WhatsApp Channel Join Now
Telegram Group Join Now

SSLC Exam 3 Registration 2024: SSLC ಮೂರನೇ ಪರೀಕ್ಷೆಗೆ ನೊಂದಣಿ ಪ್ರಾರಂಭ; ಪರೀಕ್ಷಾ ದಿನಾಂಕಗಳು ಪ್ರಕಟ

SSLC ಯ ಪ್ರಸಕ್ತ ಸಾಲಿನ ಮೊದಲ ಹಾಗೂ ಎರಡನೇ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು (KSEEB) ಮೂರನೇ ಅವಕಾಶ ನೀಡಿದ್ದು, ಎಸ್‌ಎಸ್‌ಎಲ್‌ಸಿ ಮೂರನೇ ಪರೀಕ್ಷೆಯ ನೋಂದಣಿಗೆ ಅವಕಾಶ ನೀಡಿದೆ. ಪರೀಕ್ಷೆ ತೆಗೆದುಕೊಳ್ಳುವ ಅಭ್ಯರ್ಥಿಗಳು  ಜುಲೈ 17 ರೊಳಗಾಗಿ ಮೂರನೇ ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ.

ಜುಲೈ 10ರಿಂದ ಪರೀಕ್ಷೆಗೆ ಅಭ್ಯರ್ಥಿಗಳು ನೊಂದಣಿ ಮಾಡಿಕೊಳ್ಳಬಹುದು ನೋಂದಣಿ ಮಾಡಿಕೊಳ್ಳಲು ಜುಲೈ 17ರವರೆಗೆ ಕಾಲಾವಕಾಶ ನೀಡಲಾಗಿದೆ. ಈ ಪರೀಕ್ಷೆಗಳು ಆಗಸ್ಟ್‌ 2ರಿಂದ 9ರವರೆಗೆ ಕರ್ನಾಟಕದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ.

Karnataka Sslc Exam 3 Registration 2024
Karnataka Sslc Exam 3 Registration 2024

ಇದಲ್ಲದೆ 2022-23ನೇ ಸಾಲಿನಲ್ಲಿಯೂ ಅನುತ್ತೀರ್ಣರಾದ, 2023-24ನೇ ಸಾಲಿನ ಮೊದಲ ಹಾಗೂ ದ್ವಿತೀಯ ಪರೀಕ್ಷೆಗೆ ಹಾಜರಾಗದೆ ಇರುವ ವಿದ್ಯಾರ್ಥಿಗಳು, ಹಾಗೂ ಕಳೆದ ಎರಡು ಪರೀಕ್ಷೆಗಳಲ್ಲಿ ಸಮಾಧಾನಕರ ಅಂಕಗಳು ಬಾರದೇ ಇರುವ ವಿದ್ಯಾರ್ಥಿಗಳು ಇನ್ನೂ ಹೆಚ್ಚಿನ ಅಂಕ ಪಡೆಯಬೇಕು ಎನ್ನುವವರು ಈ ಮೂರನೇ ಪರೀಕ್ಷೆಯನ್ನು ತೆಗೆದುಕೊಳ್ಳಲು ಅವಕಾಶವಿದೆ.

Important Dates of Karnataka SSLC Exam 3 Registration 2024

  • ಪರೀಕ್ಷೆಗೆ ನೋಂದಣಿ ಪ್ರಾರಂಭ ದಿನಾಂಕ – ಜುಲೈ 10, 2024
  • ಪರೀಕ್ಷೆಗೆ ನೋಂದಾಯಿಸಿಕೊಳ್ಳಲು ಕೊನೆಯ ದಿನಾಂಕ – ಜುಲೈ 17, 2024
  • 3ನೇ ಪರೀಕ್ಷೆಯ ದಿನಾಂಕಗಳು – ಆಗಸ್ಟ್‌ 2 ರಿಂದ 9, 2024 ರವರೆಗೆ

ಪರೀಕ್ಷಾ ಶುಲ್ಕದ ವಿವರ:

ಒಂದು ವಿಷಯಕ್ಕೆ – ₹407/-
ಎರಡು ವಿಷಯಕ್ಕೆ – ₹507/-
ಮೂರು ಮತ್ತು ಮೂರಕ್ಕಿಂತ ಮೇಲ್ಪಟ್ಟ ವಿಷಯಗಳಿಗೆ – ₹682/-

How to Apply for SSLC Exam 3 Registration 2024

ಅರ್ಜಿ ಸಲ್ಲಿಕೆ ಹೇಗೆ…?: ಪರೀಕ್ಷೆಗೆ ನೋಂದಾಯಿಸಿಕೊಳ್ಳಲು ಇಚ್ಚಿಸುವ ವಿದ್ಯಾರ್ಥಿಗಳು ತಮ್ಮ ಪ್ರವೇಶ ಪತ್ರ, SSLC ರಿಜಿಸ್ಟರ್ ನಂಬರ್, ಎರಡು ಭಾವಚಿತ್ರಗಳೊಂದಿಗೆ ತಮ್ಮ ಶಾಲೆಯ ಮುಖ್ಯೋಪಾಧ್ಯಾಯರನ್ನು ಸಂಪರ್ಕಿಸಿ ಅರ್ಜಿಯನ್ನು ಪಡೆದು ಭರ್ತಿ ಮಾಡುವ ಮೂಲಕ ಸಲ್ಲಿಸಬಹುದು.

Important Direct Links:

SSLC Exam-3 Registration Circular PDFDownload
Official Websitekseab.karnataka.gov.in
More UpdatesKarnatakaHelp.in

Leave a Comment