WhatsApp Channel Join Now
Telegram Group Join Now

SSC JHT 2024 Exam Date(OUT): ಜೂನಿಯರ್ ಹಿಂದಿ ಅನುವಾದಕ ಪೇಪರ್-1 ಪರೀಕ್ಷೆಯ ದಿನಾಂಕ ಪ್ರಕಟ

ಸಿಬ್ಬಂದಿ ಆಯ್ಕೆ ಆಯೋಗವು (SSC) ಜೂನಿಯರ್ ಹಿಂದಿ ಅನುವಾದಕ (JHT) ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿತ್ತು, ಸದರಿ ನೇಮಕಾತಿಗೆ ಸಂಬಂಧಿಸಿದ ಪರೀಕ್ಷಾ ವೇಳಾಪಟ್ಟಿ(SSC JHT 2024 Exam Date)ಯನ್ನು ಇಂದು ಪ್ರಕಟಿಸಲಾಗಿದೆ.

SSC JHT ಪರೀಕ್ಷೆ ಕೇಂದ್ರ ಸರ್ಕಾರದ ವಿವಿಧ ಇಲಾಖೆಯಲ್ಲಿ ಜೂನಿಯರ್ ಹಿಂದಿ ಭಾಷಾಂತರಕಾರ, ಜೂನಿಯರ್ ಭಾಷಾಂತರಕಾರ ಮತ್ತು ಹಿರಿಯ ಹಿಂದಿ ಭಾಷಾಂತರಕಾರ ಮತ್ತು ಸ್ಟೆನೋಗ್ರಾಫರ್ ಗ್ರೂಪ್ ಬಿ ನಾನ್-ಗೆಜೆಟೆಡ್ ಹುದ್ದೆಗಳಿಗೆ ಈ ನೇಮಕಾತಿ ನಡೆಯುತ್ತದೆ. ಸಿಬ್ಬಂದಿ ಆಯ್ಕೆ ಆಯೋಗವು ಜೂನಿಯರ್ ಹಿಂದಿ ಭಾಷಾಂತರಕಾರರ ಪರೀಕ್ಷೆ 2024 ಪತ್ರಿಕೆ 1ರ ಪರೀಕ್ಷೆಯನ್ನು  ಡಿಸೆಂಬರ್ 9, 2024 ರಂದು ನಡೆಸಲಾಗುತ್ತದೆ. ಈ ನೇಮಕಾತಿಯ ಮೂಲಕ ಒಟ್ಟು 312 ಅನುವಾದಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಈಗಾಗಲೇ ಸಾಕಷ್ಟು ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲಾಗಿದ್ದು, ಲಿಖಿತ ಪರೀಕ್ಷೆಗಾಗಿ ತಯಾರಿ ನಡೆಸುತ್ತಿದ್ದಾರೆ. ಈ ಪರೀಕ್ಷೆಯ ಪತ್ರಿಕೆ-1 ಅನ್ನು ಆನ್ ಲೈನ್ ಮೂಲಕ ನಡೆಸಲಾಗುತ್ತಿದ್ದು, ಈ ಪರೀಕ್ಷೆಯ ಮೂಲಕ ಅಭ್ಯರ್ಥಿಗಳ ಭಾಷೆ ಮತ್ತು ಸಾಹಿತ್ಯದ ಅರಿವು ತಿಳಿದುಕೊಳ್ಳಲು ಪರೀಕ್ಷೆಯನ್ನು ನಡೆಸಲಾಗುತ್ತದೆ. ವಸ್ತುನಿಷ್ಠ ಮಾದರಿಯ ಬಹು ಆಯ್ಕೆಯ ಪ್ರಶ್ನೆಗಳಿಂದ ಕೂಡಿರುತ್ತದೆ. ಸಾಮಾನ್ಯ ಇಂಗ್ಲಿಷ್ ಮತ್ತು ಸಾಮಾನ್ಯ ಹಿಂದಿ ವಿಷಯದಲ್ಲಿನ ಪ್ರಶ್ನೆಗಳನ್ನು ಕೇಳಲಾಗುತ್ತದೆ.

ಪತ್ರಿಕೆ 2ರಲ್ಲಿ ವಿವರಣಾತ್ಮಕ ಪ್ರಶ್ನೆಗಳು, ಅನುವಾದ ಮತ್ತು ಪ್ರಬಂಧ ಬರವಣಿಗೆ ಇರುತ್ತದೆ. ಎರಡೂ ಪತ್ರಿಕೆಗಳಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ದಾಖಲಾತಿ ಪರಿಶೀಲನೆಗಾಗಿ ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ. ಪರೀಕ್ಷೆ ಹತ್ತಿರವಾಗುತ್ತಿದ್ದಂತೆ ಅಧಿಕೃತ ವೆಬ್ ಸೈಟ್ ನಲ್ಲಿ ಪ್ರವೇಶ ಪತ್ರಗಳನ್ನು ಪ್ರಕಟಿಸಲಾಗುತ್ತದೆ.

Ssc Jht 2024 Exam Date
Ssc Jht 2024 Exam Date

ಪರೀಕ್ಷೆಗೆ ನೋಂದಾಯಿಸಿಕೊಂಡಿರುವ ಅಭ್ಯರ್ಥಿಗಳು  SSC JHT ಪರೀಕ್ಷೆಯ ವೇಳಾಪಟ್ಟಿಯನ್ನು ಅಧಿಕೃತವಾಗಿ ವೆಬ್‌ಸೈಟ್ ssc.gov.in‌ನಲ್ಲಿ ಪರಿಶೀಲಿಸಬಹುದಾಗಿದೆ.

SSC JHT Exam Date 2024

ಹಿಂದಿ ಅನುವಾದಕರ ಪರೀಕ್ಷೆ (ಪತ್ರಿಕೆ-I) – ಡಿಸೆಂಬರ್ 9, 2024 

Important Direct Links:

SSC JHT 2024 Exam Date Notice PDFDownload
Official Websitessc.gov.in
More UpdatesKarnataka Help.in

Leave a Comment