ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು 2026ನೇ ಸಾಲಿನ ಜೂನ್ ಮಾಹೆಯ ವಿಶ್ವವಿದ್ಯಾಲಯ ಅನುದಾನ ಆಯೋಗ(ಯುಜಿಸಿ)-ರಾಷ್ಟ್ರೀಯ ಅರ್ಹತಾ ಪರೀಕ್ಷೆ(ಎನ್‌ಇಟಿ)ಯ ನೋಂದಣಿಗೆ ಅರ್ಜಿ ಆಹ್ವಾನಿಸಿದೆ.
ಒಟ್ಟು 85 ವಿಷಯಗಳಲ್ಲಿ ಪರೀಕ್ಷೆ ನಡೆಯಲಿದೆ. ಭಾರತೀಯ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಜೂನಿಯರ್ ರಿಸರ್ಚ್ ಫೆಲೋಶಿಪ್, ಪಿಎಚ್‌ಡಿ ಪ್ರವೇಶ ಮತ್ತು ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಭಾರತೀಯ ಪ್ರಜೆಗಳ ಅರ್ಹತೆಯನ್ನು ನಿರ್ಧರಿಸುವ ಪರೀಕ್ಷೆಯಾಗಿದೆ. ಆಸಕ್ತ ಅಭ್ಯರ್ಥಿಗಳು ನೋಂದಣಿಗಾಗಿ ಮೇ 20ರೊಳಗೆ ಸಂಸ್ಥೆಯ ಅಧಿಕೃತ ವೆಬ್‌ಸೈಟ್ https://ugcnet.nta.nic.in/ ಗೆ ಭೇಟಿ ನೀಡಿ.
UGC-NET ಪರೀಕ್ಷೆಗೆ ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
- ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆಯ ಪ್ರಾರಂಭದ ದಿನಾಂಕ – ಏಪ್ರಿಲ್ 29, 2026
- ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ – ಮೇ 20, 2026
- ಆನ್‌ಲೈನ್‌ನಲ್ಲಿ ಪರೀಕ್ಷಾ ಶುಲ್ಕ ಪಾವತಿಸಲು ಕೊನೆಯ ದಿನಾಂಕ – ಮೇ 20, 2026
- ಆನ್‌ಲೈನ್‌ನಲ್ಲಿ ಅರ್ಜಿಯನ್ನು ತಿದ್ದುಪಡಿ ಮಾಡಲು ಕೊನೆಯ ದಿನಾಂಕ – ಮೇ 22-24, 2026
- CBT ಪರೀಕ್ಷಾ ದಿನಾಂಕ – ಜೂನ್ 22-30, 2026
ಶೈಕ್ಷಣಿಕ ಅರ್ಹತೆ;
• ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳು/ಸಂಸ್ಥೆಗಳಿಂದ (ಪರೀಕ್ಷೆ ಬರೆಯಲು ನಿರ್ಧರಿಸಿರುವ ವಿಷಯದಲ್ಲಿ) 55% ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.
• ಒಬಿಸಿ-ಎನ್‌ಸಿಎಲ್/ಎಸ್‌ಸಿ/ಎಸ್‌ಟಿ/ಪಿಡಬ್ಲ್ಯೂಡಿ/ತೃತೀಯ ಲಿಂಗಿ ಅಭ್ಯರ್ಥಿಗಳು (ಪರೀಕ್ಷೆ ಬರೆಯಲು ನಿರ್ಧರಿಸಿರುವ ವಿಷಯದಲ್ಲಿ) 50% ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.
• ಸ್ನಾತಕೋತ್ತರ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳು ಅಥವಾ ಅರ್ಹತಾ ಸ್ನಾತಕೋತ್ತರ ಪದವಿ ಅಂತಿಮ ವರ್ಷದ ಪರೀಕ್ಷೆ ಬರೆದು ಫಲಿತಾಂಶ ಇನ್ನೂ ಬರಬೇಕಾಗಿರುವ ಅಭ್ಯರ್ಥಿಗಳು ಅಥವಾ ಅರ್ಹತಾ ಪರೀಕ್ಷೆಗಳು ವಿಳಂಬವಾಗಿರುವ ಅಭ್ಯರ್ಥಿಗಳು ಸಹ UGC-NET ಜೂನ್ 2026 ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದು.
ವಯೋಮಿತಿ:
01-06-2026 ರಂತೆ;
• ಜೂನಿಯರ್ ರಿಸರ್ಚ್ ಫೆಲೋಶಿಪ್ (ಜೆ.ಆರ್.ಎಫ್) ಪರೀಕ್ಷೆಗೆ ಅರ್ಜಿ ಸಲ್ಲಿಸಲು ಗರಿಷ್ಠ ವಯಸ್ಸಿನ ಮಿತಿ – 30 ವರ್ಷಗಳು.
• ಪಿಎಚ್‌ಡಿ ಪ್ರವೇಶ ಹಾಗೂ ಸಹಾಯಕ ಪ್ರಾಧ್ಯಾಪಕರ ಅರ್ಹತೆ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಯಾವುದೇ ಗರಿಷ್ಠ ವಯಸ್ಸಿನ ಮಿತಿಯಿಲ್ಲ.
ವಯೋಮಿತಿ ಸಡಿಲಿಕೆ; ಪ.ಜಾತಿ, ಪ.ಪಂಗಡ, ಪಿ.ಡಬ್ಲ್ಯೂ.ಡಿ ಹಾಗೂ ತೃತೀಯ ಲಿಂಗ ಮತ್ತು ಮಹಿಳಾ ಅರ್ಜಿದಾರರಿಗೆ 5 ವರ್ಷಗಳವರೆಗೆ ವಯೋಮಿತಿ ಸಡಿಲಿಕೆಯನ್ನು ಒದಗಿಸಲಾಗಿದೆ.
• ಎಲ್‌ಎಲ್‌ಎಂ ಪದವಿ ಪಡೆದ ಅಭ್ಯರ್ಥಿಗಳಿಗೆ 03 ವರ್ಷಗಳ, ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಿದ ಅಭ್ಯರ್ಥಿಗಳಿಗೆ 05 ವರ್ಷಗಳವರೆಗೆ ವಯೋಮಿತಿ ಸಡಿಲಿಕೆಯನ್ನು ಒದಗಿಸಲಾಗಿದೆ.
ಆಯ್ಕೆ ವಿಧಾನ:
- ಕಂಪ್ಯೂಟರ್ ಆಧಾರಿತ ಪರೀಕ್ಷೆ
- ದಾಖಲೆ ಪರಿಶೀಲನೆ
- ಅರ್ಹತಾ ಪಟ್ಟಿ
UGC-NET-2026 ಪರೀಕ್ಷಾ ದಿನಾಂಕ
2026ರ ಜೂನ್ ಮಾಹೆಯ UGC-NET ರಾಷ್ಟ್ರೀಯ ಅರ್ಹತಾ ಪರೀಕ್ಷೆಯಲ್ಲಿ ಅರ್ಹತೆಯನ್ನು ಪಡೆಯಲು ಅಭ್ಯರ್ಥಿಗಳಿಗೆ ಮೊದಲನೇ ಹಂತದಲ್ಲಿ ನಡೆಸಲಾಗುವ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ಜೂನ್ 22 ರಿಂದ 30ರವರೆಗೆ ನಡೆಸಲು ನಿರ್ಧರಿಸಲಾಗಿದ್ದು, ಪರೀಕ್ಷಾ ಸಮಯ ಹಾಗೂ ಪ್ರವೇಶ ಪತ್ರವನ್ನು ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಸಂಸ್ಥೆ ತಿಳಿಸಿದೆ.
ಪರೀಕ್ಷಾ ಶುಲ್ಕ:
ಸಾಮಾನ್ಯ/ಮೀಸಲಾತಿ ಇಲ್ಲದ ಅಭ್ಯರ್ಥಿಗಳಿಗೆ ₹1150
ಸಾಮಾನ್ಯ-ಇಡಬ್ಲ್ಯೂಎಸ್/ಒಬಿಸಿ-ಎನ್‌ಸಿಎಲ್ ಅಭ್ಯರ್ಥಿಗಳಿಗೆ ₹600
ಪ.ಜಾತಿ, ಪ.ಪಂಗಡ, ಪಿ.ಡಬ್ಲ್ಯೂ.ಡಿ ಹಾಗೂ ತೃತೀಯ ಲಿಂಗಿ ಅಭ್ಯರ್ಥಿಗಳಿಗೆ ₹325
ಅರ್ಜಿ ಸಲ್ಲಿಕೆಯ ವಿಧಾನ
• ಎನ್‌ಟಿಎ ಅಧಿಕೃತ ವೆಬ್‌ಸೈಟ್ https://ugcnet.nta.nic.in/ಗೆ ಭೇಟಿ ನೀಡಿ.
• ನಂತರ ಅಭ್ಯರ್ಥಿ ಚಟುವಟಿಕೆ ವಿಭಾಗದ ಕೆಳಗೆ ನೀಡಲಾಗಿರುವ – “UGC-NET ಜೂನ್ 2026 ಪರೀಕ್ಷೆಗೆ ನೋಂದಣಿ ವಿಂಡೋ” ಲಿಂಕ್ ಮೇಲೆ ಕ್ಲಿಕ್ ಮಾಡಿ.
• ಹೊಸ ಬಳಕೆದಾರರಾಗಿದ್ದಲ್ಲಿ, ನೋಂದಾಯಿಸಿ ಅಥವಾ ಅಪ್ಲಿಕೇಶನ್ ಸಂಖ್ಯೆ, ಪಾಸ್ವರ್ಡ್ ಹಾಗೂ ಕ್ಯಾಪ್ಚ ನಮೂದಿಸಿ ಲಾಗಿನ್ ಆಗಿ.
• ಬಳಿಕ ಅರ್ಜಿ ನಮೂನೆಯಲ್ಲಿ ಕೇಳಲಾಗುವ ಸ್ವ ವಿವರ, ಸಹಿ ಭಾವಚಿತ್ರ ಶೈಕ್ಷಣಿಕ ವಿವರ ಹಾಗೂ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
• ಬಳಿಕ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿ ಮಾಡಿ.
• ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ.
• ಭವಿಷ್ಯದ ಉಲ್ಲೇಖಕ್ಕಾಗಿ ಯಶಸ್ವಿಯಾಗಿ ಸಲ್ಲಿಸಿದ ದೃಢೀಕರಣ ಪುಟವನ್ನು ಡೌನ್‌ಲೋಡ್ ಮಾಡಿ ಮುದ್ರಣ ತೆಗೆದುಕೊಳ್ಳಿ.
Important Direct Links:
| Official Notification PDF | Download |
| UGC NET June 2026 Online Application Form Link | Apply Now |
| Official Website | ugcnet.nta.nic.in |
| More Updates | KarnatakaHelp.in |