ಕರ್ನಾಟಕ 2024-25ನೇ ಸಾಲಿನ ನ್ಯಾಷನಲ್ ಮೀನ್ಸ್-ಕಮ್ ಮೆರಿಟ್ ವಿದ್ಯಾರ್ಥಿ ವೇತನ (NMMS)ಕ್ಕಾಗಿ ಕೆ.ಎಸ್.ಕ್ಯೂ.ಎ.ಎ.ಸಿಯು ಅರ್ಹ ವಿದ್ಯಾರ್ಥಿಗಳ ಆಯ್ಕೆಗಾಗಿ ಪರೀಕ್ಷೆಯನ್ನು ಫೆಬ್ರವರಿ 2 ರಂದು ನಡೆಸಲಾಗಿತ್ತು. ಸದರಿ NMMS ಪರೀಕ್ಷೆಯ ಫಲಿತಾಂಶ(NMMS Result 2025)ವನ್ನು ಬಿಡುಗಡೆ ಮಾಡಲಾಗಿದೆ.
ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತು ಪ್ರಸ್ತುತ ನ್ಯಾಷನಲ್ ಮೀನ್ಸ್-ಕಮ್ ಮೆರಿಟ್ ವಿದ್ಯಾರ್ಥಿ ವೇತನ (NMMS) ಫಲಿತಾಂಶವನ್ನು ಬಿಡುಗಡೆ ಮಾಡಿದ್ದು, ಅಭ್ಯರ್ಥಿಗಳು DSERT ನ ಅಧಿಕೃತ ವೆಬ್ಸೈಟ್ dsert.karnataka.gov.in ಮೂಲಕ ಫಲಿತಾಂಶವನ್ನು ವೀಕ್ಷಿಸಬಹುದು. ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ತಪ್ಪದೇ ಕೊನೆವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.
NMMS Result 2025 Karnataka
NMMS ವಿದ್ಯಾರ್ಥಿವೇತನ 2025: ಶಿಕ್ಷಣ ಸಚಿವಾಲಯದ ಕೇಂದ್ರ ಪ್ರಾಯೋಜಿತ ಉಪಕ್ರಮವಾದ NMMS ವಿದ್ಯಾರ್ಥಿವೇತನ ಯೋಜನೆಯು ಆರ್ಥಿಕವಾಗಿ ದುರ್ಬಲ ವರ್ಗಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅವರ ಶಿಕ್ಷಣವನ್ನು ಉತ್ತೇಜಿಸಲು ಹಾಗೂ ಆರ್ಥಿಕ ನೆರವನ್ನು ನೀಡಲಾಗುವ ಒಂದು ವಿದ್ಯಾರ್ಥಿ ವೇತನ ಕಾರ್ಯಕ್ರಮವಾಗಿದೆ.
ವಿದ್ಯಾರ್ಥಿಗಳೇ, ಫಲಿತಾಂಶವಿರುವ ಪಿಡಿಎಫ್ ಅನ್ನು ಲೇಖನದ ಕೊಯೆಯಲ್ಲಿ “Important Direct Links” ಶೀರ್ಷಿಕೆಯಡಿಯಲ್ಲಿ ನೀಡಲಾಗಿದೆ.
ಫಲಿತಾಂಶಗಳನ್ನು ಜಿಲ್ಲಾವಾರು ಪ್ರತಿಭಾನ್ವಿತ ಪಟ್ಟಿಯ ರೂಪದಲ್ಲಿ ಪ್ರಕಟಿಸಲಾಗಿದ್ದು, ವಿದ್ಯಾರ್ಥಿಗಳ ಹೆಸರು, ನೋಂದಣಿ ಸಂಖ್ಯೆ, ಮಾನಸಿಕ ಸಾಮರ್ಥ್ಯ ಪರೀಕ್ಷೆ (MAT) ಮತ್ತು ಸ್ಕಾಲಸ್ಟಿಕ್ ಆಪ್ಟಿಟ್ಯೂಡ್ ಟೆಸ್ಟ್ (SAT) ನ ಅಂಕಗಳು ಹಾಗೂ ಅವರು ಗಳಿಸಿದಒಟ್ಟು ಅಂಕಗಳನ್ನು ನೀಡಲಾಗಿದೆ.
ವಿದ್ಯಾರ್ಥಿ ವೇತನದ ಅರ್ಹತೆ ಪಡೆಯಲು ಗಳಿಸಬೇಕಾದ ಅಂಕಗಳು:
ವಿದ್ಯಾರ್ಥಿ ವೇತನದ ಅರ್ಹತೆ ಪಡೆಯಲು ಪಡೆಯಲು ಸಾಮಾನ್ಯ ವರ್ಗದ ವಿದ್ಯಾರ್ಥಿಗಳು MAT ಮತ್ತು SAT ಎರಡರಲ್ಲೂ ಕನಿಷ್ಠ 40% ಅಂಕಗಳನ್ನು ಪಡೆಯಬೇಕು.
ಮೀಸಲು ವರ್ಗದ (SC/ST/PH) ವಿದ್ಯಾರ್ಥಿಗಳುಕನಿಷ್ಠ 32% ಅಂಕಗಳನ್ನು ಪಡೆಯಬೇಕು.
NMMS Scholarship Amount Karnataka 2025
ವಿದ್ಯಾರ್ಥಿ ವೇತನದ ಮೊತ್ತ: ಉತ್ತೀರ್ಣರಾದವರು ವಾರ್ಷಿಕವಾಗಿ 12,000 ರೂ. ಹಾಗೂ ಮಾಸಿಕ ರೂ. 1,000 ರೂ. ವಿದ್ಯಾರ್ಥಿವೇತನವನ್ನು ಪಡೆಯುತ್ತಾರೆ.
ಸಾರ್ವಜನಿಕ ಹಣಕಾಸು ನಿರ್ವಹಣಾ ವ್ಯವಸ್ಥೆ (PFMS) ಮೂಲಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಅವರ ಬ್ಯಾಂಕ್ ಖಾತೆಗಳಿಗೆ ವಿತರಿಸಲಾಗುತ್ತದೆ.
ಆಯ್ಕೆಯಾದ ವಿದ್ಯಾರ್ಥಿಗಳು ಬ್ಯಾಂಕ್ ಖಾತೆ ವಿವರಗಳು ಮತ್ತು ಇತರ ದಾಖಲಾತಿಗಳನ್ನು ಮುಂದಿನ ಪ್ರಕ್ರಿಯೆಗಾಗಿ ತಮ್ಮ ಶಾಲೆಗಳಿಗೆ ಸಲ್ಲಿಸಬೇಕಾಗುತ್ತದೆ.
How to Check NMMS Result 2025 Karnataka
NMMS ಫಲಿತಾಂಶವನ್ನು ನೋಡುವ ವಿಧಾನ;
- DSERT ನ ಅಧಿಕೃತ ವೆಬ್ಸೈಟ್ https://dsert.karnataka.gov.in/ ಗೆ ಭೇಟಿ ನೀಡಿ.
- ಮುಖಪುಟದ ಇತ್ತೀಚಿನ ಸುದ್ದಿಗಳು ವಿಭಾಗದಲ್ಲಿ
2024-25 ನೇ ಸಾಲಿನ NMMS ವಿದ್ಯಾರ್ಥಿವೇತನಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿ/ಅಂತಿಮ ಆಯ್ಕೆ ಪಟ್ಟಿ ಲಿಂಕ್ ಮೇಲೆ ಕ್ಲಿಕ್ ಮಾಡಿ. - ನಂತರ NMMS ಅಂಕಪಟ್ಟಿ /ಫಲಿತಾಂಶ ಲಿಂಕ್ ಮೇಲೆ ಟ್ಯಾಪ್ ಮಾಡಿ.
- ಅಂಕಪಟ್ಟಿ ಅಥವಾ ಫಲಿತಾಂಶ ಪಿಡಿಎಫ್ ರೂಪದಲ್ಲಿ ಲಭ್ಯವಿದ್ದು ವಿದ್ಯಾರ್ಥಿಗಳು ತಮ್ಮ ರೋಲ್ ನಂಬರ್ ಹಾಗೂ ಹೆಸರಿನ ಮೂಲಕ ರಾಂಕ್ ಅನ್ನು ಪರಿಶೀಲಿಸಿಕೊಳ್ಳಿ.
Important Direct Links:
NMMS Result 2025 Final Selection List PDF | Download |
Official Website | dsert.karnataka.gov.in |
More Updates | Karnataka Help.in |