ಕರ್ನಾಟಕ ಲೋಕಸೇವಾ ಆಯೋಗವು ನಡೆಸಿದ್ದ ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳ ಪ್ರಿಲಿಮ್ಸ್ ಪರೀಕ್ಷೆಯನ್ನು ಮರು ಪರೀಕ್ಷೆ ಮಾಡಲು ಅಯೋಗ ತಯಾರಿ ನಡೆಸುತ್ತೇದೆ. ಮುಂದಿನ ಎರಡು ತಿಂಗಳ ಒಳಗೆ ಪರೀಕ್ಷೆಯನ್ನು ನಡೆಸಲಾಗುತ್ತದೆ, ಶೀಘ್ರದಲ್ಲೇ ಆಯೋಗವು ಪರೀಕ್ಷೆಯ ದಿನಾಂಕವನ್ನು ಪ್ರಕಟಿಸಲಿದೆ.
ನಡೆದ ಪ್ರಿಲಿಮ್ಸ್ ಪರೀಕ್ಷೆಯ ಅರ್ಧಕ್ಕು ಹೆಚ್ಚು ಪ್ರಶ್ನೆಗಳ ಕನ್ನಡ ಅನುವಾದಲ್ಲಿ ಹಲವು ಲೋಪದೋಷಗಳು ಕಂಡು ಬಂದ ಕಾರಣ ಅನೇಕ ಅಭ್ಯರ್ಥಿಗಳು ಅಕ್ರೋಶ ವ್ಯಕಪಡಿಸಿದ್ದಾರು. ಈ ಕಾರಣ ಮುಖ್ಯ ಮಂತ್ರಿ ಸಿದ್ದರಾಮಯ್ಯ ಮರು ಪರೀಕ್ಷೆ ಮಾಡಲು ಅಯೋಗಕ್ಕೆ ಸೂಚನೆ ನೀಡಿದ್ದಾರೆ.
ಕರ್ನಾಟಕದ ಲೋಕಸೇವಾ ಆಯೋಗವು ಆಗಸ್ಟ್ 27 ಇಂದು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ, 214 ಸರ್ಕಾರಿ, 189 ಅನುದಾನಿತ ಹಾಗೂ 161 ಖಾಸಗಿ ಶಾಲಾ- ಕಾಲೇಜುಗಳು ಸೇರಿ ಒಟ್ಟು 564 ಕೇಂದ್ರಗಳಲ್ಲಿ ಪೂರ್ವಭಾವಿ ಪರೀಕ್ಷೆಯನ್ನು ನಡೆಸಲಾಗಿತ್ತು. ಈ ಪರೀಕ್ಷೆಯನ್ನು ಗೆಜೆಟೆಡ್ ಪ್ರೊಬೇಷನರ್ ಗ್ರೂಪ್ ‘ಎ’ ಮತ್ತು ‘ಬಿ’ ವೃಂದದ ಒಟ್ಟು 384 ಹುದ್ದೆಗಳ ನೇಮಕಾತಿಗಾಗಿ ಪರೀಕ್ಷೆ ಮಾಡಲಾಗಿತ್ತು.
ಪರೀಕ್ಷೆಗೆ ಹಾಜಾರದ ಅಭ್ಯರ್ಥಿಗಳು ಪ್ರಿಲಿಮ್ಸ್ ಪರೀಕ್ಷೆಯ ಅರ್ಧಕ್ಕು ಹೆಚ್ಚು ಪ್ರಶ್ನೆಗಳ ಕನ್ನಡ ಅನುವಾದಲ್ಲಿ ಹಲವು ಲೋಪದೋಷಗಳು ಕಂಡುಬಂದಿದೆ ಎಂದು ದೂರು ಸಲ್ಲಿಸಿ ಮರು ಪರೀಕ್ಷೆಗೆ ಆಗ್ರಹಿಸಿದ್ದರು. ಈ ಹಿನ್ನಲೆಯಲ್ಲಿ ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಟ್ವೀಟ್ ಮೂಲಕ ಮುಂದಿನ 2 ತಿಂಗಳಲ್ಲಿ ಮರು ಪರೀಕ್ಷೆಗೆ ಸೂಚನೆ ನೀಡಿದ್ದಾರೆ. ಅದರೆ ಕರ್ನಾಟಕ ಲೋಕಸೇವಾ ಆಯೋಗವು ಅಧಿಕೃತವಾಗಿ ಪರೀಕ್ಷೆಯ ದಿನಾಂಕವನ್ನು ಪ್ರಕಟಿಸಬೇಕಾಗಿದೆ.