ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ರಾಜ್ಯದ್ಯಂತ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕಾಗಿ ನಡೆಸಲಾಗುವ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ 2025 ಅನ್ನು ಏ.15ರಿಂದ 17 ರವರೆಗೆ ನಡೆಸಲಾಗಿತ್ತು. ಪ್ರಾಧಿಕಾರವು ಇದೀಗ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆ(KCET Clause B to O Document Verification 2025)ಗಾಗಿ ಹೊಸ ದಿನಾಂಕವನ್ನು ಪ್ರಕಟಿಸಿದೆ.
ಯುಜಿಸಿಇಟಿ 2025 ರ ಅರ್ಜಿ ನಮೂನೆಯಲ್ಲಿ ಕ್ಲಾಸ್ ಕೋಡ್ ಬಿ. ಸಿ. ಡಿ. ಇ. ಎಫ್, ಜಿ, ಹೆಚ್, ಐ, ಜೆ, ಕೆ. ಎಲ್. ಎಮ್. ಎನ್ ಮತ್ತು ಓ, ಝಡ್ ಗಳನ್ನು ಕ್ಷೇಮ್ ಮಾಡಿರುವ ಅಭ್ಯರ್ಥಿಗಳಿಗೆ ದಾಖಲೆಗಳ ಪರಿಶೀಲನೆಯನ್ನು ಮೇ 5 ರಿಂದ 15 ನಡೆಸಲಾಗಿತ್ತು. ಕಾರಣಾಂತರಗಳಿಂದ ಹಾಜರಾಗದ ಅಭ್ಯರ್ಥಿಗಳಿಗಾಗಿ ಮತ್ತೊಮ್ಮೆ ಅವಕಾಶ ಕಲ್ಪಿಸಲಾಗಿದೆ. ದಾಖಲೆ ಪರಿಶೀಲನೆಯ ಪ್ರಮುಖ ದಿನಾಂಕ ಹಾಗೂ ಇತರೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ ತಪ್ಪದೇ ಕೊನೆಯವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.
ದಿನಾಂಕ 16-05-2025 ರಿಂದ 20-05-2025 ರವರೆಗೆ ದಾಖಲಾತಿ ಪರಿಶೀಲನೆಯನ್ನು ನಡೆಸಲಾಗುತ್ತದೆ.
ದಾಖಲಾತಿ ಪರಿಶೀಲನೆಗೆ ಬರುವ ಮೊದಲು ಅಭ್ಯರ್ಥಿಗಳು ಪ್ರಾಧಿಕಾರದ ವೆಬ್ ಸೈಟ್ ನಲ್ಲಿ ನೀಡಿರುವ ಲಿಂಕ್ ನಲ್ಲಿ ಸ್ಪಾಟ್ ಅನ್ನು ಬುಕ್ ಮಾಡಿಕೊಳ್ಳಬೇಕು. ನಂತರ ಬುಕ್ ಮಾಡಿ ನಿಗದಿಪಡಿಸಿಕೊಳ್ಳುವ ದಿನದಂದೇ ಪರಿಶೀಲನೆಗೆ ಹಾಜರಾಗಬೇಕು.
ದಾಖಲೆಗಳ ಪರಿಶೀಲನೆಯನ್ನು ನಡೆಸಲಾಗುವ ಸ್ಥಳ:
ಕರ್ನಾಟಕ ಪರೀಕ್ಷಾ ಪ್ರಾಧಿಕಾರ 18ನೇ ಕ್ರಾಸ್, ಮಲ್ಲೇಶ್ವರಂ, ಸಂಪಿಗೆ ರಸ್ತೆ, ಬೆಂಗಳೂರು-560 012* ಇಲ್ಲಿ ನಡೆಸಲಾಗುವುದು.
ಅಭ್ಯರ್ಥಿಗಳು ದಾಖಲೆ ಪರಿಶೀಲನೆಗೆ ಖುದ್ದಾಗಿ ಹಾಜರಾಗಬೇಕು.
ದಾಖಲೆ ಪರಿಶೀಲನೆಗೆ ಕೊಂಡೊಯ್ಯಬೇಕಾದ ಪ್ರಮುಖ ದಾಖಲೆಗಳು:
CET-2025 ಪ್ರವೇಶ ಪತ್ರ
KEA UGCET-2025 ಆನ್‌ಲೈನ್ ಅರ್ಜಿ ನಮೂನೆ (ಇತ್ತೀಚಿನ ಪ್ರತಿ)
ಫೋಟೋ ಗುರುತಿನ ಪುರಾವೆ (ಆಧಾರ್ / ಪ್ಯಾನ್ ಕಾರ್ಡ್ ) ಜೆರಾಕ್ಸ್ ಪ್ರತಿ.
ಅಭ್ಯರ್ಥಿಯ SSLC / 10 ನೇ ತರಗತಿಯ ಅಂಕಪಟ್ಟಿ
2 ನೇ ಪಿಯುಸಿ / 12 ನೇ ತರಗತಿಯ ಅಭ್ಯರ್ಥಿಯ ಅಂಕಪಟ್ಟಿ • ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ಇತ್ಯಾದಿ ಪ್ರಮುಖ ದಾಖಲಾತಿಗಳು.
ಅರ್ಜಿ ನಮೂನೆಯಲ್ಲಿ ಕ್ಲಾಸ್ ಕೋಡ್ ಬಿ. ಸಿ. ಡಿ. ಇ. ಎಫ್, ಜಿ, ಹೆಚ್, ಐ, ಜೆ, ಕೆ. ಎಲ್. ಎಮ್. ಎನ್ ಮತ್ತು ಓ ಗಳನ್ನು ಕ್ಷೇಮ್ ಮಾಡಿರುವ ಅಭ್ಯರ್ಥಿಗಳಿಗೆ ದಾಖಲೆ ಪರಿಶೀಲನೆಗೆ ಸಲ್ಲಿಸಬೇಕಾದ ಮೂಲ ದಾಖಲೆಗಳ ವಿವರಗಳನ್ನು ಪ್ರಾಧಿಕಾರದ ವೆಬ್ ಸೈಟ್ cetonline.karnataka.gov.in ನಲ್ಲಿ ಪ್ರಚುರಪಡಿಸಿರುವ ಇ-ಮಾಹಿತಿ ಪುಸ್ತಕದಲ್ಲಿ ನೀಡಲಾಗಿದ್ದು, ಅಭ್ಯರ್ಥಿಗಳು ಆಯಾ ಕ್ಲಾಸ್ ಕೋಡ್ ಕ್ಲೇಮ್ ಗೆ ಅಗತ್ಯವಿರುವ ದಾಖಲಾತಿಗಳನ್ನು ತೆಗೆದುಕೊಂಡು ಹೋಗಬೇಕು.
ಎಲ್ಲಕ್ಕಿಂತ ಹೆಚ್ಚಾಗಿ ಮೂಲ ಪ್ರತಿಗಳು ಹಾಗೂ 1 ಸೆಟ್ ಜೆರಾಕ್ಸ್ ಪ್ರತಿಗಳೊಂದಿಗೆ ದಾಖಲಾತಿ ಪರಿಶೀಲನೆಗೆ ಹಾಜರಾಗಲು ತಿಳಿಸಿದೆ.
ವಿಶೇಷ ಸೂಚನೆ:
ಕ್ಲಾಸ್ A ಅಭ್ಯರ್ಥಿಗಳು ಕೈಮ್ ಸರ್ಟಿಫಿಕೇಟ ನಲ್ಲಿ ಸೂಚಿಸಿರುವಂತೆ ಪರಿಶೀಲನೆಯನ್ನು ಅಗತ್ಯವಿದ್ದಲ್ಲಿ ಆಯಾ ಕಾಲೇಜಿನಲ್ಲಿ ಪರಿಶೀಲನೆ ಮಾಡಿಕೊಳ್ಳಲು ಸೂಚಿಸಲಾಗಿದೆ.
Important Direct Links:
KCET Clause B to O Document Verification 2025 Last Date Extended Notice PDF