KSET Online Application Form 2024: ಕರ್ನಾಟಕ ಹೆಲ್ಪ್ ನ ಓದುಗರಿಗೆ ವಂದನೆಗಳು, ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ- 2024 (Karnataka State Eligibility Test- 2024) ಪರೀಕ್ಷೆಯ ಸಲುವಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಜುಲೈ 30, 2024 ರಿಂದ ಪ್ರಾರಂಭವಾಗಿದೆ. ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಏನಿದು ಕೆಸೆಟ್ ಪರೀಕ್ಷೆ? ಈ ಪರೀಕ್ಷೆ ಬರೆದರೆ ಏನು ಉಪಯೋಗ ?: ಕೆಸೆಟ್ ಪರೀಕ್ಷೆಯು ಒಟ್ಟು ವಿಷಯಗಳ ಕುರಿತು ನಡೆಯಲಿದ್ದು, ಈ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು, ಕರ್ನಾಟಕ ರಾಜ್ಯದ ಯಾವುದೇ ವಿಶ್ವವಿದ್ಯಾನಿಲಯ / ಪ್ರಥಮ ದರ್ಜೆ ಪದವಿ ಕಾಲೇಜು | ಉನ್ನತ ಶಿಕ್ಷಣ ಸಂಸ್ಥೆ (ಸರ್ಕಾರಿ, ಅನುದಾನಿತ ಮತ್ತು ಖಾಸಗಿ) ಗಳಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ನೇಮಕಗೊಳ್ಳಲು ಅರ್ಹರಾಗಿರುತ್ತಾರೆ ಹಾಗೂ ಆಯಾ ಸಂಸ್ಥೆಗಳ ನಿಯಮ ಮತ್ತು ಕಾಯ್ದೆಗಳಿಗೆ ಒಳಪಟ್ಟಿರುತ್ತಾರೆ. ಈ ಪರೀಕ್ಷೆಗೆ ಸಂಬಂದಿಸಿದ ಎಲ್ಲಾ ಮಾಹಿತಿಯನ್ನ ಕೆಳಗೆ ನೀಡಲಾಗಿದೆ.
ಶೈಕ್ಷಣೈಕ ಅರ್ಹತೆ: ಸ್ನಾತಕೋತ್ತರ ಪದವಿ ಪಡೆದವರು ಹಾಗೂ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ (ಪ್ರಥಮ ಮತ್ತು ದ್ವಿತೀಯ) ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಕೆಸೆಟ್ ಪರೀಕ್ಷೆಯನ್ನು ತೆಗೆದುಕೊಳ್ಳಲು ಅರ್ಹರಾಗಿರುತ್ತಾರೆ.
KSET 2024 MaximumAge Limit:
ಅಭ್ಯರ್ಥಿಗಳೇ, ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ ತೆಗೆದುಕೊಳ್ಳಲು ಗರಿಷ್ಟ ವಯೋಮಿತಿ ಇರುವುದಿಲ್ಲ.
KSET Online Application Fee 2024 Details:
ಸಾಮಾನ್ಯ ವರ್ಗ, ಪ್ರವರ್ಗ II-A, II-B, III-A, III-B ಹಾಗೂ ಇತರೆ ರಾಜ್ಯದ ಅಭ್ಯರ್ಥಿಗಳಿಗೆ ರೂ.1,000 ಪ್ರವರ್ಗ- I, SC, ST, PWD ಮತ್ತು ತೃತೀಯ ಲಿಂಗ ಅಭ್ಯರ್ಥಿಗಳಿಗೆ ರೂ.700
K-SET Exam Time Table 2024
ದಿನಾಂಕ
ಪತ್ರಿಕೆಗಳು
ಒಟ್ಟು ಅಂಕಗಳು
ಪ್ರಶ್ನೆಗಳ ಸಂಖ್ಯೆಗಳು
ಪರೀಕ್ಷಾ ಅವಧಿ
24-11-2024
ಪತ್ರಿಕೆ – I
100
50 ಪ್ರಶ್ನೆಗಳು ಕಡ್ಡಾಯವಾಗಿರುತ್ತವೆ
3 ಗಂಟೆ
ಪತ್ರಿಕೆ – II
200
100 ಪ್ರಶ್ನೆಗಳು ಕಡ್ಡಾಯವಾಗಿರುತ್ತವೆ
(ಬೆಳ್ಳಿಗ್ಗೆ 10 ರಿಂದ ಮಧ್ಯಾಹ್ನ 1 ವರೆಗೆ)
ಶುಲ್ಕ ಪಾವತಿಸುವ ವಿಧಾನ:
ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕು. ಶುಲ್ಕ ವಿನಾಯಿತಿಯನ್ನು ಪ್ರವರ್ಗ-I, SC, ST, ತೃತೀಯ ಲಿಂಗ ಮತ್ತು ವಿಕಲಚೇತನರ (Medical Certificate with 40% or more disability) ಹೊಂದಿರುವ ಅಭ್ಯರ್ಥಿಗಳಿಗೆ ನೀಡಲಾಗುತ್ತದೆ.
How to Apply for KSET 2024 Notification
ಕೆಸೆಟ್ 2024ಕ್ಕೆ ಪರೀಕ್ಷೆ ಬರೆಯಲು ಬಯಸುವ ಅಭ್ಯರ್ಥಿಗಳು ಆನ್ ಲೈನ್ ಅರ್ಜಿ ಸಲ್ಲಿಸಲು ನಾವು ಕೆಳಗೆ ನೀಡಲಾದ ಲಿಂಕ್ ಕ್ಲಿಕ್ ಮಾಡುವ ಮೂಲಕ ಅಥವಾ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಿ.
ಮೊದಲು ಅಧಿಕೃತ ವೆಬ್ ಸೈಟ್(Kea.Kar.Nic.In) ಗೆ ಭೇಟಿ ನೀಡಿ
ನಂತರ “ಇತ್ತೀಚಿನ ಪ್ರಕಟಣೆಗಳು” ಸೆಕ್ಷನ್ ನಲ್ಲಿ “KSET Online Application 2024 Apply” ಕ್ಲಿಕ್ ಮಾಡಿ.
ಅಲ್ಲಿ ಕೇಳಲಾದ ಮಾಹಿತಿಯನ್ನ ಭರ್ತಿ ಮಾಡಿ ಹಾಗೂ ಅಲ್ಲಿ ಕೇಳಲಾದ ದಾಖಲಾತಿಗಳನ್ನ ಅಪ್ಲೋಡ್ ಮಾಡಿ.
ಕೊನೆಗೆ ಅರ್ಜಿ ಶುಲ್ಕ ಪಾವತಿಸಿ.
ನಂತರ ಪ್ರತಿಯನ್ನ ಪ್ರಿಂಟ್ ತೆಗೆದುಕೊಳ್ಳಿ
Important Direct Links:
KSET 2024 Online Application Last Date Extended Notice(Dated on 29/08/2024)