ದಕ್ಷಿಣ ಮಧ್ಯ ರೈಲ್ವೆ(SCR)ಯು 2025-26ನೇ ಸಾಲಿಗೆ ಅಪ್ರೆಂಟಿಸ್ ಕಾಯ್ದೆಯಡಿ 2801 ಅಭ್ಯರ್ಥಿಗಳಿಗೆ ಅಪ್ರೆಂಟಿಸ್‌ಶಿಪ್ ತರಬೇತಿ ಒದಗಿಸಲಿದ್ದು, ರೈಲ್ವೆ ನೇಮಕಾತಿ ಕೋಶ ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.
ಎಸಿ ಮಶಿನಿಸ್ಟ್, ಕಾರ್ಪೆಂಟರ್, ಡೀಸೆಲ್ ಮೆಕಾನಿಕ್, ಎಲೆಕ್ಟ್ರಿಷಿಯನ್, ಎಲೆಕ್ಟ್ರಾನಿಕ್ ಮೆಕಾನಿಕ್ ಮತ್ತು ಫಿಟ್ಟರ್ ಸೇರಿದಂತೆ ಇತರೆ ಟ್ರೇಡ್‌ಗಳಿಗೆ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಂಡು, ತರಬೇತಿ ನೀಡಲಿದೆ. ಸಂಬಂಧಿತ ಟ್ರೇಡ್‌ನಲ್ಲಿ ಐಟಿಐ ಪ್ರಮಾಣ ಪತ್ರ ಹೊಂದಿರುವ ಬಾಲ್ಕಿ, ಬಳ್ಳಾರಿ, ಬೆಳಗಾವಿ, ಬೀದರ್, ಗುಲ್ಬರ್ಗ(ಕಲಬುರಗಿ), ರಾಯಚೂರು, ಯಾದಗಿರಿ ವ್ಯಾಪ್ತಿಗೆ ಒಳಪಡುವ ಆಸಕ್ತರು ನೋಂದಣಿಗಾಗಿ ಎಸ್‌ಸಿಆರ್ ಅಧಿಕೃತ ಜಾಲತಾಣ https://scr.onlineregister.org.in/homeಕ್ಕೆ ಭೇಟಿ ನೀಡಿ. ನೋಂದಣಿಗೆ ಏ.11 ಕೊನೆಯದಿನವಾಗಿದೆ.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆ ಆರಂಭದ ದಿನಾಂಕ – ಮಾರ್ಚ್ 12, 2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಏಪ್ರಿಲ್ 11, 2026
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ಮಂಡಳಿಯಿಂದ ಕನಿಷ್ಠ 50% ಅಂಕಗಳೊಂದಿಗೆ 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು ಹಾಗೂ ಸಂಬಂಧಿತ ಟ್ರೇಡ್ ನಲ್ಲಿ ಐಟಿಐ ಉತ್ತೀರ್ಣರಾದ ಪ್ರಮಾಣಪತ್ರವನ್ನು ಹೊಂದಿರಬೇಕು.
ವಯೋಮಿತಿ:
11-04-2026 ರಂತೆ ;
ಕನಿಷ್ಠ ಮಿತಿ 15 ವರ್ಷಗಳು
ಗರಿಷ್ಠ ಮಿತಿ 24 ವರ್ಷಗಳು
ವಯೋಮಿತಿ ಸಡಿಲಿಕೆ; ಪ.ಜಾತಿ, ಪ.ಪಂಗಡದ ಅಭ್ಯರ್ಥಿಗಳಿಗೆ 05 ವರ್ಷಗಳು, ಒಬಿಸಿ ಅಭ್ಯರ್ಥಿಗಳಿಗೆ 03 ವರ್ಷಗಳು, ಪಿಡಬ್ಲ್ಯೂಡಿ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ 10 ವರ್ಷಗಳು.
ಆಯ್ಕೆ ಪ್ರಕ್ರಿಯೆ:
- ಅರ್ಹ ಅಭ್ಯರ್ಥಿಗಳ ಮೆರಿಟ್ ಪಟ್ಟಿ
- ದಾಖಲೆ ಪರಿಶೀಲನೆ
- ವೈದ್ಯಕೀಯ ಪರೀಕ್ಷೆ
- ಅಂತಿಮ ಆಯ್ಕೆ
ಶಿಷ್ಯವೇತನ:
ಅಪ್ರೆಂಟಿಸ್ ಕಾಯ್ದೆಯ ನಿಯಮಗಳ ಪ್ರಕಾರ ಚಾಲ್ತಿಯಲ್ಲಿರುವ ದರದಲ್ಲಿ ಶಿಷ್ಯವೇತನವನ್ನು ಪ್ರತಿ ತಿಂಗಳು ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಸಾಮಾನ್ಯ, ಒಬಿಸಿ ಹಾಗೂ ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ – ₹100
ಪ.ಜಾತಿ, ಪ.ಪಂಗಡ, ಪಿಡಬ್ಲ್ಯೂಬಿಡಿ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ – ಶುಲ್ಕ ವಿನಾಯಿತಿ ನೀಡಲಾಗಿದೆ.
ಅರ್ಜಿ ಸಲ್ಲಿಸುವ ವಿಧಾನ:
• ಅಭ್ಯರ್ಥಿಗಳು SCR ಅಧಿಕೃತ ಜಾಲತಾಣ https://scr.onlineregister.org.in/home ಕ್ಕೆ ಭೇಟಿ ನೀಡಿ.
• ನಂತರ ನೋಂದಣಿ ಐಡಿ, ಪಾಸ್ವರ್ಡ್ ಹಾಗೂ ಕ್ಯಾಪ್ಚಾ ನಮೂದಿಸಿ ಲಾಗಿನ್ ಆಗಿ ಅಥವಾ ಹೊಸ ಬಳಕೆದಾರರಾಗಿದ್ದಲ್ಲಿ, ನೋಂದಾಯಿಸಿ.
• ಬಳಿಕ ಅರ್ಜಿ ನಮೂನೆಯಲ್ಲಿ ಕೇಳಲಾಗುವ ಮೂಲ ಮಾಹಿತಿಗಳು, ಭಾವಚಿತ್ರ, ಸಹಿ, ಶೈಕ್ಷಣಿಕ ವಿವರ ಹಾಗೂ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
• ನಂತರ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿ ಮಾಡಿ.
• ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಎಚ್ಚರಿಕೆಯಿಂದ ಪರಿಶೀಲಿಸಿ ಸಲ್ಲಿಸಿ.
• ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಪ್ರಿಂಟ್ ಔಟ್ ತೆಗೆದುಕೊಳ್ಳಿ.
Important Direct Links:
| Official Notification PDF | Download |
| Online Application Form Link | Apply Now |
| Official Website | scr.indianrailways.gov.in |
| More Updates | KarnatakaHelp.in |
Karantk.yadagere.mahesha call me