ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಗಾಗಿ 2025-26ನೇ ಸಾಲಿಗೆ ಸಮಾಜ ಕಲ್ಯಾಣ ಇಲಾಖೆ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ(ಕೆಕೆಆರ್‌ಡಿಬಿ) ವತಿಯಿಂದ ಐಎಎಸ್ ಹಾಗೂ ಕೆಎಎಸ್ ಪರೀಕ್ಷೆಗಳ ಪೂರ್ವಭಾವಿ ತರಬೇತಿ ಪ್ರವೇಶ ಪರೀಕ್ಷೆ ನೋಂದಣಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ)ಯು ಮೇ 31ರಂದು ನಡೆಸಲಾಗುವುದು. ಐಎಎಸ್ 100 ಸ್ಥಾನಗಳು, ಕೆಎಎಸ್ 400 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು. ತರಬೇತಿ ಸಮಯದಲ್ಲಿ ಶಿಷ್ಯವೇತನ, ವಸತಿ ಸೌಲಭ್ಯ ನೀಡಲಾಗುವುದಿಲ್ಲ. ಕಡ್ಡಾಯವಾಗಿ 371(ಜೆ) ಪ್ರಮಾಣಪತ್ರ ಹೊಂದಿರತಕ್ಕದ್ದು. ಕುಟುಂಬದ ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದ ₹5 ಲಕ್ಷ ಆಗಿರಬೇಕು. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಮೇ 07 ರಿಂದ 21ರವೆರೆಗೆ ಇರಲಿದ್ದು, ಆಸಕ್ತರು ಕಲಬುರಗಿ ಜಿಲ್ಲೆಯ ಅಧಿಕೃತ ಜಾಲತಾಣ https://kalaburagi.nic.in/ಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ ದಿನಾಂಕ- ಮೇ 07
- ಅರ್ಜಿ ಸಲ್ಲಿಕೆ ಪ್ರಕ್ರಿಯೆ ಕೊನೆಯ ದಿನಾಂಕ- ಮೇ 21
- ಪ್ರವೇಶ ಪರೀಕ್ಷೆಯ ಹಾಲ್ ಟಿಕೆಟ್ ಡೌನ್ಲೋಡ್ ಆರಂಭ ದಿನ – ಮೇ 28
- ಸಿಇಟಿ ಪರೀಕ್ಷೆಯ ದಿನಾಂಕ – ಮೇ 31
ಶೈಕ್ಷಣಿಕ ಅರ್ಹತೆ:
ಪದವಿಯಲ್ಲಿ ಉತ್ತೀರ್ಣರಾಗಿರುವ ಅಥವಾ ಅಂತಿಮ ಸೆಮಿಸ್ಟರ್‌ನಲ್ಲಿ ವ್ಯಾಸಾಂಗ ಮಾಡುತ್ತಿರುವವರು ಅರ್ಹರು ಆದರೆ ದಾಖಲಾತಿ ಪರಿಶೀಲನೆ ಸಮಯದಲ್ಲಿ ಪದವಿ ಪೂರ್ಣಗೊಳಿಸಿರುವ/ಮುಕ್ತಾಯಗೊಳಿಸಿರು ಬಗ್ಗೆ ಅಧಿಕೃತ ದಾಖಲೆಗಳನ್ನು ಹೊಂದಿರಬೇಕು ಹಾಗೂ ಸಲ್ಲಿಸಬೇಕು.
ತರಬೇತಿ ಅವಧಿ:
ಆಯ್ಕೆಯಾದ ಅಭ್ಯರ್ಥಿಗಳಿಗೆ 10 ತಿಂಗಳ ತರಬೇತಿ ಒದಗಿಸಲಾಗುವುದು.
ವಯಸ್ಸಿನ ಮಿತಿ:
ಕನಿಷ್ಠ 21 ವರ್ಷದಿಂದ ಗರಿಷ್ಠ 37 ವರ್ಷ ವಯೋಮಾನದವರು ಅರ್ಹರು.
ಕೋರ್ಸ್ ವಿವರ:
ಕೇಂದ್ರ ಲೋಕಸೇವಾ ಆಯೋಗ ಕ್ರಮವಾಗಿ ಪ್ರತಿ ವರ್ಷ ನಡೆಸುವ ಐ.ಎ.ಎಸ್, ಐ.ಎಫ್.ಎಸ್. ಐ.ಪಿ.ಎಸ್, ಐ.ಆರ್.ಎಸ್. ಮೊದಲಾದ 23 ವಿವಿಧ ಸೇವೆಗಳ ಹುದ್ದೆಗಳು ಹಾಗೂ ಮತ್ತು ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಕೆಎಎಸ್ ಹುದ್ದೆಗಳ ಭರ್ತಿಗಾಗಿ ನಡೆಸುವ ಗೆಜೆಟೆಡ್ ಪ್ರೋಬೆಷನರಿ ಆಫೀಸರ್ಸ್ ಪರೀಕ್ಷೆಗಳ ಸಿದ್ಧತೆಗೆ ತರಬೇತಿ ನೀಡಲಾಗುವುದು.
ಆಯ್ಕೆ ವಿಧಾನ:
- ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ)
- ದಾಖಲೆ ಪರಿಶೀಲನೆ
ಪರೀಕ್ಷಾ ಶುಲ್ಕ:
ಎಲ್ಲಾ ವರ್ಗದ ಅಭ್ಯರ್ಥಿಗಳಿಗೂ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
ಬೇಕಾಗುವ ದಾಖಲೆಗಳು:
- ವಿದ್ಯಾರ್ಹತೆಯ ದಾಖಲೆಗಳು(ಪದವಿ ವ್ಯಾಸಾಂಗ ಪ್ರಮಾಣಪತ್ರ)
- ಅಭ್ಯರ್ಥಿಯ ಪೋಟೋ ಹಾಗೂ ಸಹಿ
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ವಿಶೇಷ ವಿಕಲಚೇತನ ಪ್ರಮಾಣ ಪತ್ರ(ಅನ್ವಯಿಸಿದರೆ)
- 371(ಜೆ) ಪ್ರಮಾಣ ಪತ್ರ
ಮೀಸಲಾತಿ ವಿವರ:
ಅರ್ಜಿ ಸಲ್ಲಿಕೆ ಹೇಗೆ.?
ಅಭ್ಯರ್ಥಿಗಳು ಕಲಬುರಗಿ ಜಿಲ್ಲೆಯ ಅಧಿಕೃತ ಜಾಲತಾಣ https://kalaburagi.nic.in/ದಲ್ಲಿ ಇತ್ತೀಚಿನ ಅಪ್ಡೇಟ್ ವಿಭಾಗದಡಿ ನೀಡಲಾದ “ಐ.ಎ.ಎಸ್ /ಕೆ.ಎ.ಎಸ್ ಪೂರ್ವ ಭಾವಿ ತರಬೇತಿಗೆ ಅರ್ಜಿ ಸಲ್ಲಿಸಲು – ಕ್ಲಿಕ್ ಮಾಡಿ New” ಶಿರ್ಷೀಕೆ ಲಿಂಕ್ ಮೇಲೆ ಒತ್ತುವ ಮೂಲಕ ಅರ್ಜಿ ನಮೂನೆ ತೆರೆಯುತ್ತದೆ, ಅಲ್ಲಿ ಕೇಳಲಾದ ಸಂಪೂರ್ಣ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ.
ಗಮನಿಸಿ: : ಯುಪಿಎಸ್ಸಿ/ಕೆಪಿಎಸ್ಸಿ,ಐಎಎಸ್, ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗೆ ಇಲಾಖೆಯಿಂದ ಈಗಾಗಲೇ ತರಬೇತಿ ಪಡೆದವರು ಪುನಃ ಪಡೆಯಲು ಅರ್ಹರಿರುವುದಿಲ್ಲ. ಎಸ್‌ಎಸ್‌ಸಿ/ಆರ್‌ಆರ್‌ಬಿ/ಬ್ಯಾಂಕಿಂಗ್/ಗ್ರೂಪ್-ಸಿ ಸ್ಪರ್ಧಾತ್ಮಕ ಪರೀಕ್ಷೆಗೆ ಇಲಾಖೆಯಿಂದ ತರಬೇತಿ ಪಡೆದ ಅಭ್ಯರ್ಥಿಗಳು ತರಬೇತಿಗೆ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ ಎಂದು ಅವರು ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.
Important Direct Links:
| IAS KAS Pre-Examination Training 2025-26 Notification PDF | Download |
| IAS KAS Pre-Examination Training 2025-26 Online Application Form Link | Apply Now |
| Official Website | kalaburagi.nic.in |
| More Updates | Karnatakahelp.in |
I want to become an IAS
I prepare the KAS exams