ದಕ್ಷಿಣ ಮಧ್ಯ ರೈಲ್ವೆಯಲ್ಲಿ ‘ಅಪ್ರೆಂಟಿಸ್‌ಶಿಪ್‌’

ಐಟಿಐ ಪಾಸ್‌ | 2801 ಸ್ಥಾನಗಳಿಗೆ ನೇಮಕ

Published on:

ಫಾಲೋ ಮಾಡಿ
South Central Railway (SCR) Apprenticeship 2025-26 Notification
SCR Apprenticeship 2026

ದಕ್ಷಿಣ ಮಧ್ಯ ರೈಲ್ವೆ(SCR)ಯು 2025-26ನೇ ಸಾಲಿಗೆ ಅಪ್ರೆಂಟಿಸ್‌ ಕಾಯ್ದೆಯಡಿ 2801 ಅಭ್ಯರ್ಥಿಗಳಿಗೆ ಅಪ್ರೆಂಟಿಸ್‌ಶಿಪ್‌ ತರಬೇತಿ ಒದಗಿಸಲಿದ್ದು, ರೈಲ್ವೆ ನೇಮಕಾತಿ ಕೋಶ ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.

ಎಸಿ ಮಶಿನಿಸ್ಟ್, ಕಾರ್ಪೆಂಟರ್, ಡೀಸೆಲ್ ಮೆಕಾನಿಕ್, ಎಲೆಕ್ಟ್ರಿಷಿಯನ್, ಎಲೆಕ್ಟ್ರಾನಿಕ್ ಮೆಕಾನಿಕ್ ಮತ್ತು ಫಿಟ್ಟರ್ ಸೇರಿದಂತೆ ಇತರೆ ಟ್ರೇಡ್‌ಗಳಿಗೆ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಂಡು, ತರಬೇತಿ ನೀಡಲಿದೆ. ಸಂಬಂಧಿತ ಟ್ರೇಡ್‌ನಲ್ಲಿ ಐಟಿಐ ಪ್ರಮಾಣ ಪತ್ರ ಹೊಂದಿರುವ ಬಾಲ್ಕಿ, ಬಳ್ಳಾರಿ, ಬೆಳಗಾವಿ, ಬೀದರ್‌, ಗುಲ್ಬರ್ಗ(ಕಲಬುರಗಿ), ರಾಯಚೂರು, ಯಾದಗಿರಿ ವ್ಯಾಪ್ತಿಗೆ ಒಳಪಡುವ ಆಸಕ್ತರು ನೋಂದಣಿಗಾಗಿ ಎಸ್‌ಸಿಆರ್‌ ಅಧಿಕೃತ ಜಾಲತಾಣ https://scr.onlineregister.org.in/homeಕ್ಕೆ ಭೇಟಿ ನೀಡಿ. ನೋಂದಣಿಗೆ ಏ.11 ಕೊನೆಯದಿನವಾಗಿದೆ.

About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

Leave a Comment