ಫಾರ್ಮಸಿಸ್ಟ್ ಹುದ್ದೆಗಳ ಭರ್ತಿ: ವಾಕ್‌-ಇನ್ ಸಂದರ್ಶನಕ್ಕೆ ಆಹ್ವಾನ

Published on:

ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಡಿ ಬರುವ ಎಚ್‌ಎಲ್‌ಎಲ್ ಲೈಫ್‌ಕೇರ್ ಲಿಮಿಟೆಡ್‌ನಲ್ಲಿ ಖಾಲಿ ಇರುವ ನಾನಾ ಫಾರ್ಮಸಿಸ್ಟ್ ಹುದ್ದೆಗಳ ಭರ್ತಿಗಾಗಿ ವಾಕ್‌-ಇನ್‌ ಸಂದರ್ಶನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಸಹಾಯಕ ಫಾರ್ಮಾಸಿಸ್ಟ್, ಫಾರ್ಮಾಸಿಸ್ಟ್ ಗ್ರೇಡ್ IV, ಫಾರ್ಮಾಸಿಸ್ಟ್ ಗ್ರೇಡ್ III, ಫಾರ್ಮಾಸಿಸ್ಟ್ ಗ್ರೇಡ್ II ಹಾಗೂ ಫಾರ್ಮಾಸಿಸ್ಟ್ ಗ್ರೇಡ್ I ಹುದ್ದೆಗಳಿಗೆ ಭರ್ತಿ ನಡೆಯಲಿದ್ದು, ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಿದೆ. ಆಸಕ್ತ ಉದ್ಯೋಗಾಕಾಂಕ್ಷಿಗಳು ಅಧಿಕೃತ ಜಾಲತಾಣ https://www.lifecarehll.com/careersದಲ್ಲಿ ಲಭ್ಯವಿರುವ ಅರ್ಜಿ ನಮೂನೆ ಪಡೆದು ತುಂಬಿ, ಮೇ 04ರಂದು ‘ಅಮೃತ್(AMRIT) ಫಾರ್ಮಸಿ, ಒಪಿಡಿ ಆವರಣದ ಹತ್ತಿರ,
ನಿಮ್ಹಾನ್ಸ್ ಆಸ್ಪತ್ರೆ, ಬೆಂಗಳೂರು-29’ನಲ್ಲಿ ನಡೆಯಲಿರುವ ವಾಕ್ ಇನ್ ಸಂದರ್ಶನದಲ್ಲಿ ಭಾಗವಹಿಸಲು ಸೂಚಿಸಲಾಗಿದೆ.

ನೇಮಕಾತಿಯ ಪ್ರಮುಖ ದಿನಾಂಕಗಳು

ವಾಕ್ ಇನ್ ಸಂದರ್ಶನ ನಡೆಯುವ ದಿನಾಂಕ – ಮೇ 04, 2026 (ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 12:00 ರವರೊಳಗೆ ವರದಿ ಮಾಡಿಕೊಳ್ಳುವುದು)

ಶೈಕ್ಷಣಿಕ ಅರ್ಹತೆ;

✓ ಸಹಾಯಕ ಫಾರ್ಮಾಸಿಸ್ಟ್ ಹುದ್ದೆಗೆ; ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಡಿ.ಫಾರ್ಮ/ಬಿ.ಫಾರ್ಮ ಪೂರ್ಣಗೊಳಿಸಿರುವ ಫ್ರೆಶರ್ಸ್ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

✓ ಫಾರ್ಮಾಸಿಸ್ಟ್ ಗ್ರೇಡ್ IV ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಡಿ.ಫಾರ್ಮ/ಬಿ.ಫಾರ್ಮ ಪೂರ್ಣಗೊಳಿಸಿರಬೇಕು ಜೊತೆಗೆ ಚಿಲ್ಲರೆ ಔಷಧಾಲಯದಲ್ಲಿ ಕನಿಷ್ಠ 2 ವರ್ಷಗಳ ವೃತ್ತಿ ಅನುಭವವನ್ನು ಹೊಂದಿರಬೇಕು.

✓ ಫಾರ್ಮಾಸಿಸ್ಟ್ ಗ್ರೇಡ್ III ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಡಿ.ಫಾರ್ಮ/ಬಿ.ಫಾರ್ಮ ಪೂರ್ಣಗೊಳಿಸಿರಬೇಕು ಜೊತೆಗೆ ಚಿಲ್ಲರೆ ಔಷಧಾಲಯದಲ್ಲಿ ಕನಿಷ್ಠ 4 ವರ್ಷಗಳ ವೃತ್ತಿ ಅನುಭವವನ್ನು ಹೊಂದಿರಬೇಕು.

✓ ಫಾರ್ಮಾಸಿಸ್ಟ್ ಗ್ರೇಡ್ II ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಡಿ.ಫಾರ್ಮ/ಬಿ.ಫಾರ್ಮ ಪೂರ್ಣಗೊಳಿಸಿರಬೇಕು ಜೊತೆಗೆ ಚಿಲ್ಲರೆ ಔಷಧಾಲಯದಲ್ಲಿ ಕನಿಷ್ಠ 6 ವರ್ಷಗಳ ವೃತ್ತಿ ಅನುಭವವನ್ನು ಹೊಂದಿರಬೇಕು.

✓ ಫಾರ್ಮಾಸಿಸ್ಟ್ ಗ್ರೇಡ್ I ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಡಿ.ಫಾರ್ಮ/ಬಿ.ಫಾರ್ಮ ಪೂರ್ಣಗೊಳಿಸಿರಬೇಕು ಜೊತೆಗೆ ಚಿಲ್ಲರೆ ಔಷಧಾಲಯದಲ್ಲಿ ಕನಿಷ್ಠ 8 ವರ್ಷಗಳ ವೃತ್ತಿ ಅನುಭವವನ್ನು ಹೊಂದಿರಬೇಕು.

ವಯೋಮಿತಿ:

01-05-2026 ರಂತೆ;

ಗರಿಷ್ಠ ವಯಸ್ಸಿನ ಮಿತಿ 37 ವರ್ಷಗಳು

ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡ, ಓಬಿಸಿ ಹಾಗೂ ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ ಸರ್ಕಾರಿ ನಿಯಮಗಳ ಅನುಸಾರ ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ.

ಆಯ್ಕೆ ವಿಧಾನ:

• ಲಿಖಿತ ಪರೀಕ್ಷೆ
• ಸಂದರ್ಶನ
• ದಾಖಲಾತಿ ಪರಿಶೀಲನೆ
• ಅಂತಿಮ ಆಯ್ಕೆ

ಸಂಬಳ:

ಆಯ್ಕೆಯಾದ ಅಭ್ಯರ್ಥಿಗಳಿಗೆ ಅವರ ಹುದ್ದೆಗಳಿಗೆ ಅನುಗುಣವಾಗಿ ಎಚ್‌ಎಲ್‌ಎಲ್ ಲೈಫ್‌ಕೇರ್ ಲಿಮಿಟೆಡ್‌ ಮಾನದಂಡಗಳ ಅನ್ವಯ ವೇತನವನ್ನು ನೀಡಲಾಗುತ್ತದೆ.

ಅರ್ಜಿ ಸಲ್ಲಿಕೆ ಹಾಗೂ ನೇರ ಸಂದರ್ಶನ ನಡೆಯುವ ದಿನಾಂಕ ಹಾಗೂ ಸ್ಥಳ

ಹಂತ-1 ಎಚ್‌ಎಲ್‌ಎಲ್ ಲೈಫ್‌ಕೇರ್ ಲಿಮಿಟೆಡ್‌ ಅಧಿಕೃತ ಜಾಲತಾಣ https://www.lifecarehll.com/careers/view/reference/2bcab9d935d219641434683dd9d18a03jYiHಕ್ಕೆ ಭೇಟಿ ನೀಡಿ.

ಹಂತ-2 ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ ಮುದ್ರಣ ತೆಗೆದುಕೊಂಡು.

ಹಂತ-3 ಬಳಿಕ ಅರ್ಜಿಯಲ್ಲಿ ಕೇಳಲಾಗುವ ಸ್ವ ವಿವರ, ಭಾವಚಿತ್ರ, ಸಹಿ ಶೈಕ್ಷಣಿಕ ಮಾಹಿತಿ ಹಾಗೂ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ.

• ಮೇ 04ರಂದು ಈ ಕೆಳಗಿನ ವಿಳಾಸದಲ್ಲಿ ನಡೆಸಲಾಗುವ ನೇರ ಸಂದರ್ಶನಕ್ಕೆ ಭರ್ತಿ ಮಾಡಿದ ಅರ್ಜಿ ಹಾಗೂ ಅಗತ್ಯ ದಾಖಲಾತಿಗಳೊಂದಿಗೆ ಭಾಗವಹಿಸಬಹುದು.

ನೇರ ಸಂದರ್ಶನ ನಡೆಯುವ ಸ್ಥಳ: ಅಮೃತ್‌(AMRIT) ಫಾರ್ಮಸಿ, OPD ಆವರಣದ ಹತ್ತಿರ, NIMHANS ಆಸ್ಪತ್ರೆ, ಬೆಂಗಳೂರು-29

Important Direct Links:

Official Notification PDFDownload
Application Form PDFDownload
Official Websitewww.lifecarehll.com
More UpdatesKarnatakaHelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

1 thought on “ಫಾರ್ಮಸಿಸ್ಟ್ ಹುದ್ದೆಗಳ ಭರ್ತಿ: ವಾಕ್‌-ಇನ್ ಸಂದರ್ಶನಕ್ಕೆ ಆಹ್ವಾನ”

Leave a Comment