SSLC Results 2024 Date: ಕರ್ನಾಟಕ ಶಾಲಾ ಪರೀಕ್ಷೆಗಳು ಮತ್ತು ಮೌಲ್ಯಮಾಪನ ಮಂಡಳಿ (ಕೆಎಸ್‌ಇಎಬಿ) ನಡೆಸಿದ್ದ ಕರ್ನಾಟಕ 10 ನೇ ತರಗತಿಯ 2024 ಪರೀಕ್ಷೆಗಳ ಫಲಿತಾಂಶವನ್ನು ಶೀಘ್ರವೇ ಆನ್‌ಲೈನ್‌ನಲ್ಲಿ ಪ್ರಕಟಿಸುತ್ತದೆ. ಪರೀಕ್ಷೆಗೆ ಸಂಬಂಧಿಸಿದ ಕೀ ಉತ್ತರಗಳನ್ನು ಪರೀಕ್ಷಾ ಮಂಡಳಿಯೂ ಈಗಾಗಲೇ ಪ್ರಕಟಿಸಿದ್ದು ವಿದ್ಯಾರ್ಥಿಗಳು ತಮ್ಮ ಅಂಕಗಳನ್ನು ಅಂದಾಜು ಮಾಡಿಕೊಳ್ಳಬಹುದಾಗಿದೆ. ಆದರೂ ಅಂತಿಮ ಫಲಿತಾಂಶಕ್ಕೆ ಕಾಯುತ್ತಿರುವ ವಿದ್ಯಾರ್ಥಿಗಳಿಗೆ ಫಲಿತಾಂಶವೂ ಯಾವಾಗ ಬರಲಿದೆ ಎಂಬುದರ ಕುರಿತು ಈ ಲೇಖನದಲ್ಲಿ ಮಾಹಿತಿಯನ್ನು ನೀಡಲಾಗಿದೆ ಕೊನೆಯವರೆಗೂ ಗಮನವಿಟ್ಟು ಓದಿರಿ.
ಪರೀಕ್ಷಾ ಮಂಡಳಿಯು SSLC ಬೋರ್ಡ್ ಪರೀಕ್ಷೆಯನ್ನು ಮಾರ್ಚ್ 25 ರಿಂದ ಏಪ್ರಿಲ್ 6 ರ ವರೆಗೆ ನಡೆಸಲಾಗಿದ್ದು, ಮೌಲ್ಯಮಾಪನ ಪ್ರಕ್ರಿಯೆಯು ಪೂರ್ಣಗೊಂಡ ಸ್ವಲ್ಪ ಸಮಯದ ನಂತರ ಮಂಡಳಿಯ ಅಧಿಕಾರಿಗಳು ಮಂಡಳಿಯ ಫಲಿತಾಂಶವನ್ನು ಪ್ರಕಟಿಸುವ ದಿನಾಂಕ ಮತ್ತು ಸಮಯವನ್ನು ನೀಡುತ್ತಾರೆ. ಮೇ ಮೊದಲನೇ ವಾರದಲ್ಲಿ ಫಲಿತಾಂಶವು ಬರುವ ನಿರೀಕ್ಷೆ ಇದೆ.
ಕರ್ನಾಟಕ ಬೋರ್ಡ್ SSLC ಫಲಿತಾಂಶಗಳನ್ನು ಡೌನ್‌ಲೋಡ್ ಮಾಡಲು, ವಿದ್ಯಾರ್ಥಿಗಳು ಫಲಿತಾಂಶ ಲಾಗಿನ್ ವಿಂಡೋದಲ್ಲಿ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕದಂತಹ ಅಗತ್ಯವಿರುವ ಲಾಗಿನ್ ವಿವರಗಳನ್ನು ಬಳಸಬೇಕಾಗುತ್ತದೆ. ಕರ್ನಾಟಕ SSLC ಪರೀಕ್ಷೆ 2024 ರ ಅಂಕಪಟ್ಟಿಯು ವಿದ್ಯಾರ್ಥಿಗಳ ಪ್ರಮುಖ ವಿವರಗಳಾದ ರೋಲ್ ಸಂಖ್ಯೆ ಮತ್ತು DOB, ಜೊತೆಗೆ ಅವರು ಎಲ್ಲಾ ವಿಷಯಗಳಲ್ಲಿ ಪಡೆದ ಒಟ್ಟು ಅಂಕಗಳನ್ನು ಹೊಂದಿರುತ್ತದೆ.
ಬಿಡುಗಡೆಯಾದ ನಂತರ, ಬೋರ್ಡ್ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್‌ಗಳಾದ kseab.karnataka.gov.in ಮತ್ತು karresults.nic.in ಮೂಲಕ ತಮ್ಮ ಮಾರ್ಕ್‌ಕಾರ್ಡ್ ಅನ್ನು ಪರಿಶೀಲಿಸಬಹುದು ಮತ್ತು ಡೌನ್‌ಲೋಡ್ ಮಾಡಬಹುದು.
How to Check SSLC Results 2024 Karnataka
ಕರ್ನಾಟಕ SSLC ಬೋರ್ಡ್ ಫಲಿತಾಂಶ 2024 ಅನ್ನು ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಪರಿಶೀಲಿಸುವುದು ಹೇಗೆ?
ಕರ್ನಾಟಕ ಮಂಡಳಿಯ ಅಧಿಕೃತ kseab.karnataka.gov.in ವೆಬ್‌ಸೈಟ್‌ಗೆ ಭೇಟಿ ನೀಡಿ.
ಕರ್ನಾಟಕ ಫಲಿತಾಂಶ ಪೋರ್ಟಲ್ ಲಿಂಕ್ ಅನ್ನು ಕ್ಲಿಕ್ ಮಾಡಿ.
ನಂತರ ಅಲ್ಲಿ ಕಾಣಿಸುವ SSLC ಫಲಿತಾಂಶ ಲಿಂಕ್ ಅನ್ನು ಕ್ಲಿಕ್ ಮಾಡಿ.
ಅಲ್ಲಿ ಕೇಳಲಾಗುವ ನೋಂದಣಿ ಸಂಖ್ಯೆಯನ್ನು ಬಳಸಿಕೊಂಡು ಲಾಗಿನ್ ಮಾಡಿ.
ಫಲಿತಾಂಶ ಮತ್ತು ಮಾರ್ಕ್‌ಶೀಟ್ ಅನ್ನು ನಿಮ್ಮ ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ.
ಹೆಚ್ಚಿನ ಉದ್ದೇಶಕ್ಕಾಗಿ ಆನ್‌ಲೈನ್ ಮಾರ್ಕ್‌ಶೀಟ್ ಅನ್ನು ಡೌನ್‌ಲೋಡ್ ಮಾಡಿ ಇಟ್ಟುಕೊಳ್ಳಿ.