ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯು ಶಿಕ್ಷಣ ಹಕ್ಕು ಕಾಯ್ದೆಯಡಿ ಕರ್ನಾಟಕ ರಾಜ್ಯಾದ್ಯಂತ ಖಾಸಗಿ ಶಾಲೆಗಳು, ಅನುದಾನ, ಅನುದಾನ ರಹಿತ ಶಾಲೆಗಳಲ್ಲಿ ಉಚಿತವಾಗಿ 2025-26ನೇ ಸಾಲಿಗೆ ಎಲ್ ಕೆಜಿ ಹಾಗೂ 1 ನೇ ತರಗತಿಗೆ ಪ್ರವೇಶಾತಿ ಪಡೆಯಲು ಆಸಕ್ತಿಯುಳ್ಳ ಪೋಷಕರಿಂದ RTE ಅಡಿ ಪ್ರವೇಶಕ್ಕೆ(RTE Application 2025-26 Karnataka) ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆಯು ಕರ್ನಾಟಕ ಆರ್‌ಟಿಇ ಯೋಜನೆಯಡಿ ಖಾಸಗಿ ಅನುದಾನಿತ ಅನುದಾನ, ಅನುದಾನ ರಹಿತ ಶಾಲೆಗಳಲ್ಲಿ ಎಲ್ ಕೆಜಿ ಹಾಗೂ 1ನೇ ತರಗತಿಗೆ ಸೇರಿಸಲು ಬಯಸುವ ಪೋಷಕರು ಕರ್ನಾಟಕ ಸರ್ಕಾರದ ಅಧಿಕೃತ ವೆಬ್ ಸೈಟ್ schooleducation.karnataka.gov.in ಅಥವಾ ಆಫ್ ಲೈನ್ ಮುಖಾಂತರವೂ ಅರ್ಜಿ ಸಲ್ಲಿಸಬಹುದು.
ಆಯ್ಕೆಯಾದ ವಿದ್ಯಾರ್ಥಿಗಳಿಗೆ ಈ ಯೋಜನೆಯಡಿ ಉಚಿತ ಹಾಗೂ ಆಧುನಿಕ ಶಿಕ್ಷಣವನ್ನು ನೀಡಲಾಗುತ್ತದೆ. ಪೋಷಕರು ತಮ್ಮ ಸುತ್ತಮುತ್ತಲಿನ ಖಾಸಗಿ ಅನುದಾನಿತ ಶಾಲೆಯಲ್ಲಿ ತಮ್ಮ ಮಕ್ಕಳನ್ನು ಸೇರಿಸಲು ಬಯಸಿದ್ದಲ್ಲಿ ನೋಂದಣಿ ಮಾಡಬಹುದು. ಆಯ್ಕೆಯಾದ ವಿದ್ಯಾರ್ಥಿಗೆ ಮಂಡಳಿಯು ಎಲ್‌ಕೆಜಿಯಿಂದ 8ನೇ ತರಗತಿಯವರೆಗೆ ಉಚಿತ ಶಿಕ್ಷಣವನ್ನು ನೀಡುತ್ತದೆ. ಈ ಲೇಖನದಲ್ಲಿ ಸದರಿ ಯೋಜನೆ ಅರ್ಜಿ ಸಲ್ಲಿಸುವುದು ಹೇಗೆ, ವಯಸ್ಸಿನ ಮಿತಿ, ಪ್ರಮುಖ ದಿನಾಂಕಗಳು ಹಾಗೂ ಇತರೆ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ ತಪ್ಪದೇ ಕೊನೆವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
•ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – 15-04-2025
•ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 12-05-2025
ವಯೋಮಿತಿ:
- ಎಲ್ ಕೆ ಜಿ ಗೆ ಪ್ರವೇಶ ಪಡೆಯುವ ಮಕ್ಕಳಿಗೆ ಕನಿಷ್ಠ – 4 ವರ್ಷ ಹಾಗೂ ಗರಿಷ್ಠ – 6 ವರ್ಷ
- 1 ನೇ ತರಗತಿಗೆ ಪ್ರವೇಶ ಪಡೆಯುವ ಮಕ್ಕಳಿಗೆ ಕನಿಷ್ಠ 6 ವರ್ಷ ಹಾಗೂ ಗರಿಷ್ಠ 8 ವರ್ಷ
ಆಯ್ಕೆ ಪ್ರಕ್ರಿಯೆ:
ಕರ್ನಾಟಕ ರಾಜ್ಯದಲ್ಲಿ ಆರ್‌ಟಿಇ ಪ್ರವೇಶಕ್ಕೆ ಆಯ್ಕೆ ಪ್ರಕ್ರಿಯೆಯನ್ನು ಲಾಟರಿ ವ್ಯವಸ್ಥೆಯ ಮೂಲಕ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು:
• ಮಗು ಮತ್ತು ತಂದೆ ಅಥವಾ ತಾಯಿಯ ಆಧಾರ್ ಕಾರ್ಡ್.
• ಜಾತಿ ಮತ್ತು ಆದಾಯ ದೃಢೀಕರಣ ಪತ್ರ ಕಡ್ಡಾಯ.
• ವಾಸಸ್ಥಳ ದೃಢೀಕರಣ ಪ್ರಮಾಣಪತ್ರ
• ಮೊಬೈಲ್ ನಂಬರ್
• ಇಮೇಲ್ ವಿಳಾಸ ಇತ್ಯಾದಿ
ಅರ್ಜಿ ಶುಲ್ಕ:
ಆರ್‌ಟಿಇ ಪ್ರವೇಶ ಅರ್ಜಿ ನಮೂನೆಗೆ ಯಾವುದೇ ಶುಲ್ಕವಿಲ್ಲ
ಅರ್ಜಿ ಸಲ್ಲಿಸುವುದು ಹೇಗೆ?
- ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಛೇರಿಗಳಲ್ಲಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗಳಲ್ಲಿ ಉಚಿತವಾಗಿ ಅರ್ಜಿ ಸಲ್ಲಿಸಬಹುದು.
- ಸರ್ಕಾರದ ಪಾವತಿ ಕೇಂದ್ರಗಳಾದ ಬೆಂಗಳೂರು ನಗರದಲ್ಲಿ, ಬೆಂಗಳೂರು-ಒನ್, ಇತರೆ ನಗರ ಪ್ರದೇಶಗಳಲ್ಲಿ ಕರ್ನಾಟಕ-ಒನ್, ತಾಲ್ಲೂಕು ಮತ್ತು ಹೋಬಳಿ ಮಟ್ಟದಲ್ಲಿ ಅಟಲ್‌ಜೀ ಜನಸ್ನೇಹಿ ಕೇಂದ್ರಗಳ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
- ತಂದೆ / ತಾಯಿ / ಪಾಲಕರು ಸ್ವಂತ ಮೊಬೈಲ್ ಫೋನ್ ಮತ್ತು ಇಂಟರ್‌ನೆಟ್ ಸೌಲಭ್ಯ ಲಭ್ಯವಿದ್ದಲ್ಲಿ ಆನ್‌ಲೈನ್ ಮುಖಾಂತರ ನೇರವಾಗಿ ಅರ್ಜಿ ಹಾಕಬಹುದು.
- ಪೋಷಕರು ಸಲ್ಲಿಸಿದ ಅರ್ಜಿಯಿಂದ ನೈಜತೆ ತಾಳೆ ಆಗದ ಅಪೂರ್ಣ ಅಥವಾ ಕ್ರಮಬದ್ಧವಲ್ಲದ ಅರ್ಜಿಗಳ ತಂದೆ / ತಾಯಿ ಪೋಷಕರ ಮೊಬೈಲಿಗೆ ದೋಷಗಳನ್ನು ಸರಿಪಡಿಸಲು ಎಸ್‌ಎಂಎಸ್ ಕಳುಹಿಸಲಾಗುವುದು. ಸಂಬಂಧಿಸಿದ ಪೋಷಕರು ಸಕಾಲಕ್ಕೆ ಪ್ರತಿಕ್ರಿಯಿಸಬೇಕಾಗುತ್ತದೆ.
How to Apply Online for RTE Admission 2025-26
ಆನ್ ಲೈನ್ ಮುಖಾಂತರ ಅರ್ಜಿ ಸಲ್ಲಿಸುವ ವಿಧಾನ;
- ಕರ್ನಾಟಕ ಶಾಲಾ ಶಿಕ್ಷಣದ ಅಧಿಕೃತ ವೆಬ್‌ಸೈಟ್‌ಗೆ https://schooleducation.karnataka.gov.in.
ನಂತರ ಮುಖಪುಟದಿಂದ ಆಡಳಿತ ವಿಭಾಗಕ್ಕೆ ಹೋಗಿ. - ಶಿಕ್ಷಣ ಹಕ್ಕು ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
- ನಂತರ ಆರ್‌ಟಿಇ ಪ್ರವೇಶ ಆಯ್ಕೆಯನ್ನು ಆರಿಸಿ
- RTE ಪ್ರವೇಶ 2025 26 ಲಿಂಕ್ ಅನ್ನು ಆಯ್ಕೆ ಮಾಡಿ.
- ಅರ್ಜಿ ನಮೂನೆ ಭರ್ತಿಮಾಡಿ ಪರಿಶೀಲಿಸಿ ಮತ್ತು ದಾಖಲೆಗಳನ್ನು ಅಪ್‌ಲೋಡ್ ಮಾಡಿ.
Important Direct Links:
RTE Admission 2025-26 Notification PDF | Download |
RTE Application Form 2025-26 Link | Apply Now |
Official Website | School Education |
More Updates | Karnataka Help.in |