ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್ (ನಬಾರ್ಡ್)ನಲ್ಲಿ ಖಾಲಿ ಇರುವ ಆಫೀಸ್ ಅಟೆಂಡೆಂಟ್(ಗ್ರೂಪ್ ‘ಸಿ’) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ನಬಾರ್ಡ್ನಲ್ಲಿ ಪ್ರಸ್ತುತ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈ ನೇಮಕಾತಿ(NABARD Office Attendant Recruitment 2024)ಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯ ಕುರಿತು ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ನೀಡಲಾಗಿದೆ. ಈ ಲೇಖನವನ್ನು ಕೊನೆವರೆಗೂ ಓದಿ, ಇತರರಿಗೂ ತಪ್ಪದೇ ಶೇರ್ ಮಾಡಿ.
Shortview of NABARD Office Attendant Recruitment 2024
Organization Name – National Bank for Agriculture and Rural Development (NABARD)
Post Name – Office Attendant (Group C)
Total Vacancy – 108
Application Process: Online
Job Location – All Over India
ಪ್ರಮುಖ ದಿನಾಂಕಗಳು:
ಆನ್ ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ – ಅಕ್ಟೋಬರ್ 02, 2024
ಆನ್ ಲೈನ್ ಅರ್ಜಿ ಸಲ್ಲಿಕೆ ಕೊನೆ ದಿನಾಂಕ – ಅಕ್ಟೋಬರ್ 21, 2024
ಖಾಲಿ ಇರುವ ಹುದ್ದೆಯ ವಿವರ:
ಆಫೀಸ್ ಅಟೆಂಡೆಂಟ್(ಗ್ರೂಪ್ ‘ಸಿ’) – 108 ಹುದ್ದೆಗಳು
ಶೈಕ್ಷಣಿಕ ಅರ್ಹತೆ:
ನಬಾರ್ಡ್ ಈ ನೇಮಕಾತಿಯ ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಹಾವಿದ್ಯಾಲಯದಿಂದ ಎಸ್.ಎಸ್.ಎಲ್.ಸಿ( ) ವಿದ್ಯಾರ್ಹತೆ ಹೊಂದಿರಬೇಕು.
ವಯೋಮಿತಿ:
ನಬಾರ್ಡ್ ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಅಭ್ಯರ್ಥಿಯ ವಯೋಮಿತಿಯು 1.10. 2024ರಂತೆ ಕನಿಷ್ಠ-18 ವರ್ಷದಿಂದ ಗರಿಷ್ಠ-30 ವರ್ಷ ಹೊಂದಿರಬೇಕು.
ಆಯ್ಕೆ ಪ್ರಕ್ರಿಯೆ:
- ಪೂರ್ವಭಾವಿ ಆನ್‌ಲೈನ್ ಪರೀಕ್ಷೆ
- ಮುಖ್ಯ ಆನ್‌ಲೈನ್ ಪರೀಕ್ಷೆ
- ಭಾಷಾ ಪ್ರಾವೀಣ್ಯತೆ ಪರೀಕ್ಷೆ (LPT)
- ವೈದ್ಯಕೀಯ ಫಿಟ್ನೆಸ್
- ಡಾಕ್ಯುಮೆಂಟ್ ಪರಿಶೀಲನೆ
ಸಂಬಳ:
ಈ ಹುದ್ದೆಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಪ್ರತಿ ತಿಂಗಳಿಗೆ ರೂ.35000/- ಸಂಬಳ ನೀಡಲಾಗುತ್ತದೆ.
ಅರ್ಜಿ ಶುಲ್ಕ:
- SC/ST/PWBD ಅಭ್ಯರ್ಥಿಗಳಿಗೆ : ರೂ.50/-
- ಸಾಮಾನ್ಯ ಅಭ್ಯರ್ಥಿಗಳಿಗೆ : ರೂ.450/-
- ಪಾವತಿ ವಿಧಾನ : ಆನ್‌ಲೈನ್
How to Apply for NABARD Office Attendant 2024 Recruitment
- ಮೊದಲು ಭೇಟಿ ಅಧಿಕೃತ nabard.org ವೆಬ್‌ಸೈಟ್‌ಗೆ ಭೇಟಿ ನೀಡಿ.
- ಮುಖಪುಟದಲ್ಲಿ ಕಾಣುವ “Career Notices” ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಮುಂದೆ “NABARD Office Attendant 2024 Notification” ನಲ್ಲಿ Apply Link ಮೇಲೆ ಕ್ಲಿಕ್ ಮಾಡಿ.
- ಅಗತ್ಯ ವಿವರಗಳನ್ನು ಸಲ್ಲಿಸಿ ರಿಜಿಸ್ಟರ್/ಲಾಗಿನ್ ಮಾಡಿ.
- ನಂತರ ಅರ್ಜಿ ನಮೂನೆಯಲ್ಲಿ ಕೇಳಲಾದ ಎಲ್ಲಾ ವಿವರಗಳನ್ನು ಭರ್ತಿ ಮಾಡಿ.
- ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
- ಅರ್ಜಿ ಶುಲ್ಕವನ್ನು ಪಾವತಿಸಿ ಕೊನೆಯದಾಗಿ ಸಲ್ಲಿಸಿ ಕ್ಲಿಕ್ ಮಾಡಿ.
- ಈ ರೀತಿಯಾಗಿ ಅರ್ಜಿಸಲ್ಲಿಸಬಹುದಾಗಿದೆ.
Important Direct Links:
Official Notification PDF | Download |
Online Application Form Link(Active) | New Registration || Login |
Official Short Notice PDF | Download |
Official Website | www.nabard.org |
More Updates | Karnataka Help.in |