UGC NET 2024 Final Answer Key(OUT): ಪರೀಕ್ಷೆಯ ಅಂತಿಮ ಕೀ ಉತ್ತರಗಳು ಬಿಡುಗಡೆ!

Follow Us:

UGC NET 2024 Final Answer Key: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) UGC NET 2024 ಪರೀಕ್ಷೆಯ ಅಂತಿಮ ಉತ್ತರವನ್ನು ಇಂದು ಬಿಡುಗಡೆ ಮಾಡಿದೆ.. 21 ಆಗಸ್ಟ್‌ನಿಂದ 5 ಸೆಪ್ಟೆಂಬರ್ 2024 ರಂದು ನಡೆದ ಪರೀಕ್ಷೆಯ ನಂತರ, ಅಭ್ಯರ್ಥಿಗಳು ತಮ್ಮ ಉತ್ತರಗಳನ್ನು ಅಂತಿಮ ಕೀ ಉತ್ತರಗಳೊಂದಿಗೆ ಹೋಲಿಸಿ‌ ತಮ್ಮ ಅಂಕಗಳನ್ನು ಅಂದಾಜು ಮಾಡಲು ಕಾಯುತ್ತಿದ್ದರು. ಅಂತಿಮ ಕೀ ಉತ್ತರಗಳನ್ನು NTA ಅಧಿಕೃತ ವೆಬ್‌ಸೈಟ್ https://ugcnet.nta.ac.in/ ನಲ್ಲಿ ಡೌನ್‌ಲೋಡ್ ಮಾಡಬಹುದು.

ಕೀ ಉತ್ತರಗಳ ಜೊತೆಗೆ, NTA ಪರೀಕ್ಷೆಯ ಪ್ರಶ್ನೆ ಪತ್ರಿಕೆ ಮತ್ತು ಅಭ್ಯರ್ಥಿಗಳ ರೆಕಾರ್ಡ್ ಮಾಡಿದ ಉತ್ತರಗಳನ್ನು ಸಹ ಬಿಡುಗಡೆ ಮಾಡಲಿದೆ. ಇದು ಅಭ್ಯರ್ಥಿಗಳು ತಮ್ಮ ಪ್ರದರ್ಶನವನ್ನು ವಿಶ್ಲೇಷಿಸಲು ಮತ್ತು ಅಂಕಗಳ ಅಂದಾಜು ಪಡೆಯಲು ಸಹಾಯ ಮಾಡುತ್ತದೆ.

ಅರ್ಹ ಅಭ್ಯರ್ಥಿಗಳಿಗೆ JRF ಮತ್ತು ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಅರ್ಹತಾ ಪತ್ರವನ್ನು ನೀಡಲಾಗುವುದು. ಅಭ್ಯರ್ಥಿಗಳು ಕೀ ಉತ್ತರಗಳ ಬಗ್ಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಅವರು NTA ಯನ್ನು ಸಂಪರ್ಕಿಸಬಹುದು. ವೆಬ್ ಸೈಟಿನಲ್ಲಿ ಎಲ್ಲಾ ಪರೀಕ್ಷೆಯ ವಿಷಯಗಳಗೆ ಕುರಿತು PDF ಮಾದರಿಯಲ್ಲಿ ಕೀ ಉತ್ತರಗಳನ್ನು ಬಿಡುಗಡೆ ಮಾಡಲಾಗುತ್ತದೆ. ಈ ಲೇಖನದಲ್ಲಿ ನಾವು ಯುಜಿಸಿ ನೆಟ್ ಕೀ ಉತ್ತರಗಳನ್ನು ಆನ್ ಲೈನ್ ಮೂಲಕ ಡೌನ್ಲೋಡ್ ಮಾಡುವುದು ಏಕೆ ಎಂಬುವುದನ್ನು ತಿಳಿದುಕೊಳ್ಳೋಣ.

How to Download UGC NET Answer Key 2024 PDF

ಕೀ ಉತ್ತರಗಳನ್ನು ಆನ್ ಲೈನ್ ಮೂಲಕ ಡೌನ್ಲೋಡ್ ಮಾಡಲು ಹಂತಗಳನ್ನು ಅನುಸರಿಸಿ;

  • NTA UGC NET ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: https://ugcnet.nta.ac.in//
  • ಮುಖಪುಟದಲ್ಲಿ ‘ UGC – NET June 2024 Final Answer Key’ ಲಿಂಕ್ ಅನ್ನು ಕ್ಲಿಕ್ ಮಾಡಿ.
  • ಕೀ ಉತ್ತರಗಳನ್ನು ಡೌನ್‌ಲೋಡ್ ಮಾಡಿ ಮತ್ತು ಉಳಿಸಿ.

Important Direct Links:

UGC NET June 2024 Final Answer Key PDF LinkDownload
Official Websiteugcnet.nta.nic.in
More UpdatesKarnatakaHelp.in

Leave a Comment