SSLC Exam 2 Time Table 2025: ಪರೀಕ್ಷೆ-2ರ ವೇಳಾಪಟ್ಟಿ ಬಿಡುಗಡೆ

By ಕರ್ನಾಟಕ ಹೆಲ್ಪ್ ಡೆಸ್ಕ್

Published On:

IST

ಫಾಲೋ ಮಾಡಿ

Karnataka SSLC Exam 2 Time Table 2025
SSLC Exam 2 Time Table 2025

ಎಸ್.ಎಸ್.ಎಲ್.ಸಿ ಪರೀಕ್ಷೆ-1ರ ಫಲಿತಾಂಶದ ಬಳಿಕ ಅನುತ್ತೀರ್ಣರಾದ ಅಥವಾ ಇನ್ನೂ ಹೆಚ್ಚು ಅಂಕಗಳನ್ನು ಗಳಿಸುವ ಉದ್ದೇಶವಿರುವ ವಿದ್ಯಾರ್ಥಿಗಳಿಗಾಗಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಎಸ್.ಎಸ್.ಎಲ್.ಸಿ ಪರೀಕ್ಷೆ-2ರ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

ಎಸ್.ಎಸ್.ಎಲ್.ಸಿ ಪರೀಕ್ಷೆ-2 ಅನ್ನು ಮೇ.26 ರಿಂದ ಜೂನ್.2ರವರೆಗೆ ನಡೆಸಲಾಗುತ್ತದೆ. ಪರೀಕ್ಷೆಯ ವೇಳಾಪಟ್ಟಿಯನ್ನು ಮಂಡಳಿಯ ಅಧಿಕೃತ ವೆಬ್‌ಸೈಟ್‌ kseab.karnataka.gov.in ನಲ್ಲಿ ಬಿಡುಗಡೆ ಮಾಡಿದ್ದು, ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ, ತಪ್ಪದೇ ಕೊನೆವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ.

ಎಸ್.ಎಸ್.ಎಲ್.ಸಿ ಪರೀಕ್ಷೆ-2 ವೇಳಾಪಟ್ಟಿ ಪ್ರಕಟ

ಎಸ್.ಎಸ್.ಎಲ್.ಸಿ ಪರೀಕ್ಷೆ-1 ರಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ದೃತಿಗೆಡದೆ ಎಸ್.ಎಸ್.ಎಲ್.ಸಿ ಪರೀಕ್ಷೆ-2 ಹಾಗೂ ಪರೀಕ್ಷೆ-3 ಹಾಜರಾಗಿ ಬಹು ಪ್ರಯತ್ನಗಳನ್ನು ಮಾಡಿ ಉತ್ತೀರ್ಣರಾಗಬಹುದು.

ಪರೀಕ್ಷೆ-1 ಫಲಿತಾಂಶದ ಬಳಿಕ ಅನುತ್ತೀರ್ಣರಾದ ಅಥವಾ ಇನ್ನೂ ಹೆಚ್ಚು ಅಂಕಗಳನ್ನು ಗಳಿಸುವ ಉದ್ದೇಶವಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆ-2 ಹಾಗೂ ಪರೀಕ್ಷೆ-3 ರ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.

ಮರು ಪರೀಕ್ಷೆಗೆ ಯಾವುದೇ ಶುಲ್ಕ ಇರುವುದಿಲ್ಲ

ಎಸ್.ಎಸ್.ಎಲ್.ಸಿ ಪರೀಕ್ಷೆ 2ರ ವೇಳಾಪಟ್ಟಿ

  • ದಿನಾಂಕ 26-05-2025ರಂದು ಬೆ.10 ರಿಂದ ಮ.1:15ರವರೆಗೆ – ಪ್ರಥಮ ಭಾಷೆ (ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು ಇಂಗ್ಲಿಷ್, ಸಂಸ್ಕೃತ)
  • ದಿನಾಂಕ 27-05-2025ರಂದು ಬೆ.10 ರಿಂದ ಮ.1:15ರವರೆಗೆ – ಕೋರ್ ಸಬ್ಜೆಕ್ಟ್ (ಸಮಾಜ ವಿಜ್ಞಾನ)
  • ದಿನಾಂಕ 28-05-2025ರಂದು ಬೆ.10 ರಿಂದ ಮ.1:15ರವರೆಗೆ – ದ್ವಿತೀಯ ಭಾಷೆ(ಇಂಗ್ಲಿಷ್, ಕನ್ನಡ)
  • ದಿನಾಂಕ 29-05-2025ರಂದು ಬೆ.10 ರಿಂದ ಮ.1:15ರವರೆಗೆ – ಕೋರ್ ಸಬ್ಜೆಕ್ಟ್(ಗಣಿತ, ಸಮಾಜಶಾಸ್ತ್ರ)
  • ದಿನಾಂಕ 30-05-2025ರಂದು ಬೆ.10 ರಿಂದ ಮ.1:15ರವರೆಗೆ – ತೃತಿಯ ಭಾಷೆ(ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಪರ್ಶಿಯನ್ ಉರ್ದು, ಸಂಸ್ಕೃತ ,ಕೊಂಕಣಿ ,ತುಳು) ಹಾಗೂ ಬೆ.10 ರಿಂದ ಮ.12:15ರವರೆಗೆ – ಎನ್.ಎಸ್.ಕ್ಯೂ.ಎಫ್ ವಿಷಯಗಳು
  • ದಿನಾಂಕ 31-05-2025 ರಂದು ಬೆ.10 ರಿಂದ ಮ.1:15ರವರೆಗೆ – ಕೋರ್ ಸಬ್ಜೆಕ್ಟ್(ರಾಜ್ಯಶಾಸ್ತ್ರ, ವಿಜ್ಞಾನ, ಕರ್ನಾಟಕ ಸಂಗೀತ, ಹಿಂದುಸ್ತಾನಿ ಸಂಗೀತ)
  • ದಿನಾಂಕ 02-06-2025ರಂದು ಬೆ.10 ರಿಂದ ಮ.1:15ರವರೆಗೆ – ಜಿಟಿಎಸ್ ವಿಷಯಗಳು

How to Download SSLC Exam 2 Time Table 2025

ಎಸ್.ಎಸ್.ಎಲ್.ಸಿ ಪರೀಕ್ಷೆ 2ರ ವೇಳಾಪಟ್ಟಿ ಡೌನ್ಲೋಡ್ ಮಾಡುವ ವಿಧಾನ;

  • ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯ ಅಧಿಕೃತ ವೆಬ್ ಸೈಟ್ kseab.karnataka.gov.in ಗೆ ಭೇಟಿ ನೀಡಿ.
  • ಇತ್ತೀಚಿನ ಸುದ್ದಿಗಳು ವಿಭಾಗದಲ್ಲಿ Click here for SSLC 2025 Examination-2 Time Table ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ಪಿಡಿಎಫ್ ಅನ್ನು ವೀಕ್ಷಿಸಿ ಮತ್ತು ಡೌನ್‌ಲೋಡ್ ಮಾಡಿ/ಮುದ್ರಿಸಿ.

ವಿಶೇಷ ಸೂಚನೆ:

ಎಸ್.ಎಸ್.ಎಲ್.ಸಿ ಪರೀಕ್ಷೆ-2 ಬರೆಯಲು ಇಚ್ಚಿಸುವ ವಿದ್ಯಾರ್ಥಿಗಳು ನಿಮ್ಮ ಶಾಲೆಗೆ ಭೇಟಿ ನೀಡಿ, ನೋಂದಣಿ ಮಾಡಿಕೊಳ್ಳಿ.

ಎಸ್.ಎಸ್.ಎಲ್.ಸಿ ಪರೀಕ್ಷೆ-2ರ ಪ್ರವೇಶ ಪತ್ರವನ್ನು ನಿಮ್ಮ ಶಾಲೆಗಳಲ್ಲಿಯೇ ನೀಡಲಾಗುತ್ತದೆ.

Important Direct Links:

Karnataka SSLC Exam 2 Time Table 2025 PDFDownload
Official Websitekseab.karnataka.gov.in
More UpdatesKarnataka Help.in

About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ, ನೆಚ್ಚಿನ ಸುದ್ದಿ ಮಾಧ್ಯಮವಾಗಿದೆ. ಇಲ್ಲಿ ದಿನ ನಿತ್ಯ ಶೈಕ್ಷಣಿಕ ಸುದ್ದಿಗಳ ನವೀಕರಣಗಳನ್ನು ಪಡೆಯುತ್ತೀರಿ.

For Feedback - admin@karnatakahelp.in

Leave a Comment