Self Employment Loan Scheme in Karnataka: ನಮಸ್ಕಾರ ಬಂಧುಗಳೇ, ಇಂದು ನಾವು ಸ್ವಯಂ ಉದ್ಯೋಗ (ನೇರಸಾಲ) ಯೋಜನೆಯ ಬಗ್ಗೆ ಮಾಹಿತಿ ನೀಡಲಿದ್ದೇವೆ. ಈ ಮಾಹಿತಿ ನಿಮಗೆ ಸಹಾಯವಾಗಲಿದೆ ಎಂದು ನಾವು ಭಾವಿಸಿದ್ದೇವೆ. ಸಹಾಯವಾಗಿದ್ದಲ್ಲಿ ನಿಮ್ಮ ಹಿತೈಷಿಗಳಿಗೂ ತಮ್ಮದೇ ಶೇರ್ ಮಾಡಿ.
ಈ ಯೋಜನೆಯ ಉಪಯೋಗವೇನು, ಅರ್ಹತೆಗಳೇನು, ಬೇಕಾದ ದಾಖಲಾತಿಗಳೇನು, ಅರ್ಜಿ ಸಲ್ಲಿಸುವುದು ಹೇಗೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನೀಡಲಾಗಿದೆ.
Self Employment Loan Scheme in Karnataka 2024
ಸ್ವಯಂ ಉದ್ಯೋಗ ಯೋಜನೆಯಡಿಯಲ್ಲಿ ಅಲ್ಪಸಂಖ್ಯಾತರ ಸಮುದಾಯದ ಜನರಿಗೆ ವ್ಯಾಪಾರ, ಸಣ್ಣ ಪ್ರಮಾಣದ ಗುಡಿ ಕೈಗಾರಿಕೆ, ಸೇವಾ ಕ್ಷೇತ, ಕೃಷಿ ಆಧಾರಿತ ಚಟುವಟಿಕೆಗಳು ಮುಂತಾದಹುಗಳನ್ನು ಪ್ರಾರಂಭಿಸಲು ಸಾಲ ಮತ್ತು ಸಹಾಯಧನ ನೀಡುವುದು ಗುರಿಯನ್ನ ಹೊಂದಿದೆ.
ಸ್ವಯಂ ಉದ್ಯೋಗ ನೇರಸಾಲ ಯೋಜನೆ:
ಘಟಕ ವೆಚ್ಚ: ಶೇ.33
ಸಹಾಯಧನ: ರೂ.1.00 ಲಕ್ಷ
ಅರ್ಹತೆಗಳು(Eligibility):
- ಅರ್ಜಿದಾರರು ಸರ್ಕಾರಿ ಆದೇಶದಲ್ಲಿ ವಿವರಿಸಿದಂತೆ ಧಾರ್ಮಿಕ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದವರಾಗಿರಬೇಕು.
- ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
- ಅರ್ಜಿದಾರರ ವಯಸ್ಸು 18 ರಿಂದ 55 ವರ್ಷಗಳ ನಡುವೆ ಇರಬೇಕು
- ಎಲ್ಲಾ ಮೂಲಗಳಿಂದ ಕುಟುಂಬದ ವಾರ್ಷಿಕ ಆದಾಯ ಗ್ರಾಮೀಣ ಪ್ರದೇಶದಲ್ಲಿ ರೂ. 81,000/- ಹಾಗೂ ನಗರ ಪ್ರದೇಶದಲ್ಲಿ 1,03,000 ಗಿಂತ ಕಡಿಮೆ ಇರಬೇಕು.
- ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯರು ಕೇಂದ್ರ/ರಾಜ್ಯ ಸರ್ಕಾರಿ / PSU ಉದ್ಯೋಗಿಯಾಗಿರಬಾರದು.
- ಅರ್ಜಿದಾರರು KMDC ಯಲ್ಲಿ ಸುಸ್ತಿದಾರರಾಗಿರಬಾರದು
ಬೇಕಾದ ದಾಖಲಾತಿಗಳು(Required-Documents):
- ಆನ್‍ಲೈನ್ ಅರ್ಜಿ
- ಫಲಾನುಭವಿಯ ಇತ್ತೀಚಿನ 2 ಪಾಸ್ಪೋರ್ಟ್ ಅಳತೆಯ ಭಾವಚಿತ್ರ
- ಜಾತಿ/ಅಲ್ಪಸಂಖ್ಯಾತ ಪ್ರಮಾಣಪತ್ರ
- ಆದಾಯ ಪ್ರಮಾಣಪತ್ರ
- ಆಧಾರ್ ಕಾರ್ಡ್ ಪ್ರತಿ (ನಿವಾಸದ ಪುರಾವೆ)
- ಯೋಜನಾ ವರದಿ
How to Apply Self Employment Loan Scheme Karnataka
- ಮೊದಲು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅಥವಾ ನಾವು ಕೆಳಗೆ ನೀಡಿದ್ದೇವೆ ಅಲ್ಲಿ ಕ್ಲಿಕ್ ಮಾಡಿ
- ನಂತರ ಅಲ್ಲಿ ಮುಖ ಪುಟದಲ್ಲಿ “ಸ್ವಯಂ ಉದ್ಯೋಗ ಯೋಜನೆ” ಮೇಲೆ ಕ್ಲಿಕ್ ಮಾಡಿ
- ನಂತರ ಅಲ್ಲಿ ಮೊಬೈಲ್ ನಂಬರ್ ಮತ್ತು OTP ಹಾಕುವ ಮೂಲಕ ಲಾಗ್ ಇನ್ ಆಗಿ.
- ಮುಂದೆ ಅಲ್ಲಿ ಈ ಕೆಳಗಿನ ಎಲ್ಲಾ ಹಂತಗಳನ್ನು ಪೂರ್ಣಗೊಳಿಸಿ;
- *ಅರ್ಜಿದಾರರ ವಿವರಗಳು/Applicant Details
- *ಬ್ಯಾಂಕ್ ಮತ್ತು ಸಾಲದ ವಿವರಗಳು/ Bank & Loan Details
- *ದಾಖಲೆಗಳು/ Upload Documents
- *ಸಾರಾಂಶ/Summary
- ಕೊನೆ ಎಲ್ಲಾ ಮಾಹಿತಿ ಪರಿಶೀಲಿಸಿ ಅರ್ಜಿ ಸಲ್ಲಿಸಿ
Last Date of Self Employment Loan Scheme Karnataka 2024 Online Application form
ಸ್ವಯಂ ಉದ್ಯೋಗ ಯೋಜನೆ ಅರ್ಜಿ ಸಲ್ಲಿಸಿಸಲು ಕೊನೆ ದಿನಾಂಕ: February 29, 2024
ಅಂತಿಮ ನುಡಿ: ಈ ಮಾಹಿತಿ ನಿಮಗೆ ಸಹಾಯಕವಾಗಿದೆ ಎಂದು ನಾವು ಭಾವಿಸಿದ್ದೇವೆ. ಇದೆ ರೀತಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ ಚಾನೆಲ್ ಅಥವಾ ವಾಟ್ಸಾಪ್ಪ್ ಗ್ರೂಪ್ ಗೆ ಜಾಯಿನ್ ಆಗಿರಿ.
ಗಂಗಾ ಕಲ್ಯಾಣ ಉಚಿತ ಬೋರ್‌ವೇಲ್ ಯೋಜನೆ | Ganga Kalyana Yojana Online Application
Important Links:
Self Employment Loan Scheme in Karnataka Apply Online (Direct Link) | Apply Here |
Official Website | kmdconline |
More Updates | KarnatakaHelp.in |
Self Employment Loan Scheme FAQs
How to apply for Self Employment Loan Scheme in Karnataka 2024?
Visit the Official website of kmdconline.karnataka.gov.in to Apply online
What is the Last Date of Karnataka Self Employment Loan Scheme 2024?
February 29, 2024