ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) 150 ವ್ಯಾಪಾರ ಹಣಕಾಸು ಅಧಿಕಾರಿಗಳ (Trade Finance Officers) ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗಳು ಮಧ್ಯಮ ನಿರ್ವಹಣಾ ದರ್ಜೆ ಪ್ರಮಾಣ II (MMGS-II) ಅಡಿಯಲ್ಲಿ ವಿಶೇಷ ಅಧಿಕಾರಿಗಳ(SO) ಹುದ್ದೆಗಳಗೆ ನೇಮಕಾತಿಯನ್ನು ಮಾಡಿಕೊಳ್ಳಲಾಗುತ್ತಿದೆ.
ಅರ್ಜಿ ಸಲ್ಲಿಕೆ ಪ್ರಕ್ರಿಯೆವು ಈಗಾಗಲೇ ಪ್ರಾರಂಭವಾಗಿದ್ದು 27 ಜೂನ್ 2024 ರಂದು ಕೊನೆಯ ದಿನಾಂಕವಾಗಿದೆ.ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಎಸ್ ಬಿ ಐ ಅಧಿಕೃತ ವೆಬ್ ಸೈಟ್ ನ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ನಿನ್ನೆ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಲೇಖನವನ್ನು ಗಮನವಿಟ್ಟು ಓದಿರಿ.
Shortview of SBI SO Trade Finance Recruitment 2024
Organization Name – State Bank of India Post Name – Trade Finance Officer Total Vacancy – 150 Application Process: online Job Location – All Over India
ನೇಮಕಾತಿಯ ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – 07 ಜೂನ್ 2024 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 27 ಜೂನ್ 2024
ಅರ್ಹತೆ:
ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ
IIBF ಫಾರೆಕ್ಸ್ ಪ್ರಮಾಣಪತ್ರ
ಕನಿಷ್ಠ 2 ವರ್ಷಗಳ ಅನುಭವ
ವಯಸ್ಸಿನ ಮಿತಿ:
ಕನಿಷ್ಠ ವಯಸ್ಸು – 21 ವರ್ಷಗಳು
ಗರಿಷ್ಠ ವಯಸ್ಸು – 62 ವರ್ಷಗಳು (ಪೋಸ್ಟ್ ವೈಸ್)
ಸಂಬಳ:
ಪ್ರತಿ ತಿಂಗಳು- ರೂ.28,170-69,810/-
ಆಯ್ಕೆ ಪ್ರಕ್ರಿಯೆ:
ಶಾರ್ಟ್‌ಲಿಸ್ಟಿಂಗ್
ಸಂದರ್ಶನ
ದಾಖಲೆ ಪರಿಶೀಲನೆ
ವೈದ್ಯಕೀಯ ಪರೀಕ್ಷೆ
ಅರ್ಜಿ ಶುಲ್ಕಗಳು:
General/EWS/OBC – 750/-
SC/ST – 00/-
How to Apply for SBI Specialist Officer Recruitment 2024
ಅರ್ಜಿ ಸಲ್ಲಿಸುವುದು ಹೇಗೆ:
ಮೊದಲಿಗೆ ಎಸ್‌ಬಿಐ ಅಧಿಕೃತ ವೆಬ್‌ಸೈಟ್ www.sbi.co.in ಭೇಟಿ ನೀಡಿ.
ಮುಖಪುಟದಲ್ಲಿ ಕಾಣುವ Careers -> Open Opportunities ->ಲಿಂಕ್ ಕ್ಲಿಕ್ ಮಾಡಿ.
ನೋಂದಾಯಿಸಲು, “ಹೊಸ ನೋಂದಣಿಗಾಗಿ ಕ್ಲಿಕ್ ಮಾಡಿ” ಒತ್ತಿ ಮತ್ತು ಅವರ ಪ್ರಸ್ತುತ ಇಮೇಲ್ ವಿಳಾಸ ಮತ್ತು ಫೋನ್ ಸಂಖ್ಯೆಯನ್ನು ಒದಗಿಸಿ.
ನೋಂದಾಯಿಸಿದ ನಂತರ ಲಾಗ್ ಇನ್ ಮಾಡಲು ಅಭ್ಯರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ಪಾಸ್‌ವರ್ಡ್ ಅನ್ನು ಬಳಸಿ ಲಾಗಿನ್ ಮಾಡಿ.
ವಿನಂತಿಸಿದ ಎಲ್ಲಾ ಮಾಹಿತಿಯೊಂದಿಗೆ ಅರ್ಜಿ ನಮೂನೆಯನ್ನು ಸರಿಯಾಗಿ ಭರ್ತಿ ಮಾಡಿ; ಫಾರ್ಮ್ ಅನ್ನು ಸಲ್ಲಿಸಿದ ನಂತರ ಬದಲಾವಣೆಗೆ ಅವಕಾಶವಿಲ್ಲ
ಅಭ್ಯರ್ಥಿಯ ಕೈಬರಹದ ಸ್ವಯಂ ಹೇಳಿಕೆ, ಹೆಬ್ಬೆರಳಿನ ಗುರುತು, ಸಹಿ ಮತ್ತು ಭಾವಚಿತ್ರದ ಸ್ಕ್ಯಾನ್ ಮಾಡಿದ ಪ್ರತಿಯನ್ನು ಅಪ್‌ಲೋಡ್ ಮಾಡಿ
ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಶುಲ್ಕವನ್ನು ಪಾವತಿಸಿ, ಸಲ್ಲಿಸಿ ಒತ್ತಿರಿ ಮತ್ತು ನಿಮ್ಮ ದಾಖಲೆಗಳಿಗಾಗಿ SBI SO ಅರ್ಜಿ ನಮೂನೆಯನ್ನು ಮುದ್ರಿಸಿ.