ಮುಂಬೈ: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಅಪ್ರೆಂಟ್‌ಶಿಪ್ ಕಾಯ್ದೆ 1961ರಡಿ ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಮೇ 19 ಕೊನೆದಿನವಾಗಿದೆ.
ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿನ ತನ್ನ ಶಾಖೆಗಳಿಗೆ 1865 ಪದವೀಧರ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಲಿದೆ. ಆಸಕ್ತರು ಅರ್ಜಿ ಸಲ್ಲಿಸಲು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಅಧಿಕೃತ ವೆಬ್ಸೈಟ್ https://www.unionbankofindia.bank.in/en/common/recruitmentಗೆ ಭೇಟಿ ನೀಡಿ.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಏಪ್ರಿಲ್ 29, 2026
- ಅರ್ಜಿ ಸಲ್ಲಿಸಲು ಹಾಗೂ ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ – ಮೇ 19, 2026
ಖಾಲಿ ಇರುವ ಹುದ್ದೆಗಳ ವಿವರ:
ಅಂಡಮಾನ್ ಮತ್ತು ನಿಕೋಬಾರ್ 01
ಆಂಧ್ರ ಪ್ರದೇಶ 303
ಅಸ್ಸಾಂ 29
ಬಿಹಾರ 60
ಚಂಡಿಘಡ 06
ಛತ್ತೀಸ್ಗಡ 25
ದಾದ್ರಾ ಮತ್ತು ನಗರ್ ಹವೇಲಿ 01
ದಮನ್ ಮತ್ತು ದಿಯೂ 01
ಗೋವಾ 05
ಗುಜರಾತ್ 58
ಹರಿಯಾಣ 30
ಹಿಮಾಚಲ ಪ್ರದೇಶ 01
ಜಮ್ಮು ಕಾಶ್ಮೀರ 02
ಜಾರ್ಖಂಡ್ 34
ಕರ್ನಾಟಕ 131
ಕೇರಳ 39
ಲಡಾಖ್ 01
ಲಕ್ಷದ್ವೀಪ 01
ಮಧ್ಯ ಪ್ರದೇಶ 116
ಮಹಾರಾಷ್ಟ್ರ 196
ಮೇಘಾಲಯ 01
ನಾಗಾಲ್ಯಾಂಡ್ 01
ದೆಹಲಿ 48
ಒಡಿಶಾ 58
ಪುದುಚೇರಿ 01
ಪಂಜಾಬ್ 21
ರಾಜಸ್ಥಾನ 32
ಸಿಕ್ಕಿಂ 02
ತಮಿಳುನಾಡು 95
ತೆಲಂಗಾಣ 164
ತ್ರಿಪುರ 01
ಉತ್ತರ ಪ್ರದೇಶ 335
ಉತ್ತರಾಖಂಡ 10
ಪಶ್ಚಿಮ ಬಂಗಾಳ 56
ಒಟ್ಟು – 1865
ಶೈಕ್ಷಣಿಕ ಅರ್ಹತೆ:
ನೇಮಕಾತಿಯ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಯಾವುದೇ ವಿಭಾಗದಲ್ಲಿ ಪದವಿ ಪೂರ್ಣಗೊಳಿಸಬೇಕು.
ವಯೋಮಿತಿ;
01-04-2026 ರಂತೆ;
ಕನಿಷ್ಠ ವಯಸ್ಸಿನ ಮಿತಿ 20 ವರ್ಷಗಳು, ಗರಿಷ್ಠ ವಯಸ್ಸಿನ ಮಿತಿ 28 ವರ್ಷಗಳು.
ಒಬಿಸಿ ಅಭ್ಯರ್ಥಿಗಳಿಗೆ 03 ವರ್ಷಗಳು, ಪ.ಜಾತಿ ಮತ್ತು ಪ.ಪಂಗಡದ ಅಭ್ಯರ್ಥಿಗಳಿಗೆ 05 ವರ್ಷಗಳು, ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ 10 ವರ್ಷಗಳು, ಪಿಡಬ್ಲ್ಯೂಬಿಡಿ ಒಬಿಸಿ ಅಭ್ಯರ್ಥಿಗಳಿಗೆ 13 ವರ್ಷಗಳು, ಪಿಡಬ್ಲ್ಯೂಬಿಡಿ ಪ.ಜಾತಿ ಮತ್ತು ಪ.ಪಂಗಡದ ಅಭ್ಯರ್ಥಿಗಳಿಗೆ 15 ವರ್ಷಗಳು.
ಆಯ್ಕೆ ವಿಧಾನ:
- ಆನ್‌ಲೈನ್ ಪರೀಕ್ಷೆ
- ಸ್ಥಳೀಯ ಭಾಷಾ ಪ್ರಾವೀಣ್ಯತೆಯ ಪರೀಕ್ಷೆ
- ದಾಖಲೆ ಪರಿಶೀಲನೆ
- ಅಂತಿಮ ಆಯ್ಕೆ
ಸ್ಟೈಫಂಡ್:
ಗ್ರಾಮೀಣ/ಅರೆ-ನಗರ ಶಾಖೆ ವ್ಯಾಪ್ತಿಯಲ್ಲಿ ₹15,000
ನಗರ ಶಾಖೆ ವ್ಯಾಪ್ತಿಯಲ್ಲಿ ₹18,000
ಮೆಟ್ರೋ ಶಾಖೆ ವ್ಯಾಪ್ತಿಯಲ್ಲಿ ₹20,000
ಅರ್ಜಿ ಶುಲ್ಕ:
ಸಾಮಾನ್ಯ ಹಾಗೂ ಓಬಿಸಿ ಪುರುಷ ಅಭ್ಯರ್ಥಿಗಳಿಗೆ ₹944
ಸಾಮಾನ್ಯ ಹಾಗೂ ಓಬಿಸಿ ಮಹಿಳಾ ಅಭ್ಯರ್ಥಿಗಳಿಗೆ ₹708
ಪ.ಜಾತಿ, ಪ.ಪಂಗಡ, ಲಿಂಗತ್ವ ಅಲ್ಪಸಂಖ್ಯಾತ ಮತ್ತು ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ₹236
ಅರ್ಜಿ ಸಲ್ಲಿಕೆ ಹೇಗೆ.?
• ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಅಧಿಕೃತ ವೆಬ್ಸೈಟ್ https://www.unionbankofindia.bank.in/en/common/recruitment ಗೆ ಭೇಟಿ ನೀಡಿ.
• ನೇಮಕಾತಿ ಪುಟದಲ್ಲಿ “1865 ರ ಶಿಷ್ಯರ ನಿಶ್ಚಿತಾರ್ಥ” ಶೀರ್ಷಿಕೆಯ ಕೆಳಗೆ ನೀಡಲಾಗಿರುವ *ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ* ಆಯ್ಕೆಯನ್ನು ಆರಿಸಿ.
• ಬಳಿಕ ಹೊಸ ಬಳಕೆದಾರರಾಗಿದ್ದಲ್ಲಿ ನೋಂದಣಿ ಮಾಡಿ ಅಥವಾ ಇಮೇಲ್ ಐಡಿ ಹಾಗೂ ಪಾಸ್ವರ್ಡ್ ನಮೂದಿಸಿ ಬಳಸಿ ಲಾಗಿನ್ ಆಗಿ.• ಮುಂದುವರೆದಂತೆ ಅರ್ಜಿಯಲ್ಲಿ ಕೇಳಲಾಗುವ ಸ್ವ-ವಿವರ, ಭಾವಚಿತ್ರ, ಸಹಿ, ಶೈಕ್ಷಣಿಕ ಮಾಹಿತಿ ಹಾಗೂ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
• ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಿ.
• ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ.
• ಭವಿಷ್ಯದ ಉಲ್ಲೇಖಕ್ಕಾಗಿ ಯಶಸ್ವಿಯಾಗಿ ಸಲ್ಲಿಸಿದ ಅರ್ಜಿಯ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.
Important Direct Links:
| Official Notification PDF | Download |
| Online Application Form Link | Apply Now |
| Official Website | www.unionbankofindia.co.in |
| More Updates | Karnatakahelp.in |
Union Bank Post jobs
Any work from home or in bank
Account’s details
Txa
Accounting Accounting