WhatsApp Channel Join Now
Telegram Group Join Now

PSI Exam Hall Ticket 2024(OUT): ಪಿಎಸ್ಐ ಪರೀಕ್ಷೆಯ ಪ್ರವೇಶ ಪತ್ರ ಬಿಡುಗಡೆ!

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕರ್ನಾಟಕ ಪೊಲೀಸ್ ಇಲಾಖೆಯ ನಾಗರಿಕ ಪೊಲೀಸ್ ಹುದ್ದೆಗಳಿಗೆ ಸಂಬಂಧಿಸಿದ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆಯನ್ನು ನಡೆಸುತ್ತಿದ್ದು, ಈ ಪರೀಕ್ಷೆಗೆ ಸಂಬಂಧಿಸಿದ ಪ್ರವೇಶ ಪತ್ರಗಳನ್ನು ಪ್ರಾಧಿಕಾರವು ತನ್ನ ವೆಬ್ ಸೈಟ್ ನಲ್ಲಿ ಇಂದು ಪ್ರಕಟಿಸಿದೆ.

ಪೊಲೀಸ್ ಇಲಾಖೆಯು ನಾಗರಿಕ ಪೊಲೀಸ್(PSI) ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಒಟ್ಟು 402 ಹುದ್ದೆಗಳ ನೇಮಕಾತಿಗೆ ಲಿಖಿತ ಪರೀಕ್ಷೆಯನ್ನು ನಡೆಸುತ್ತಿದೆ. ಅಕ್ಟೋಬರ್ 03ರಂದು ರಾಜ್ಯಾದ್ಯಂತ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಯು ನಡೆಯಲಿದೆ. ಅಂದು ಪತ್ರಿಕೆ-1 ಬೆಳಗ್ಗೆ 10:30 ರಿಂದ 12 ಗಂಟೆವರೆಗೆ 50 ಅಂಕಗಳಿಗೆ‌ ನಡೆಯಲಿದೆ. ನಂತರ ಪರೀಕ್ಷೆ-2 12:30 ರಿಂದ ಎರಡು ಗಂಟೆವರೆಗೆ 150 ಅಂಕಗಳಿಗೆ ಪರೀಕ್ಷೆ ನಡೆಸಲಾಗುತ್ತದೆ. ಈ ಪರೀಕ್ಷೆಗೆ ಪ್ರವೇಶ ಪತ್ರವು ಕಡ್ಡಾಯವಾಗಿದ್ದು, ಪ್ರವೇಶ ಪತ್ರದಲ್ಲಿ ಪರೀಕ್ಷಾ ಕೇಂದ್ರಗಳು ಮತ್ತು ಅಭ್ಯರ್ಥಿಗಳ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಪ್ರವೇಶ ಪತ್ರದಲ್ಲಿ ನೀಡಲಾಗಿರುವ ಎಲ್ಲಾ ಸೂಚನೆಗಳನ್ನು ಪರೀಕ್ಷಾ ಕೊಠಡಿಯಲ್ಲಿ ಅಭ್ಯರ್ಥಿಗಳು ಕಡ್ಡಾಯವಾಗಿ ಪಾಲಿಸಬೇಕು.

ಪರೀಕ್ಷೆಗೆ ನೋಂದಾಯಿಸಿಕೊಂಡಿರುವ ಅಭ್ಯರ್ಥಿಗಳು ಪೊಲೀಸ್ ಇಲಾಖೆಯ ನಾಗರಿಕ ಪೊಲೀಸ್ ಲಿಖಿತ ಪರೀಕ್ಷೆಯ ಪ್ರವೇಶ ಪತ್ರವನ್ನು ಪಡೆದುಕೊಳ್ಳಲು ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ ಸೈಟ್ cetonline.karnataka.gov.in ಭೇಟಿ ನೀಡಿ, ಲಾಗಿನ್ ವಿವರಗಳನ್ನು ನಮೂದಿಸುವ ಮೂಲಕ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳ ಬಹುದು.

ಪರೀಕ್ಷೆಯ ಪ್ರಮುಖ ದಿನಾಂಕ ಮತ್ತು ಸಮಯ:

ಅಕ್ಟೋಬರ್ 03, 2024 ರಂದು ಪರೀಕ್ಷೆ ನಡೆಯಲಿದೆ.

  • ಪತ್ರಿಕೆ -1ರ ಸಮಯ – ಬೆಳ್ಳಗೆ 10.30 ರಿಂದ ಮಧ್ಯಾಹ್ನ 12.00 ರವರೆಗೆ
  • ಪತ್ರಿಕೆ -2 ರ ಸಮಯ – ಮಧ್ಯಾಹ್ನ 12.30 ರಿಂದ ಸಂಜೆ 2.00 ರವರೆಗೆ

How to Download KEA PSI Exam Hall Ticket 2024

ಅನ್ ಲೈನ್ ಮೂಲಕ ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡುವುದು ಹೇಗೆ…?

  • ಮೊದಲಿಗೆ ಅಧಿಕೃತ ‌ವೆಬ್ ಸೈಟ್ cetonline.karnataka.gov.in ಗೆ ನೀಡಿ.
  • ಮುಖಪುಟದಲ್ಲಿ ಕಾಣುವ ನೇಮಕಾತಿ ವಿಭಾಗಕ್ಕೆ ಕ್ಲಿಕ್ ಮಾಡಿ.
  • ನಂತರ ‘ಪಿಎಸ್ಐ ನೇಮಕಾತಿ 2024’ ಆಯ್ಕೆ ಮಾಡಿ.
  • ಅಲ್ಲಿ ‘Hall Ticket Download Link’ ಲಿಂಕ್ ಕ್ಲಿಕ್
  • ಅರ್ಜಿ ಸಂಖ್ಯೆ ಮತ್ತು ಅಭ್ಯರ್ಥಿಯ ಮೊದಲ ನಾಲ್ಕು ಅಕ್ಷರಗಳನ್ನು ನಮೂದಿಸಿ.
  • ಪ್ರವೇಶ ಪತ್ರದ PDF ತೆರೆದುಕೊಳ್ಳುತ್ತೇದೆ, ಅದನ್ನು ಪ್ರಿಂಟ್ ಮಾಡಿ ಉಳಿಸಿಕೊಳ್ಳಿ.

Important Direct Links:

KEA PSI Exam Hall Ticket 2024 Download LinkClick Here
PSI Exam Dress Code PDFDownload
PSI Paper-1 Bell Timing PDFDownload
PSI Paper-2 Bell Timing PDFDownload
Official WebsiteKea.Kar.Nic.in
More UpdatesKarnataka Help.in

Leave a Comment