Kittur Rani Chennamma Sainik School Admission 2025-26: ಸೈನಿಕ ವಸತಿ ಶಾಲೆಗೆ ಪ್ರವೇಶ ಪರೀಕ್ಷೆಗಾಗಿ ಅರ್ಜಿ ಆಹ್ವಾನ

Follow Us:

ಕಿತ್ತೂರ ರಾಣಿ ಚನ್ನಮ್ಮ ಬಾಲಕಿಯರ ಸೈನಿಕ ವಸತಿ ಶಾಲೆಯು ಬಾಲಕಿಯರಿಗಾಗಿಯೇ ಇರುವ ಸುಪ್ರಸಿದ್ದ ಪಬ್ಲಿಕ್ ಶಾಲೆಯಾಗಿದ್ದು ಸೈನಿಕ ತರಬೇತಿ ನೀಡಿ ಸಧೃಡ ಭಾರತದ ನಿರ್ಮಾಣ ಹಾಗೂ ರಾಷ್ಟ್ರಪ್ರೇಮವನ್ನು ಹುಟ್ಟು ಹಾಕುವಂತಹ ಗುರಿಯನ್ನು ಹೊಂದಿದೆ. ಶೈಕ್ಷಣಿಕ ವರ್ಷ 2025-26 ನೆಯ ಸಾಲಿಗೆ 6ನೆೇ ತರಗತಿಗೆ ಅರ್ಹ ವಿದ್ಯಾರ್ಥಿಗಳಿಂದ ಪ್ರವೇಶ ಪರೀಕ್ಷೆಗಾಗಿ ಅರ್ಜಿಗಳನ್ನು ಕರೆಯಲಾಗಿದೆ.

ಈ ಯೋಜನೆಯ ಅಡಿಯಲ್ಲಿ ಪ್ರವೇಶ ಪಡೆದಂತ ಅಭ್ಯರ್ಥಿಗಳು ತಮ್ಮ ಶಿಕ್ಷಣವನ್ನು ಇದೇ ಸಂಸ್ಥೆಯಲ್ಲಿ 12ನೆಯ ತರಗತಿಯವರೆಗೆ ವಿಜ್ಞಾನ ವಿಭಾಗದಲ್ಲಿ ಮುಂದುವರೆಸಬೇಕಾಗುತ್ತದೆ. ವಿಫಲರಾದಲ್ಲಿ ಕರ್ನಾಟಕ ಸರ್ಕಾರದಿಂದ ಪಡೆದಂಥ ವಿದ್ಯಾರ್ಥಿವೇತನವನ್ನು ಸಂಪೂರ್ಣವಾಗಿ ಭರಿಸಬೇಕಾಗುತ್ತದೆ.

ಕಿತ್ತೂರ ರಾಣಿ ಚನ್ನಮ್ಮ ಸೈನಿಕ ವಸತಿ ಶಾಲೆಗೆ ಪ್ರವೇಶ ಪರೀಕ್ಷಗೆ ಹಾಜರಾಗಲು ಆಸಕ್ತ ವಿದ್ಯಾರ್ಥಿಗಳು ಅಥವಾ ತಮ್ಮ ಮಕ್ಕಳನ್ನು ಈ ಶಾಲೆಗೆ ಪ್ರವೇಶ ಪಡಿಸಲು ಆಸಕ್ತಿ ಹೊಂದಿರುವ ಪೋಷಕರು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಆಫ್ ಲೈನ್ ಮೂಲಕವಿದ್ದು, ಅರ್ಜಿ ಶುಲ್ಕ ಮಾತ್ರ ಆನ್ ಲೈನ್ ಮೂಲಕ ಪಾವತಿಸಬೇಕು. ಈ (Kittur Rani Chennamma Sainik School Admission 2025-26) ಪ್ರವೇಶಾತಿಯ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ ಸಂಪೂರ್ಣವಾಗಿ ಓದಿ ಅರ್ಥೈಸಿಕೊಳ್ಳಿ ಹಾಗೂ ಇತರರಿಗೂ ತಪ್ಪದೆ ಶೇರ್ ಮಾಡಿ.

ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ- ಅಕ್ಟೋಬರ್ 24, 2024
  • ಅರ್ಜಿ ಸಲ್ಲಿಕೆ ಕೊನೆ ದಿನಾಂಕ(ದಂಡ ರಹಿತವಾಗಿ)- ಡಿಸೆಂಬರ್ 15, 2024
  • ಅರ್ಜಿ ಸಲ್ಲಿಕೆ ಕೊನೆ ದಿನಾಂಕ(ದಂಡ ಸಹಿತವಾಗಿ)- ಡಿಸೆಂಬರ್ 31, 2024
  • ಅರ್ಜಿ ಭರ್ತಿ ಮಾಡಿದ ಪ್ರತಿ ಸಲ್ಲಿಸಲು ಕೊನೆ ದಿನಾಂಕ(ದಂಡ ರಹಿತವಾಗಿ)-20 ಡಿಸೆಂಬರ್ 2024
  • ಅರ್ಜಿ ಭರ್ತಿ ಮಾಡಿದ ಪ್ರತಿ ಸಲ್ಲಿಸಲು ಕೊನೆ ದಿನಾಂಕ(ದಂಡ ಸಹಿತವಾಗಿ)- 05 ಜನವರಿ 2025
  • ಪರೀಕ್ಷೆಯ ದಿನಾಂಕ- ಫೆಬ್ರವರಿ 2, 2025

ಶೈಕ್ಷಣಿಕ ಅರ್ಹತೆ:

ಪ್ರಸ್ತುತ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಬಾಲಕಿಯರು ಮಾತ್ರ ಪ್ರವೇಶ ಪರೀಕ್ಷೆಗೆ ಅರ್ಹರಾಗಿರುತ್ತಾರೆ

ವಯೋಮಿತಿ:

ಈ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಜೂನ್ 1, 2013 ಮತ್ತು ಮೇ 31, 2015ರ ನಡುವೆ ಜನಿಸಿದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಆಯ್ಕೆ ಪ್ರಕ್ರಿಯೆ:

  • ಲಿಖಿತ ಪರೀಕ್ಷೆ(OMR)
  • ದೇಹದಾರ್ಢತೆ ಪರೀಕ್ಷೆ
  • ವೈದ್ಯಕೀಯ ಪರೀಕ್ಷೆ
  • ಮೌಖಿಕ ಸಂದರ್ಶನ ಪರೀಕ್ಷೆ

ಪರೀಕ್ಷಾ ಶುಲ್ಕ:

ದಂಡ ರಹಿತವಾಗಿ – ರೂ. 2000/- (1600/- ಪ.ಜಾ/ಪ.ಪಂಗಂಡದವರಿಗೆ ಅವರು ಕರ್ನಾಟಕ ನಿವಾಸಿಯಾಗಿರಬೇಕು).

ದಂಡ ಸಹಿತವಾಗಿ – ರೂ. 2,500/- (2,100/- ಪ.ಜಾ/ಪ.ಪಂಗಂಡದವರಿಗೆ ಅವರು ಕರ್ನಾಟಕ ನಿವಾಸಿಯಾಗಿರಬೇಕು)

Kittur Sainik School Fees Deatils 2024-25(ಶುಲ್ಕ ವಿವರ):

ರೂ. 2,24,300/-(ಊಟ, ವಸತಿ, ಸಮವಸ್ತ್ರ ಮತ್ತು ಇತರೆ ಠೇವಣಿಗಳು ಸೇರಿ) ಶೈಕ್ಷಣಿಕ ಸಾಮಗ್ರಿ ಮತ್ತು ಇತರೆ ಶುಲ್ಕ ಹೊರತುಪಡಿಸಿ.

ಪೂರ್ಣ ಪ್ರಮಾಣ ಶುಲ್ಕ ಪಾವತಿ ಪ್ರವೇಶ ಯೋಜನೆ : ಅಭ್ಯರ್ಥಿಗಳ ಅರ್ಹತೆ (ಲಿಖಿತ ಪರೀಕ್ಷೆ+ಸಂದರ್ಶನ)ಯು ಸಾಧಾರಣ ಪ್ರತಿಭಾ ಮಟ್ಟದ್ದಾಗಿದ್ದಲ್ಲಿ ಒಂದು ವೇಳೆ ಸೀಟುಗಳು ಲಭ್ಯವಿದ್ದ ಸಂದರ್ಭದಲ್ಲಿ ಪೂರ್ಣ ಪ್ರಮಾಣದ ಶುಲ್ಕ ಭರಿಸಿ ಪ್ರವೇಶ ಪಡೆಯಬಹುದು. ಇಂಥ ಸ್ಥಳ ಕಾಯ್ದಿಡುವಿಕೆಗೆ ಪಾಲಕರು ತಮ್ಮ ಇಚ್ಛೆಯನ್ನು ಅರ್ಜಿಫಾರ್ಮಗಳಲ್ಲಿ ನಮೂದಿಸಬೇಕಾಗುತ್ತದೆ.

How to Apply for Kittur Rani Chennamma Sainik School Admission 2025-26

ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ಅಥವಾ ವಿದ್ಯಾರ್ಥಿಯ ಪೋಷಕರು ಅರ್ಜಿ ಸಲ್ಲಿಕೆ ಪಿಡಿಎಫ್ ಫಾರ್ಮ್ ಅನ್ನು ನಾವು ಕೆಳಗೆ ನೀಡಿರುವ ಲಿಂಕ್ ಮೂಲಕ ಡೌನ್ಲೋಡ್ ಮಾಡಿಕೊಂಡು ನಂತರ ಅದರಲ್ಲಿ ಕೇಳಲಾದ ನಿಗದಿತ ಮಾಹಿತಿಯ ಕುರಿತು ಸರಿಯಾಗಿ ಭರ್ತಿಮಾಡಿ ಹಾಗೂ ನಿಗದಿತ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಕೆ ಕೊನೆ ದಿನಾಂಕದ ಮೊದಲು ತಲುಪುವಂತೆ ಅಥವಾ ಖುದ್ದಾಗಿ ಈ ಕೆಳಗಿನ ವಿಳಾಸಕ್ಕೆ ಭೇಟಿ ನೀಡಿ ಸಲ್ಲಿಸಬೇಕು.

ಕಿತ್ತೂರು ರಾಣಿ ಚನ್ನಮ್ಮ ಬಾಲಕಿಯರ ಸೈನಿಕ ವಸತಿ ಶಾಲೆ, ಕಿತ್ತೂರು – 591115 ಜಿಲ್ಲಾ : ಬೆಳಗಾವಿ

ಹೆಚ್ಚಿನ ಮಾಹಿತಿಗಾಗಿ: 08288-234608, 9483501100, 8123409432

ಕಛೇರಿಯ ಸಮಯ: ಭಾನುವಾರ / ರಜಾದಿನಗಳನ್ನು ಹೊರತುಪಡಿಸಿ, ವಾರದ ದಿನಗಳಲ್ಲಿ ಸೋಮವಾರ ಬೆ.9.00 ರಿಂದ ಮ.1.30 ಮತ್ತು ಮ.3.00 ರಿಂದ ಸಂ.5.30ರ ವರೆಗೆ. ತೆರೆದಿರುತ್ತದೆ.

Important Direct Links:

Kittur Rani Chennamma Sainik School Admission 2025-26 Notification PDFDownload
Kittur Rani Chennamma Sainik School Admission 2025-26 Application Form PDF LinkDownload
More UpdatesKarnatakaHelp.in

Leave a Comment