PMAY 2.0 Apply Online: ಸ್ವಂತ ಮನೆ ನಿರ್ಮಿಸಲು ಸರ್ಕಾರದಿಂದ ಸಹಾಯಧನ!, ಅರ್ಜಿ ಸಲ್ಲಿಕೆ ಪ್ರಾರಂಭ

By ಕರ್ನಾಟಕ ಹೆಲ್ಪ್ ಡೆಸ್ಕ್

Published On:

IST

ಫಾಲೋ ಮಾಡಿ

PMAY 2.0 Apply Online 2025
PMAY 2.0 Apply Online 2025

ಪ್ರಧಾನಮಂತ್ರಿ ಆವಾಸ್ (ನಗರ) 2.0 ಯೋಜನೆಯಡಿ ವಸತಿ ರಹಿತ/ನಿವೇಶನ ರಹಿತ ಕುಟುಂಬಗಳಿಗೆ ವಸತಿ ಸೌಲಭ್ಯ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅರ್ಜಿ ಆಹ್ವಾನಿಸಲಾಗಿದೆ.

ಭಾರತ ಸರ್ಕಾರದ ಒಂದು ಯೋಜನೆಯಾಗಿದ್ದು, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಸತಿರಹಿತ ಮತ್ತು ಕಡಿಮೆ ಆದಾಯದ ಕುಟುಂಬಗಳಿಗೆ ಕೈಗೆಟುಕುವ ದರದಲ್ಲಿ ವಸತಿ ಸೌಲಭ್ಯ ಒದಗಿಸುತ್ತದೆ. ಪ್ರಧಾನ ಮಂತ್ರಿ ಆವಾಸ್ ನಗರ ಯೋಜನೆಯಡಿ ಬೇಡಿಕೆ ಸಮೀಕ್ಷೆಯ ವಿವರಗಳನ್ನು ನಮೂದಿಸಲು ಕೇಂದ್ರ ಸರ್ಕಾರವು Unified Web Portal ಆನ್‌ಲೈನ್ ವ್ಯವಸ್ಥೆಯನ್ನು ಮಾಡಿದ್ದು, ಸ್ವತಃ ಫಲಾನಭವಿಗಳು https://pmaymis.gov.in/ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಈ ಯೋಜನೆಯ ಕುರಿತಂತೆ ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು, ಅರ್ಹತಾ ಮಾನದಂಡ, ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ತಪ್ಪದೇ ಕೊನೆವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಈಗಾಗಲೇ ಪ್ರಾರಂಭವಾಗಿದೆ.
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 15-07-2025

ಯೋಜನೆಯ ಅರ್ಹತಾ ಮಾನದಂಡ:

  • ಮನೆಯ ಎಲ್ಲಾ ಸದಸ್ಯರ ವಾರ್ಷಿಕ ಆದಾಯ ಕನಿಷ್ಠ 3 ಲಕ್ಷದಿಂದ ಗರಿಷ್ಠ 18 ಲಕ್ಷದ ಒಳಗಿರಬೇಕು.
  • ಫಲಾನುಭವಿಯ ರೇಷನ್ ಕಾರ್ಡ್ ನಲ್ಲಿ ಇರುವ ಯಾರೊಬ್ಬ ಸದಸ್ಯರ ಹೆಸರಿನಲ್ಲಿ ಸ್ವಂತ ಮನೆ ಹೊಂದಿರಬಾರದು.
  • ಫಲಾನುಭವಿಯ ವಯಸ್ಸು 18 ವರ್ಷ ತುಂಬಿರಬೇಕು.
  • ನೀವು ಹೋಂ ಲೋನ್ ತೆಗೆದುಕೊಳ್ಳುವಾಗ PMAY ಅಡಿಯಲ್ಲಿ ಬ್ಯಾಂಕಿನಲ್ಲಿ ಲೋನ್ ಗೆ ಅಪ್ಲೇ ಮಾಡಿರಬೇಕು.

ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು:

  1. ಅರ್ಜಿದಾರರ ಆಧಾರ್ ಕಾರ್ಡ್, ಪಾಸ್ಪೋರ್ಟ್ ಸೈಜ್ ಫೋಟೋ, ಪ್ಯಾನ್ ಕಾರ್ಡ್
  2. ಕುಟುಂಬ ಸದಸ್ಯರ ಆಧಾರ್ ಕಾರ್ಡ್
  3. ಅರ್ಜಿದಾರರ ಬ್ಯಾಂಕ್ ಖಾತೆ ವಿವರಗಳು (ಆಧಾರ್‌ನೊಂದಿಗೆ ಲಿಂಕ್ ಆಗಿರುವ)
  4. ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  5. ಭೂ ದಾಖಲೆಗಳು

ಯೋಜನೆಯ ಪ್ರಯೋಜನಗಳು:

  • ಕೈಗೆಟುಕುವ ದರದಲ್ಲಿ ವಸತಿ ನಿರ್ಮಾಣ.
  • ಮನೆ ನಿರ್ಮಾಣ ಅಥವಾ ಖರೀದಿಗೆ ಸಹಾಯಧನ ನೀಡುವುದು.

ಅರ್ಜಿ ಸಲ್ಲಿಸುವ ವಿಧಾನ:

  • ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಧಿಕೃತ ವೆಬ್ಸೈಟ್ https://pmaymis.gov.in/ಗೆ ಭೇಟಿ ನೀಡಿ.
  • ಅಗತ್ಯ ದಾಖಲಾತಿಗಳನ್ನು ಸಲ್ಲಿಸುವ ಮೂಲಕ ಜುಲೈ 15 ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

Important Direct Links:

PMAY 2.0 Apply Online LinkApply Now
More UpdatesKarnataka Help.in
About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ, ನೆಚ್ಚಿನ ಸುದ್ದಿ ಮಾಧ್ಯಮವಾಗಿದೆ. ಇಲ್ಲಿ ದಿನ ನಿತ್ಯ ಶೈಕ್ಷಣಿಕ ಸುದ್ದಿಗಳ ನವೀಕರಣಗಳನ್ನು ಪಡೆಯುತ್ತೀರಿ.

Leave a Comment