WhatsApp Channel Join Now
Telegram Group Join Now

SBI Sports Quota Recruitment 2024: ಸ್ಪೋರ್ಟ್ಸ್ ಕೋಟಾದಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಖಾಲಿ ಇರುವ ಹುದ್ದೆಗಳಿಗೆ ಸ್ಪೋರ್ಟ್ಸ್ ಕೋಟಾದಡಿಯಲ್ಲಿ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆಯನ್ನು ಪ್ರಕಟಿಸಲಾಗಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ನೇಮಕಾತಿಯಲ್ಲಿ ಒಟ್ಟು 68 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಕ್ರೀಡೆಯಲ್ಲಿ ಸಾಧನೆ ಮಾಡಿರುವ ಅಭ್ಯರ್ಥಿಗಳಿಗೆ ಇದೊಂದು ಉತ್ತಮ ಅವಕಾಶವಾಗಿದೆ. ಈ ನೇಮಕಾತಿಯಲ್ಲಿ 17 ಅಧಿಕಾರಿ(ಆಫೀಸರ್ಸ್)ಗಳು ಹಾಗೂ 51 ಸಿಬ್ಬಂದಿ(ಕ್ಲೆರಿಕಲ್)ಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

Sbi Sports Quota Recruitment 2024
Sbi Sports Quota Recruitment 2024

ಅರ್ಹ ಅಭ್ಯರ್ಥಿಗಳು SBIನ ಅಧಿಕೃತ ವೆಬ್‌ಸೈಟ್ ಭೇಟಿ ನೀಡಿ ಆನ್ ಲೈನ್ ಮೂಲಕ ತಮ್ಮ ಅರ್ಜಿಯನ್ನು ಸಲ್ಲಿಸಬಹುದು. ಎಸ್‌ಬಿಐ ಬ್ಯಾಂಕ್ ಬ್ಯಾಸ್ಕೆಟ್‌ಬಾಲ್, ಕ್ರಿಕೆಟ್, ಫುಟ್‌ಬಾಲ್, ಹಾಕಿ, ವಾಲಿಬಾಲ್, ಕಬಡ್ಡಿ, ಟೇಬಲ್ ಟೆನಿಸ್ ಮತ್ತು ಬ್ಯಾಡ್ಮಿಂಟನ್ ಸೇರಿದಂತೆ ಎಂಟು ವಿಭಾಗಗಳಲ್ಲಿ ಮಾತ್ರ ಕ್ರೀಡಾಪಟುಗಳನ್ನು ನೇಮಿಸಿಕೊಳ್ಳುತ್ತದೆ. ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ವೆಬ್‌ಸೈಟ್ bank.sbi‌ ಆನ್‌ಲೈನ್‌ನಲ್ಲಿ ಆಗಸ್ಟ್ 14ರ ಒಳಗೆ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಂತೆ ಹೆಚ್ಚಿನ ಮಾಹಿತಿಯನ್ನು ಕೆಳಗಿನ ನೀಡಲಾಗಿದ್ದು ಗಮನವಿಟ್ಟು ಓದಿರಿ.

Shortview of SBI Sports Quota Notification 2024

Organization Name – State Bank of India
Post Name – Officers and Clerical
Total Vacancy – 68
Application Process: online
Job Location – All Over India

ಪ್ರಮುಖ ದಿನಾಂಕಗಳು:

  • ಅಧಿಸೂಚನೆ ಪ್ರಕಟಣೆ ದಿನಾಂಕ : ಜುಲೈ 23, 2024
  • ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭ: ಜುಲೈ 24, 2024
  • ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಆಗಸ್ಟ್ 14, 2024

ಅರ್ಹತೆ ಮತ್ತು ವಿದ್ಯಾರ್ಹತೆಗಳು:

  • ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ.
  • ರಾಷ್ಟ್ರೀಯ ಅಥವಾ ಅಂತರರಾಷ್ಟ್ರೀಯ ಮಟ್ಟದಲ್ಲಿ ಕ್ರೀಡೆಗಳಲ್ಲಿ ಭಾಗವಹಿಸಿದ ಅನುಭವ.
  • ಕೆಲವು ಕ್ರೀಡೆಗಳಿಗೆ ನಿಗದಿತ ಎತ್ತರ ಮತ್ತು ತೂಕದ ಮಾನದಂಡಗಳು ಅನ್ವಯಿಸುತ್ತವೆ.

ವಯಸ್ಸಿನ ಮಿತಿ:

  • ಆಫರ್ಸ್ ಹುದ್ದೆಗಳಿಗೆ – 21 ರಿಂದ 30 ವರ್ಷಗಳು.
  • ಕ್ಲರ್ಕ್ ಹುದ್ದೆಗಳಿಗೆ – 20 ರಿಂದ 28 ವರ್ಷಗಳು .

ಆಯ್ಕೆ ಪ್ರಕ್ರಿಯೆ:

  • ಅರ್ಜಿದಾರರನ್ನು ಮೊದಲು ಆನ್‌ಲೈನ್ ಪರೀಕ್ಷೆಗೆ ಒಳಪಡಿಸಲಾಗುತ್ತದೆ.
  • ಯಶಸ್ವಿಯಾದ ಅಭ್ಯರ್ಥಿಗಳನ್ನು ನಂತರ ಕ್ರೀಡಾ ಪ್ರಯೋಗಗಳಿಗೆ ಕರೆಯಲಾಗುತ್ತದೆ.
  • ಅಂತಿಮ ಆಯ್ಕೆಯು ಪರೀಕ್ಷೆ ಮತ್ತು ಕ್ರೀಡಾ ಪ್ರಯೋಗಗಳಲ್ಲಿ ಅಭ್ಯರ್ಥಿಗಳ ಸಾಧನೆಯನ್ನು ಆಧರಿಸಿರುತ್ತದೆ.

ಅರ್ಜಿ‌ ಶುಲ್ಕ:

  • ಸಾಮಾನ್ಯ/OBC/EWS ಅಭ್ಯರ್ಥಿಗಳಿಗೆ – ₹750
  • SC/ST/PwBD ಅಭ್ಯರ್ಥಿಗಳಿಗೆ – ₹00 (ಅರ್ಜಿ ಶುಲ್ಕವಿರುವುದಿಲ್ಲ)

Also Read: BECIL Technician Recruitment 2024: ಲ್ಯಾಬ್ ಟೆಕ್ನಿಷಿಯನ್, ಟೆಕ್ನಿಷಿಯನ್ ಹುದ್ದೆಗಳ ನೇಮಕಾತಿ

How to Apply for SBI Sports Quota Recruitment 2024

ಅರ್ಜಿ ಸಲ್ಲಿಸುವುದು ಹೇಗೆ:

  • SBI ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: https://sbi.co.in/
  • ಮುಖಪುಟದಲ್ಲಿ, ‘Recruitment’ ಟ್ಯಾಬ್ ಕ್ಲಿಕ್ ಮಾಡಿ.
  • ‘Current Openings’ ವಿಭಾಗದಲ್ಲಿ, ‘Sports Quota Recruitment 2024’ ಲಿಂಕ್ ಕ್ಲಿಕ್ ಮಾಡಿ.
  • ಅಧಿಸೂಚನೆಯನ್ನು ಓದಿ ಮತ್ತು ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿ.
  • ‘Online Application’ ಲಿಂಕ್ ಕ್ಲಿಕ್ ಮಾಡಿ.
  • ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಒಳಗೊಂಡಂತೆ ಆನ್‌ಲೈನ್ ಅರ್ಜಿ ನಮೂನೆಯನ್ನು ಸಂಪೂರ್ಣವಾಗಿ ಭರ್ತಿ ಮಾಡಿ.
  • ಅಗತ್ಯವಿರುವ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಮತ್ತು ಅಪ್‌ಲೋಡ್ ಮಾಡಿ.
  • ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಿ.
  • ಅರ್ಜಿಯನ್ನು ಸಲ್ಲಿಸಿ ಮತ್ತು ಅದರ ಪ್ರತಿಯನ್ನು ಉಳಿಸಿಕೊಳ್ಳಿ.

Important Direct Links:

Official Notification PDFDownload
Online Application LinkApply Here
Official Websitesbi.co.in
More UpdatesKarnatakaHelp.in

Leave a Comment