KCC Loan Apply 2024: ಭಾರತ ಸರ್ಕಾರವು ರೈತರಿಗೆ ಹಲವಾರು ಯೋಜನೆಗಳ ಮೂಲಕ ಕೃಷಿ ಚಟುವಟಿಕೆಯನ್ನು ಪ್ರೋತ್ಸಾಹಿಸುತ್ತಾ ಬಂದಿದೆ. ಅದರಂತೆ ಇತ್ತೀಚಿನ ದಿನಗಳಲ್ಲಿ ರೈತನು ಬರಗಾಲ, ಬೆಳೆಗಳಿಗೆ ಸಿಗದ ಬೆಂಬಲ ಬೆಲೆ ಇನ್ನಿತರ ಸಮಸ್ಯೆಗಳಿಂದ ತೊಂದರೆ ಅನುಭವಿಸುತ್ತಿದ್ದಾನೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಕಿಸಾನ್ ಕ್ರೆಡಿಟ್ ಕಾರ್ಡ್ (KCC) ಸಾಲ ಯೋಜನೆ ರೈತರಿಗೆ ಕೃಷಿ ಅಗತ್ಯಗಳಿಗಾಗಿ ಸುಲಭವಾಗಿ ಸಾಲ ಪಡೆಯಲು ಕಿಸಾನ್ ಕ್ರೆಡಿಟ್ ಕಾರ್ಡ್ (KCC) ಮೂಲಕ ಹಣ ಒದಗಿಸುತ್ತದೆ. ಈ ಯೋಜನೆಯಡಿ ರೈತರು 1.6 ಲಕ್ಷ ರೂಪಾಯಿವರೆಗೆ ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ಸಾಲ ಪಡೆಯಬಹುದಾಗಿದೆ. ಅಂದರೆ, ತಿಂಗಳಿಗೆ ಶೇ.0.5ಕ್ಕಿಂತಲೂ ಕಡಿಮೆ ಬಡ್ಡಿಗೆ ಸಾಲ ಲಭ್ಯವಾಗಲಿದೆ.
ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಮೂಲಕ ರೈತರಿಗೆ ‘ಕ್ರೆಡಿಟ್ ಕಾರ್ಡ್’ ನೀಡಲಾಗುತ್ತದೆ. ಈ ಕಾರ್ಡ್ ಮೂಲಕ ಅವರು ತಮ್ಮ ಅಗತ್ಯಕ್ಕೆ ಅನುಗುಣವಾಗಿ 1.6 ಲಕ್ಷ ರೂಪಾಯಿವರೆಗೆ ಸಾಲ ಪಡೆಯಬಹುದು. ಹಾಗದರೆ ಕಿಸಾನ್ ಕ್ರೆಡಿಟ್ ಯೋಜನೆಯ ಮೂಲಕ ಸಾಲ ಪಡೆಯುವುದು ಹೇಗೆ ಎಂಬುದರ ಕುರಿತು ಈ ಕೆಳಗೆ ನೀಡಲಾಗಿದೆ.
KCC Loan Apply 2024 – Shortview
Article Name | KCC Loan Apply 2024 |
Year of launched | 1998 |
Apply Mode | Offline/Online |
Article Type | Govt Scheme |
Who can eligible | All Indian farmers |
Eligibility Requirements for Kisan Credit Card Loan 2024
ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ಪಡೆಯಲು ಬೇಕಾಗಿರುವ ಅರ್ಹತೆಗಳು ಈ ಕೆಳಗಿನಂತಿವೆ;
- ಭಾರತೀಯ ಪ್ರಜೆಯಾಗಿರಬೇಕು.
- ಸ್ವಂತ ಜಮೀನನ್ನು ಹೊಂದಿರಬೇಕು.
- ಈ ಕಾರ್ಡ್ ಪಡೆಯಲು, ಅರ್ಜಿದಾರರ ವಯಸ್ಸು 18 ವರ್ಷದಿಂದ 75 ವರ್ಷಗಳ ನಡುವೆ ಇರಬೇಕು.
- ಪಾನ್ ಕಾರ್ಡ್ ಹೊಂದಿರಬೇಕು.
Documents Required for Kisan Credit Card Scheme
ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಗೆ ಅಗತ್ಯವಿರುವ ದಾಖಲೆಗಳು ಈ ಕೆಳಗಿನಂತಿವೆ;
- ಜಮೀನಿನ ದಾಖಲೆಗಳು.
- ಅರ್ಜಿದಾರರ ಆಧಾರ್ ಕಾರ್ಡ್ ಅಥವಾ ಗುರುತಿನ ಚೀಟಿ.
- ಜಮೀನಿನ ಆರ್‌ಟಿಸಿ ಪ್ರತಿ.
- ಪ್ಯಾನ್ ಕಾರ್ಡ್.
- ಮೊಬೈಲ್ ಸಂಖ್ಯೆ ಮತ್ತು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ.
- ಬ್ಯಾಂಕ್ ಖಾತೆ ಪುಸ್ತಕ.
- ಬೇರೆ ಯಾವುದೇ ಬ್ಯಾಂಕಿನಲ್ಲಿ ಸಾಲಗಾರರಾಗಿಲ್ಲದ ಅಫಿಡವಿಟ್.
ಈ ಮೇಲಿನ ದಾಖಲೆಗಳ ಮೂಲಕ ನೀವು ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ಪಡೆಯಬಹುದಾಗಿದೆ.
Also Read: Kisan Credit Card: ಈ ಕಾರ್ಡ್ ನಿಮ್ಮ ಬಳಿ ಇದ್ದರೆ ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗುತ್ತೆ!
How to get loan through Kisan Credit Card.?
ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಸಾಲವನ್ನು ಪಡೆಯುವುದು ಹೇಗೆ ಎಂಬುದರ ಕುರಿತು ಈ ಕೆಳಗೆ ವಿವರಿಸಲಾಗಿದೆ.
ಆಫ್‌ಲೈನ್ ಪ್ರಕ್ರಿಯೆ:
- ಕೆಸಿಸಿ ಯೋಜನೆಗಳನ್ನು ನೀಡುವ ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗೆ ಬೇಟಿ ನೀಡಿ. SBI ಮತ್ತು INDIAN BANK ಸೇರಿದಂತೆ ಹಲವಾರು ಬ್ಯಾಂಕ್ ಗಳಲ್ಲಿ ಕೆಸಿಸಿ ಕಾರ್ಡ್ ಮೂಲಕ ಸಾಲ ನೀಡಲಾಗುತ್ತದೆ.
- ಬ್ಯಾಂಕ್ ನಿಂದ ಅರ್ಜಿ ನಮೂನೆಯನ್ನು ನಿಮಗೆ ನೀಡಲಾಗುತ್ತದೆ. ಅಗತ್ಯವಿರುವ ಎಲ್ಲಾ ವಿವರಗಳೊಂದಿಗೆ ಅರ್ಜಿಯನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ.
- ಪೂರ್ಣಗೊಳಿಸಿದ ಅರ್ಜಿಯನ್ನು ಅಗತ್ಯ ದಾಖಾಲೆಗಳನ್ನು ಸಲ್ಲಿಸಿ.
ಆನ್‌ಲೈನ್ ಪ್ರಕ್ರಿಯೆ:
ಕೆಸಿಸಿ(KCC) ಯೋಜನೆಗೆ ಒಳಗೊಂಡಿರುವ ಆನ್‌ಲೈನ್ ಅರ್ಜಿಗಳನ್ನು ಅನುಮತಿಸುತ್ತವೆ. ಈ ಪ್ರಕ್ರಿಯೆಯು ಸಾಮಾನ್ಯವಾಗಿ ಬ್ಯಾಂಕಿನ ವೆಬ್‌ಸೈಟ್‌ನಿಂದ ಅರ್ಜಿಪತ್ರವನ್ನು ಡೌನ್‌ಲೋಡ್ ಮಾಡುವುದು, ಅದನ್ನು ಭರ್ತಿ ಮಾಡುವುದು ಮತ್ತು ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿದ ಪ್ರತಿಗಳೊಂದಿಗೆ ಆನ್‌ಲೈನ್‌ನಲ್ಲಿ ಸಲ್ಲಿಸುವುದನ್ನು ಒಳಗೊಳ್ಳುತ್ತದೆ
ಸಲ್ಲಿಸಿದ ನಂತರ:
- ಬ್ಯಾಂಕ್ ನಿಮ್ಮ ಅರ್ಜಿ ಮತ್ತು ಸಾಲದ ಮನವಿಗಳನ್ನು ಪ್ರಕ್ರಿಯೆಗೊಳಿಸುತ್ತದೆ.
- ಅನುಮೋದನೆಯ ಮೇಲೆ, ಬ್ಯಾಂಕ್ ನಿಮ್ಮ ಕೆಸಿಸಿ ಮೇಲೆ ಕ್ರೆಡಿಟ್ ಮಿತಿಯನ್ನು ಮಂಜೂರು ಮಾಡುತ್ತದೆ.
Top Banks Offering Kisan Credit Card
ಕಿಸಾನ್ ಕ್ರೆಡಿಟ್ ಕಾರ್ಡ್ ನೀಡುತ್ತಿರುವ ಟಾಪ್ ಬ್ಯಾಂಕ್‌ಗಳು ಈ ಕೆಳಗಿನಂತಿವೆ;
- SBI
- HDFC ಬ್ಯಾಂಕ್.
- ಪಂಜಾಬ್ ನ್ಯಾಷನಲ್ ಬ್ಯಾಂಕ್.
- AXIS ಬ್ಯಾಂಕ್.
- ಬ್ಯಾಂಕ್ ಆಫ್ ಬರೋಂಡಾ.
- ICICI ಬ್ಯಾಂಕ್.
- ಕೆನರಾ ಬ್ಯಾಂಕ್.
Important Links:
Join Telegram | Click Here |
More Updates | Karnataka Help.in |