ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ಕರ್ನಾಟಕ SSLC ಪರೀಕ್ಷೆ 2 ಪೂರಕ ಫಲಿತಾಂಶವನ್ನು ನಾಳೆ(ಜು.10) ರಂದುಬೆಳಗ್ಗೆ 11:30 ಪ್ರಕಟಿಸಲಾಗುತ್ತದೆ.
ಪರೀಕ್ಷಾ ಮಂಡಳಿಯು ಪ್ರಥಮ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಯ ಮೂಲಕ ಮತ್ತೊಂದು ಅವಕಾಶವನ್ನು ನೀಡಲಾಗಿತ್ತು. ಈ ಪರೀಕ್ಷೆಯನ್ನು ಜೂನ್ 14 ರಿಂದ ಜೂನ್ 21 ರವರೆಗೆ ಕರ್ನಾಟಕ SSLC ಪೂರಕ ಪರೀಕ್ಷೆಯನ್ನು ನಡೆಸಲಾಗಿತ್ತು. ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು ತಮ್ಮ ಫಲಿತಾಂಶಕ್ಕಾಗಿ ಪರೀಕ್ಷಾ ಮಂಡಳಿಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕು. ಪೂರಕ ಪರೀಕ್ಷೆಯಲ್ಲಿ ತಮ್ಮ ಫಲಿತಾಂಶವನ್ನು ತಿಳಿದುಕೊಳ್ಳಲು ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ಬಳಸಿಕೊಂಡು ಲಾಗಿನ್ ಮಾಡುವ ಮೂಲಕ ಫಲಿತಾಂಶದ ವಿವರಗಳನ್ನು ಪಡೆದುಕೊಳ್ಳಬಹುದು. ಅಧಿಕೃತ ವೆಬ್ಸೈಟ್ಗಳಾದ www.karresults.nic.in ಮತ್ತು www.kseab.karnataka.gov.in ನಲ್ಲಿ ಫಲಿತಾಂಶ ಪ್ರಕಟವಾಗುತ್ತದೆ. ಈ ಲೇಖನದಲ್ಲಿ ನಾವು 10ನೇ ತರಗತಿಯ ಪೂರಕ ಪರೀಕ್ಷೆಗಳ ಫಲಿತಾಂಶವನ್ನು ವೀಕ್ಷಿಸುವುದು ಹೇಗೆ ಎಂಬುದರ ಕುರಿತು ಮಾಹಿತಿ ತಿಳಿದುಕೊಳ್ಳೋಣ.
Also Read: SSLC Supplementary Result 2024(OUT): ಪರೀಕ್ಷೆ 2ರ ಫಲಿತಾಂಶ; ಇಲ್ಲಿದೆ ಫಲಿತಾಂಶದ ಲಿಂಕ್
How to Check SSLC Exam 2 Result 2024
ಆನ್ ಲೈನ್ ಮೂಲಕ SSLC ಪೂರಕ ಪರೀಕ್ಷೆಯ ಫಲಿತಾಂಶವನ್ನು ವೀಕ್ಷಿಸುವುದು ಹೇಗೆ…?
• KSEAB ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ: https://kseab.karnataka.gov.in ಅಥವಾ https://karresults.nic.in/
• “SSLC ಪೂರಕ ಫಲಿತಾಂಶ 2024” ಲಿಂಕ್ ಕ್ಲಿಕ್ ಮಾಡಿ
• ನಿಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ
• ಫಲಿತಾಂಶವು ಪರದೆಯ ಮೇಲೆ ಪ್ರದರ್ಶಿಸುತ್ತದೆ
• ನಿಮ್ಮ ಫಲಿತಾಂಶವನ್ನು ಡೌನ್ಲೋಡ್ ಮಾಡಿ ಮತ್ತು ಪ್ರಿಂಟ್ ಮಾಡಿ
Important Direct Links:
More Updates | KarnatakaHelp.in |