WhatsApp Channel Join Now
Telegram Group Join Now

Anganwadi Recruitment 2024: 10th, PUC ಪಾಸ್…ಅಂಗನವಾಡಿ ಟೀಚರ್ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಉತ್ತರ ಕನ್ನಡ ಜಿಲ್ಲೆಯ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಉತ್ತರಕನ್ನಡ ಜಿಲ್ಲೆಯ ವಿವಿಧ ತಾಲೂಕಿನಲ್ಲಿ ಇರುವ ಅಂಗನವಾಡಿ ಕೇಂದ್ರಗಳಗೆ‌ ಈ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, 10ನೇ ತರಗತಿ ಅಥವಾ ಪಿಯುಸಿ ಪಾಸ್ ಮಾಡಿರುವ ಮಹಿಳೆಯರು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಖಾಲಿ ಇರುವ ಒಟ್ಟು 344 ಹುದ್ದೆಗಳಿಗೆ ಭರ್ತಿ ಮಾಡಲಾಗುತ್ತಿದ್ದು, ಇದರಲ್ಲಿ ಅಂಗನವಾಡಿ ಕಾರ್ಯಕರ್ತೆ 81 ಹುದ್ದೆಗಳು, ಅಂಗನವಾಡಿ ಸಹಾಯಕಿ 263 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಅರ್ಜಿ ಸಲ್ಲಿಸಿದ ಮಹಿಳೆಯರ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿಯನ್ನು ಬಿಡುಗಡೆ ಮಾಡಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಸರ್ಕಾರಿ ಉದ್ಯೋಗ ಬಯಸುತ್ತಿರುವ ಮಹಿಳೆಯರಿಗೆ ಇದೊಂದು ಸುವರ್ಣ ಅವಕಾಶವಾಗಿದೆ. ಆಸಕ್ತ ಮಹಿಳೆಯರು karnemakaone.kar.nic.in ವೆಬ್ ಸೈಟಿಗೆ ಭೇಟಿ ನೀಡುವ ಮೂಲಕ ಆಗಸ್ಟ್ 12, 2024 ರ‌ ಒಳಗೆ ಅರ್ಜಿಯನ್ನು ಸಲ್ಲಿಸಬಹುದು.

Uttara Kannada Anganwadi Recruitment 2024
Anganwadi Recruitment 2024

Shortview of Uttara Kannada Anganwadi Recruitment 2024

Organization Name – Women & Child Development (WCD)
Post Name – Anganwadi Worker and Helper
Total Vacancy – 344
Application Process: Online
Job Location – Uttara Kannada

ನೇಮಕಾತಿಯ ಪ್ರಮುಖ ದಿನಾಂಕಗಳು

  • ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಜುಲೈ 12, 2024
  • ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಆಗಸ್ಟ್ 12, 2024

ಖಾಲಿ ಇರುವ ಹುದ್ದೆಗಳ ವಿವರ:

ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ(Anganwadi Worker) ಹುದ್ದೆಗಳ ವಿವರ;

  • ಅಂಕೋಲಾ : 3
  • ಭಟ್ಕಳ : 7
  • ಹಳಿಯಾಳ : 12
  • ದಾಂಡೇಲಿ : 4
  • ಹೊನ್ನಾವರ : 4
  • ಜೋಯಾಡಾ : 2
  • ಕಾರವಾರ : 2
  • ಕುಮಟಾ : 3
  • ಮುಂಡಗೋಡ : 10
  • ಸಿದ್ದಾಪುರ : 7
  • ಶಿರಸಿ : 24
  • ಯಲ್ಲಾಪುರ : 5

ಅಂಗನವಾಡಿ ಸಹಾಯಕಿ(Anganwadi Helper) ಹುದ್ದೆಗಳ ವಿವರ;

  • ಅಂಕೋಲಾ : 17
  • ಭಟ್ಕಳ : 15
  • ಹಳಿಯಾಳ : 20
  • ದಾಂಡೇಲಿ : 12
  • ಹೊನ್ನಾವರ : 29
  • ಜೋಯಾಡಾ : 28
  • ಕಾರವಾರ : 6
  • ಕುಮಟಾ : 20
  • ಮುಂಡಗೋಡ : 29
  • ಸಿದ್ದಾಪುರ : 17
  • ಶಿರಸಿ : 55
  • ಯಲ್ಲಾಪುರ : 15

ಶೈಕ್ಷಣಿಕ ಅರ್ಹತೆ:

  • ಅಂಗನವಾಡಿ ಕಾರ್ಯಕರ್ತೆ : ಪಿಯುಸಿ. SSLC ಕನ್ನಡ ಭಾಷೆಯನ್ನು ಪ್ರಥಮ / ದ್ವಿತೀಯ ಭಾಷೆಯನ್ನಾಗಿ ಓದಿರಬೇಕು.
  • ಅಂಗನವಾಡಿ ಸಹಾಯಕಿ : SSLC / ತತ್ಸಮಾನ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.

ವಯೋಮಿತಿ:

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೇಮಕಾತಿಯ ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 19 ವರ್ಷ ಹಾಗೂ ಗರಿಷ್ಠ ವಯಸ್ಸು 35 ವರ್ಷ ಮೀರಿರಬಾರದು.

ಆಯ್ಕೆ ವಿಧಾನ:

  • ಮೆರಿಟ್ ಪಟ್ಟಿ
  • ದಾಖಲಾತಿ ಪರಿಶೀಲನೆ

How to Apply for Uttara Kannada Anganwadi Recruitment 2024

  • ಮೊದಲಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನೇಮಕಾತಿ ವೆಬ್ ಸೈಟ್ karnemakaone.kar.nic.in ಕ್ಲಿಕ್ ಮಾಡಿ.
  • ಕ್ಲಿಕ್ ಮಾಡಿದ ನಂತರ ಮುಖಪುಟದಲ್ಲಿ ಕಾಣುವ ನಿಮ್ಮ ಜಿಲ್ಲೆ ಮತ್ತು ತಾಲೂಕು “ಅಂಗನವಾಡಿ ಕಾರ್ಯಕರ್ತೆ ಅಥವಾ ಸಹಾಯಕಿ” ನಿಮ್ಮ ಆಯ್ಕೆ ಅನುಸಾರ ಕ್ಲಿಕ್ ಮಾಡಿ.
  • ನಂತರ ಮತ್ತೊಂದು ಪುಟವು ತೆರೆದುಕೊಳ್ಳುತ್ತದೆ ಅಲ್ಲಿ ಕೇಳಲಾಗುವ ಎಲ್ಲಾ ವಿವರಗಳನ್ನು ಭರ್ತಿ ಮಾಡಿ.
  • ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
  • ಕೊನೆಯದಾಗಿ ಸಲ್ಲಿಸು ಕ್ಲಿಕ್ ಮಾಡಿ.

Important Direct Links:

Official Short Notification PDFDownload
Notification & Guidlines PDFDownload
Online Application Form LinkApply Link Here
More UpdatesKarnataka Help.in

1 thought on “Anganwadi Recruitment 2024: 10th, PUC ಪಾಸ್…ಅಂಗನವಾಡಿ ಟೀಚರ್ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ”

Leave a Comment