ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ ಒಟ್ಟು 600 ಪ್ರೊಬೇಷನರಿ ಅಧಿಕಾರಿ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆ(SBI PO Notification 2024) ಬಿಡುಗಡೆ ಮಾಡಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಎಸ್.ಬಿ.ಐ ಪ್ರೊಬೇಷನರಿ ಅಧಿಕಾರಿ ನೇಮಕಾತಿಗೆ ಅರ್ಜಿ ಸಲ್ಲಿಸಲು ಅಧಿಕೃತ ಜಾಲತಾಣದ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಬೇಕಾದ ವಿದ್ಯಾರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ ಹಾಗೂ ಪ್ರಮುಖ ದಿನಾಂಕಗಳು ಇತರೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ ಲೇಖನವನ್ನು ಕೊನೆವರೆಗೂ ಓದಿ. ನಿಮ್ಮ ಸ್ನೇಹಿತರಿಗೂ ತಪ್ಪದೇ ಶೇರ್ ಮಾಡಿ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ – ಡಿಸೆಂಬರ್ 27, 2024
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ – ಜನವರಿ 19, 2025(Extended)
ಶೈಕ್ಷಣಿಕ ಅರ್ಹತೆ:
ಎಸ್.ಬಿ.ಐ ಪಿಒ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ (Any Degree) ಪಡೆದಿರುವವರು ಅರ್ಜಿ ಸಲ್ಲಿಸಬಹುದಾಗಿದೆ.
ವಯೋಮಿತಿ:
ಅರ್ಜಿ ಸಲ್ಲಿಕೆ ವಯಸ್ಸಿನ ಮಿತಿಯು 01.04.2024ರಂತೆ ಕನಿಷ್ಠ- 21ವರ್ಷ ಮತ್ತು ಗರಿಷ್ಠ-30ವರ್ಷಗಳು.
ಆಯ್ಕೆ ಪ್ರಕ್ರಿಯೆ:
- ಹಂತ-I: ಪೂರ್ವಭಾವಿ ಪರೀಕ್ಷೆ
- ಹಂತ-II: ಮುಖ್ಯ ಪರೀಕ್ಷೆ
- ಹಂತ-III: (ಎ) ಸೈಕೋಮೆಟ್ರಿಕ್ ಪರೀಕ್ಷೆ (ಬಿ) ಗ್ರೂಪ್ ಎಕ್ಸರ್ಸೈಸ್ (ಸಿ) ವೈಯಕ್ತಿಕ ಸಂದರ್ಶನವನ್ನು ಒಳಗೊಂಡಿರುತ್ತದೆ
- ಅಂತಿಮ ಅರ್ಹತಾ ಪಟ್ಟಿ
ಸಂಬಳ:
ವೇತನ ಶ್ರೇಣಿ- ರೂ.48480-2000/7-62480-2340/2-67160-2680/7-85920
ಅರ್ಜಿ ಶುಲ್ಕ:
ಎಸ್‌ಸಿ/ಎಸ್‌ಟಿ/ಪಿಡಬ್ಲ್ಯೂಬಿಡಿ ಸೇರಿದ ಅಭ್ಯರ್ಥಿಗಳಿಗೆ – ಯಾವುದೇ ಅರ್ಜಿ ಶುಲ್ಕವಿಲ್ಲ.
ಉಳಿದ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ – ರೂ.750/-
How to Apply SBI PO Recruitment 2024
ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ;
- ಮೊದಲಿಗೆ SBI ನ ಅಧಿಕೃತ ವೆಬ್ ಸೈಟ್ www.sbi.co.in ಗೆ ಭೇಟಿ ನೀಡಿ.
- ಮುಖಪುಟದಲ್ಲಿ ಕಾಣುವ ‘Career’ ವಿಭಾಗವನ್ನು ಆಯ್ಕೆ ಮಾಡಿ.
- ಅಲ್ಲಿ ಇತ್ತೀಚಿನ ಪ್ರಕಟಣೆಗಳಲ್ಲಿ “RECRUITMENT OF PROBATIONARY OFFICERS ADVERTISEMENT NO: CRPD/PO/2024-25/22” ಕೆಳಗೆ ಕಾಣುವ Apply online ಲಿಂಕ್ ಕ್ಲಿಕ್ ಮಾಡಿ.
- ಅಗತ್ಯ ವಿವರಗಳೊಂದಿಗೆ ನೀಡುವ ಮೂಲಕ ಖಾತೆಯನ್ನು ರಚಿಸಿ,
- ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ
- ಫೋಟೋ ಮತ್ತು ಸಹಿಯ ಪ್ರತಿಯನ್ನು ಅಪ್ಲೋಡ್ ಮಾಡಿ, ಅರ್ಜಿ ಶುಲ್ಕವನ್ನು ಪಾವತಿಸಿ.
- ಕೊನೆಯದಾಗಿ ಅರ್ಜಿಯನ್ನು ಸಲ್ಲಿಸಿ ಅರ್ಜಿ ಸಂಖ್ಯೆಯನ್ನು ಉಳಿಸಿಕೊಳ್ಳಿ.
Important Direct Links:
SBI PO Official Notification PDF | Download |
Online Application Form Links | Apply Link |
Official Website | sbi.co.in |
More Updates | Karnataka Help.in |