UPSC Veterinary Officer and other Posts Recruitment 2025
ಕೇಂದ್ರ ಲೋಕಸೇವಾ ಆಯೋಗವು (UPSC) ಖಾಲಿ ಇರುವ 40 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆಯನ್ನು ಹೊರಡಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ವಿಜ್ಞಾನಿ-ಬಿ, ವೈಜ್ಞಾನಿಕ ಅಧಿಕಾರಿ, ತಾಂತ್ರಿಕ ಅಧಿಕಾರಿ, ಪ್ರಾಧ್ಯಾಪಕ, ಉಪನ್ಯಾಸಕ ಮತ್ತು ಹಿರಿಯ ಪಶುವೈದ್ಯ ಅಧಿಕಾರಿ(UPSC Veterinary Officer) ಇತರೆ ಒಟ್ಟು 40 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಸಲ್ಲಿಸ ಬಯಸುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಯುಪಿಎಸ್‌ಸಿ ಅಧಿಕೃತ ವೆಬ್ಸೈಟ್ upsconline.gov.in ಮೂಲಕ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ಈ ಲೇಖನದಲ್ಲಿ ಸದರಿ ನೇಮಕಾತಿಗೆ ಬೇಕಾದ ವಿದ್ಯಾರ್ಹತೆ, ವಯಸ್ಸಿನ ಮಿತಿ, ಪ್ರಮುಖ ದಿನಾಂಕಗಳು ಹಾಗೂ ಇತರೆ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ. ತಪ್ಪದೇ ಕೊನೆವರೆಗೂ ಓದಿ, ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ.
Recruitment Board – Union Public Service Commission Post Names – Various Posts Total Vacancy – 40 Application Process – Online Job Location – All India
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – 26-04-2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ -15-05-2025
ಹುದ್ದೆಗಳ ವಿವರ:
ವಿಜ್ಞಾನಿ – ಬಿ ( ಎಲೆಕ್ಟ್ರಿಕಲ್) – 1 ವೈಜ್ಞಾನಿಕ ಅಧಿಕಾರಿ (ಎಲೆಕ್ಟ್ರಿಕಲ್) – 03 ವೈಜ್ಞಾನಿಕ ಅಧಿಕಾರಿ (ಯಾಂತ್ರಿಕ) – 1 ಪ್ರಾಧ್ಯಾಪಕರು (ಸಕ್ಕರೆ ತಂತ್ರಜ್ಞಾನ) – 1 ಉಪನ್ಯಾಸಕರು (ಸಕ್ಕರೆ ಎಂಜಿನಿಯರಿಂಗ್) – 1 ತಾಂತ್ರಿಕ ಅಧಿಕಾರಿ (ಅರಣ್ಯ) ದರ್ಜೆ || – 03 ವಿಜ್ಞಾನಿ ‘ಬಿ’ (ಬ್ಯಾಲಿಸ್ಟಿಕ್ಸ್) – 1 ವಿಜ್ಞಾನಿ ‘ಬಿ’ (ಜೀವಶಾಸ್ತ್ರ) – 02 ವಿಜ್ಞಾನಿ ‘ಬಿ’ (ರಸಾಯನಶಾಸ್ತ್ರ) – 1 ವಿಜ್ಞಾನಿ ‘ಬಿ’ (ದಾಖಲೆಗಳು) – 1 ತರಬೇತಿ ಅಧಿಕಾರಿ (ಮಹಿಳಾ ತರಬೇತಿ ಹೊರತುಪಡಿಸಿ) (ವೆಲ್ಡರ್) – 09 ಹಿರಿಯ ಪಶುವೈದ್ಯಾಧಿಕಾರಿ – 16
ಶೈಕ್ಷಣಿಕ ಅರ್ಹತೆ:
ನೇಮಕಾತಿಯ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಅರ್ಜಿ ಸಲ್ಲಿಸಲು ನಿಗದಿತ ವಿದ್ಯಾರ್ಹತೆ ಹೊಂದಿರಬೇಕು. ಹುದ್ದೆಗಳಿಗೆ ಆಧಾರಿತವಾಗಿ ವಿದ್ಯಾರ್ಹತೆ ನಿಗದಿ ಪಡಿಸಲಾಗಿದೆ. ತಪ್ಪದೇ ಅಧಿಕೃತ ಅಧಿಸೂಚನೆಯನ್ನು ಓದಿ.
Bsc, BTech/BE, diploma, MA, Mcom, MSC, PG diploma in related discipline.
ವಯೋಮಿತಿ:
ಕನಿಷ್ಠ ವಯಸ್ಸಿನ ಮಿತಿ – 30 ವರ್ಷಗಳು
ಗರಿಷ್ಠ ವಯಸ್ಸಿನ ಮಿತಿ – 50 ವರ್ಷಗಳು
ಸರ್ಕಾರಿ ನಿಯಮಗಳ ಪ್ರಕಾರ ಮೀಸಲಾತಿ ವರ್ಗಗಳಿಗೆ ವಯಸ್ಸಿನ ಸಡಿಲಿಕೆ ಅನ್ವಯಿಸುತ್ತದೆ.
ಹುದ್ದೆಗಳಿಗೆ ಅನುಗುಣವಾಗಿ ವಯಸ್ಸಿನ ಮಿತಿ ಅನ್ವಯಿಸುತ್ತದೆ. ಅಭ್ಯರ್ಥಿಗಳು ತಪ್ಪದೆ ವಿವರವಾದ ಅಧಿಸೂಚನೆಯನ್ನು ಓದಬೇಕು.
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ
ಅರ್ಜಿ ಶುಲ್ಕ:
ಸಾಮಾನ್ಯ/ಒಬಿಸಿ/ಇಡಬ್ಲ್ಯೂಎಸ್, ಪುರುಷ ಅಭ್ಯರ್ಥಿಗಳಿಗೆ – 25 ರೂ.
ಮಹಿಳಾ/ಎಸ್‌ಸಿ/ಎಸ್‌ಟಿ/ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ – ಶುಲ್ಕ ವಿನಾಯಿತಿ ನೀಡಲಾಗಿದೆ.
How to Apply for UPSC Veterinary Officer and other Posts Recruitment 2025?
ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ;
ಯುಪಿಎಸ್‌ಸಿ ಅಧಿಕೃತ ವೆಬ್ಸೈಟ್ https://upsconline.gov.in/ಗೆ ಭೇಟಿ ನೀಡಿ.
ಮುಖಪುಟದಲ್ಲಿ ಕಾಣುವ ONLINE RECRUITMENT APPLICATION (ORA) FOR VARIOUS RECRUITMENT POSTS ಲಿಂಕ್ ಮೇಲೆ ಕ್ಲಿಕ್ ಮಾಡಿ.
ನೀವು ಅರ್ಜಿ ಸಲ್ಲಿಸಲು ಬಯಸುವ ಹುದ್ದೆಯ ಮೇಲೆ ಕ್ಲಿಕ್ ಮಾಡಿ ಅರ್ಜಿ ನಮೂನೆ ತೆಗೆದುಕೊಳ್ಳುತ್ತದೆ.
ಅರ್ಜಿಯಲ್ಲಿ ಕೇಳಲಾಗುವ ಸ್ವವಿವರ ಹಾಗೂ ಶೈಕ್ಷಣಿಕ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
ನಂತರ ಅರ್ಜಿ ಶುಲ್ಕ ಪಾವತಿ ಮಾಡಿ.
ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ. ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿದ ಅರ್ಜಿಯ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.