಸಿರುವ ಅರ್ಜಿಯನ್ನು EDIT ಮಾಡಲು- 11 ಮತ್ತು 12 ಸೆಪ್ಟೆಂಬರ್ 2024
  • ಕಾರ್ಯಭಾರ ಪ್ರಕಟಿಸುವ ದಿನಾಂಕ: 21 ಸೆಪ್ಟೆಂಬರ್ 2024
  • ಮೆರಿಟ್ ಪಟ್ಟಿಯನ್ವಯ ಕಾಲೇಜು ಆಯ್ಕೆ ಕೌನ್ಸಿಲಿಂಗ್ ನಡೆಸುವ ದಿನಾಂಕಗಳು : 23 ಸೆಪ್ಟೆಂಬರ್ ರಿಂದ 29 ಸೆಪ್ಟೆಂಬರ್ 2024

ವಿದ್ಯಾರ್ಹತೆ:

  • ಅಭ್ಯರ್ಥಿಯು ಸಂಬಂಧಿಸಿದ ವಿಷಯದಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಗಳಿಸಿರುವ ಒಟ್ಟು ಶೇಕಡಾವಾರು ಅಂಕಗಳ 25% ಅನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ.

(ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹಿಂದಿನ ವರ್ಷದಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರೆ ಪ್ರತಿವರ್ಷಕ್ಕೆ ಮೂರು ಅಂಕಗಳಂತೆ ನಿಗದಿಪಡಿಸಲಾಗಿದೆ)

ವೇತನ ಶ್ರೇಣಿ:

ಅತಿಥಿ ಉಪನ್ಯಾಸಕರ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ₹35,000 ರಿಂದ ₹40,000 ವರೆಗೂ ಮಾಸಿಕ ವೇತನ ನೀಡಲಾಗುತ್ತದೆ.

(ವೇತನ ಶ್ರೇಣಿಯನ್ನು ಈ ಹಿಂದೆ ನಿರ್ವಹಿಸಿದ ಕರ್ತವ್ಯದ ಅವಧಿಯ ಮೇಲೆ ನಿಗದಿಪಡಿಸಲಾಗುತ್ತದೆ)

ಆಯ್ಕೆ ಪ್ರಕ್ರಿಯೆ:

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಆನ್ ಲೈನ್ ಕೌನ್ಸಿಲಿಂಗ್ ನಡೆಸಿ ಮೆರಿಟ್ ಪಟ್ಟಿ ಬಿಡುಗಡೆ ಮಾಡಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

  • ಮೆರಿಟ್ ಪಟ್ಟಿ

How to Apply for Karnataka Guest Lecturer Recruitment 2024

ಅರ್ಜಿ‌ ಸಲ್ಲಿಸುವ ಪ್ರಕ್ರಿಯೆ..?

ಕಾಲೇಜು ಶಿಕ್ಷಣ ಇಲಾಖೆಯ ಅಧಿಕೃತ ವೆಬ್ ಸೈಟ್ dce.karnataka.gov.in ಭೇಟಿ ನೀಡಿ ಅಥವಾ ನಾವು ಈ ಲೇಖನದ ಕೊನೆಯಲ್ಲಿ ನೀಡಿರುವ ಲಿಂಕ್ ಮೂಲಕ ನೇರವಾಗಿ ಅರ್ಜಿ ಸಲ್ಲಿಸಿ, ಅಗತ್ಯ ದಾಖಲೆಗಳೊಂದಿಗೆ ಅರ್ಜಿ‌ ಸಲ್ಲಿಸಬೇಕು.

Important Direct Links:

Online Application Extended Notice PDF(Dated On 06/09/2024)Download
Official Notification PDFDownload
Online Application Form LinkFresh Application || Renewal application
More UpdatesKarnataka Help.in

Leave a Comment