ಕೇಂದ್ರ ಸರ್ಕಾರದ ಬುಡಕಟ್ಟು ವ್ಯವಹಾರಗಳ ಸಚಿವಾಲಯು 2024-25ರ ಶೈಕ್ಷಣಿಕ ಸಾಲಿನ ಪರಿಶಿಷ್ಟ ಪಂಗಡದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ಉನ್ನತ ಶಿಕ್ಷಣವನ್ನು (M.Phil ಅಥವಾ Ph.D.) ಮುಂದುವರಿಸಲು ಅವರಿಗೆ ಹಣಕಾಸಿನ ನೆರವಿಗೆ ಅರ್ಜಿ ಆಹ್ವಾನಿಸಲಾಗಿದೆ.
ಈ ಫೆಲೋಶಿಪ್ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಜಿದಾರರು ಪರಿಶಿಷ್ಟ ಪಂಗಡ (ST) ವರ್ಗಕ್ಕೆ ಸೇರಿದ ಅಭ್ಯರ್ಥಿಗಳು ಫೆಲೋಶಿಪ್ಗೆ ಅರ್ಹರಾಗಲು ಕನಿಷ್ಠ 55% ನೊಂದಿಗೆ ಸ್ನಾತಕೋತ್ತರ ಪದವಿ (PG)ಪಡೆದುಕೊಂಡಿರಬೇಕು. ಅರ್ಹ ಅಭ್ಯರ್ಥಿಗಳು ಫೆಲೋಶಿಪ್ ಗೆ ಅರ್ಜಿ ಸಲ್ಲಿಸಲು https://fellowship.tribal.gov.in ಭೇಟಿ ನೀಡಿ, ಸೆಪ್ಟೆಂಬರ್ 30ರ ಒಳಗೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಪ್ರತಿ ವರ್ಷ M.Phil/M.Phil +PhD/Ph.D ಗಾಗಿ ಒಟ್ಟು ಹೊಸ ಫೆಲೋಶಿಪ್ಗಳ ಸಂಖ್ಯೆ 750 ಆಗಿರುತ್ತದೆ.
ಬುಡಕಟ್ಟು ವ್ಯವಹಾರಗಳ ಸಚಿವಾಲಯ ವಿದ್ಯಾರ್ಥಿವೇತನ(Ministry of Tribal Affairs fellowship & Scholarship 2024-25)ದ ಕುರಿತು ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದ್ದು, ಸರಿಯಾಗಿ ಓದಿ ನಿಮ್ಮ ಸ್ನೇಹಿತರಿಗೂ ತಪ್ಪದೇ ಶೇರ್ ಮಾಡಿ.
ಫೆಲೋಶಿಪ್ ಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು:
- ಪರಿಶಿಷ್ಟ ಪಂಗಡ (ST) ವರ್ಗಕ್ಕೆ ಸೇರಿದದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅವಕಾಶ
- ಫೆಲೋಶಿಪ್ಗೆ ಅರ್ಹರಾಗಲು ಕನಿಷ್ಠ 55% ನೊಂದಿಗೆ ಸ್ನಾತಕೋತ್ತರ(Post-Graduation) ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
- ಅರ್ಜಿದಾರ, ವಿದ್ಯಾರ್ಥಿವೇತನ ಪ್ರಶಸ್ತಿ ಸಂಬಂಧಿತ ವರ್ಷದ ಜುಲೈ ಮೊದಲ ದಿನದಂದು ಗರಿಷ್ಠ 36 ವರ್ಷಗಳು ಹೊಂದಿರಬೇಕು. (ಅರ್ಜಿದಾರರ ಹುಟ್ಟಿದ ದಿನಾಂಕವು 01/07/1988 ರ ಮೊದಲು ಇರಬಾರದು.)
- ಮಾನ್ಯತೆ ಪಡೆದ ವಿಶ್ವವಿದ್ಯಾಲಯ / ಶೈಕ್ಷಣಿಕ ಸಂಸ್ಥೆಗಳಲ್ಲಿನ ನಿಯಮಿತ ಮತ್ತು ಪೂರ್ಣ ಸಮಯದ ಪಿಎಚ್ಡಿಗೆ ಪ್ರವೇಶ ಪಡೆಯಬೇಕು.
Documents required for NFST Fellowship 2024-25 Registration
- ಪ್ರೊಫೈಲ್ ಫೋಟೋ {ಗಾತ್ರ: -50 KB-100 KB} – JPEG ಫೈಲ್ ಮಾತ್ರ
- ಜನ್ಮ ದಿನಾಂಕ ಪುರಾವೆ [10ನೇ ತರಗತಿಯ ಪ್ರಮಾಣಪತ್ರ/10ನೇ ಅಂಕಪಟ್ಟಿ/ಶಾಲೆಯಿಂದ ಹೊರಡುವ ಪ್ರಮಾಣಪತ್ರ(TC)/ 10ನೇ ಪರೀಕ್ಷೆಯ ಪ್ರವೇಶ ಪತ್ರ, ಇದು ಜನ್ಮ ದಿನಾಂಕವನ್ನು ಹೊಂದಿರಬೇಕು]- PDF ಫೈಲ್ ಮಾತ್ರ
- ಸ್ನಾತಕೋತ್ತರ ಮಾರ್ಕ್ಶೀಟ್(PG) (ಎಲ್ಲಾ ಸೆಮಿಸ್ಟರ್ಗಳು) – PDF ಫೈಲ್ ಮಾತ್ರ
- ಕನ್ವರ್ಷನ್ ಸರ್ಟಿಫಿಕೇಟ್ -PDF ಫೈಲ್ ಮಾತ್ರ
- ST ಪ್ರಮಾಣಪತ್ರ – PDF ಫೈಲ್ ಮಾತ್ರ
- PWD ಪ್ರಮಾಣಪತ್ರ – ಪಿಡಿಎಫ್ ಫೈಲ್ ಮಾತ್ರ
- PVTG ಪ್ರಮಾಣಪತ್ರ [ಅನ್ವಯಿಸಿದರೆ] – PDF ಫೈಲ್ ಮಾತ್ರ
- Bonafide ಪ್ರವೇಶದ ಪ್ರಮಾಣಪತ್ರ/ Ph.D ಗೆ ಸೇರುವುದು. / ಇಂಟಿಗ್ರೇಟೆಡ್ M.Phil.+ Ph.D.-PDF ಫೈಲ್ ಮಾತ್ರ
Ministry of Tribal Affairs Scholarship 2024-25
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಸೆಪ್ಟೆಂಬರ್ 30, 2024
Step By Step Process of Ministry of Tribal Affairs fellowship & Scholarship Online Form 2024
ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ…?
- ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಅಧಿಕೃತ ವೆಬ್ ಸೈಟ್ https://fellowship.tribal.gov.in/StudentsRegistrationForm.aspx ಭೇಟಿ ನೀಡಿ.
- ಅರ್ಹತೆ ಮತ್ತು ಮಾನದಂಡಗಳನ್ನು ಗಮನವಿಟ್ಟು ಓದಿಕೊಂಡು ಸಲಿಸು ಕ್ಲಿಕ್ ಮಾಡಿ.
- ನಂತರ ಹೊಸ ಖಾತೆಯನ್ನು ರಚಿಸಲು ಅಗತ್ಯ ವಿವರಗಳನ್ನು ನಮೂದಿಸಿ ಪಾಸ್ವರ್ಡ್ ರಚಿಸಿಕೊಳ್ಳಿ.
- ಪಾಸ್ವರ್ಡ್ ಮತ್ತು ನೋಂದಣಿ ಸಂಖ್ಯೆಯ ಸಹಾಯದಿಂದ ಲಾಗಿನ್ ಮಾಡಿ.
- ಅರ್ಜಿ ನಮೂನೆಯಲ್ಲಿ ಕೇಳಲಾದ ಎಲ್ಲಾ ವಿವರಗಳನ್ನು ಒದಗಿಸಿ.
- ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
- ಕೊನೆಯದಾಗಿ ಸಲ್ಲಿಸು ಕ್ಲಿಕ್ ಮಾಡಿ ಅರ್ಜಿ ಸಂಖ್ಯೆಯನ್ನು ಉಳಿಸಿಕೊಳ್ಳಿ.
Important Direct Links:
Official Notification 2024 PDF | Download |
Online Application Form Link | Apply Here |
Ministry of Tribal Affairs Fellowship and Scholarship Guidelines PDF | Download |
Official Website | tribal.gov.in |
More Updates | Karnataka Help.in |