ಪವರ್‌ಗ್ರಿಡ್‌: ನಾನ್‌-ಎಕ್ಸಿಕ್ಯೂಟಿವ್‌ ಹುದ್ದೆಗಳ ನೇಮಕಾತಿ

Published on:

ಭಾರತ ಸರ್ಕಾರದ ವಿದ್ಯುತ್ ಸಚಿವಾಲಯದಡಿ ಬರುವ ಸಾರ್ವಜನಿಕ ವಲಯದ ಉದ್ಯಮವಾಗಿರುವ ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್‌ನಲ್ಲಿ ನಾನ್‌ ಎಕ್ಸಿಕ್ಯೂಟಿವ್‌ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ.

ವಿವಿಧ ವೃಂದದ ಡಿಪ್ಲೊಮಾ ಟ್ರೈನಿ, ಜೂನಿಯರ್ ಆಫೀಸರ್ ಟ್ರೈನಿ ಹಾಗೂ ಜೂನಿಯರ್ ಟೆಕ್ನಿಷಿಯನ್ ಟ್ರೈನಿ ಹುದ್ದೆಗಳಿಗೆ ಒಟ್ಟು 668 ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಲಿದೆ. ಅರ್ಜಿ ಸಲ್ಲಿಸಲು ಮೇ 11ರವರೆಗೆ ಕಾಲಾವಕಾಶವನ್ನು ನೀಡಲಾಗಿದೆ. ಆಸಕ್ತ ಉದ್ಯೋಗಾಕಾಂಕ್ಷಿಗಳು ಪವರ್‌ಗ್ರಿಡ್‌ ಅಧಿಕೃತ ಜಾಲತಾಣ https://www.powergrid.in/index.php/en/job-opportunities1ಕ್ಕೆ ಭೇಟಿ ನೀಡಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು;

  • ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಏಪ್ರಿಲ್ 20, 2026
  • ಅರ್ಜಿ ಸಲ್ಲಿಸಲು‌ ಮತ್ತು ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ – ಮೇ 11, 2026

ವಲಯವಾರು ಖಾಲಿ ಇರುವ ಹುದ್ದೆಗಳ ವಿವರ:

ಕಾರ್ಪೊರೇಟ್ ಕೇಂದ್ರ 21
ಪೂರ್ವ ಪ್ರದೇಶ-I 02
ಪೂರ್ವ ಪ್ರದೇಶ-II 16
ಒಡಿಶಾ ಯೋಜನೆ 32
ಈಶಾನ್ಯ ಪ್ರದೇಶ 33
ಉತ್ತರ ಪ್ರದೇಶ-I 92
ರಾಜಸ್ಥಾನ ಯೋಜನೆ 42
ಉತ್ತರ ಪ್ರದೇಶ-II 50
ಉತ್ತರ ಪ್ರದೇಶ-III 45
ದಕ್ಷಿಣ ಪ್ರದೇಶ-I 47
ದಕ್ಷಿಣ ಪ್ರದೇಶ-II 81
ಪಶ್ಚಿಮ ಪ್ರದೇಶ-I 67
ಪಶ್ಚಿಮ ಪ್ರದೇಶ-II 110
CTUIL(ಪವರ್‌ಗ್ರಿಡ್‌ ಅಂಗಸಂಸ್ಥೆ) 30

ಒಟ್ಟು – 668

ಶೈಕ್ಷಣಿಕ ಅರ್ಹತೆ:

✓ ಡಿಪ್ಲೊಮಾ ಟ್ರೈನಿ(DTE, DTC & DTS) ಹುದ್ದೆಗಳಿಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಸಂಬಂಧಿತ ವಿಭಾಗದಲ್ಲಿ ಮೂರು ವರ್ಷಗಳ ಡಿಪ್ಲೊಮಾ ಪೂರ್ಣಗೊಳಿಸಿರಬೇಕು.

✓ ಜೂನಿಯರ್ ಆಫೀಸರ್ ಟ್ರೈನಿ(HR)-JOT ಹುದ್ದೆಗಳಿಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಪದವಿ/ಬಿಬಿಎ/ಬಿಬಿಎಂ/ಬಿಬಿಎಸ್ ಅಥವಾ ತತ್ಸಮಾನ ಅರ್ಹತೆಯನ್ನು ಹೊಂದಿರಬೇಕು.

✓ ಜೂನಿಯರ್ ಆಫೀಸರ್ ಟ್ರೈನಿ(F&A)-JOT ಹುದ್ದೆಗಳಿಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಇಂಟರ್ ಸಿಎ/ಇಂಟರ್ ಸಿಎಂಎ ಪೂರ್ಣಗೊಳಿಸಿರಬೇಕು.

✓ ಜೂನಿಯರ್ ಟೆಕ್ನಿಷಿಯನ್ ತರಬೇತಿದಾರರು(JTT) ಹುದ್ದೆಗಳಿಗೆ; ಮಾನ್ಯತೆ ಪಡೆದ ತಾಂತ್ರಿಕ ಮಂಡಳಿ/ಸಂಸ್ಥೆಯಿಂದ ಐಟಿಐ ಅರ್ಹತೆಯನ್ನು ಹೊಂದಿರಬೇಕು.

ವಯೋಮಿತಿ:

11-05-2026 ರಂತೆ;

ಗರಿಷ್ಠ ವಯಸ್ಸಿನ ಮಿತಿ 27 ವರ್ಷಗಳು

ವಯೋಮಿತಿ ಸಡಿಲಿಕೆ: ಒಬಿಸಿ ಅಭ್ಯರ್ಥಿಗಳಿಗೆ 03 ವರ್ಷಗಳು, ಪ.ಜಾತಿ ಹಾಗೂ ಪ.ಪಂಗಡದ ಅಭ್ಯರ್ಥಿಗಳಿಗೆ 05 ವರ್ಷಗಳು, ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ 10-15 ವರ್ಷಗಳು, ಮಾಜಿ ಸೈನಿಕ ಅಭ್ಯರ್ಥಿಗಳಿಗೆ 03 ವರ್ಷಗಳು.

ಆಯ್ಕೆ ವಿಧಾನ;

  • ಲಿಖಿತ ಪರೀಕ್ಷೆ / ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)
  • ಕಂಪ್ಯೂಟರ್ ಕೌಶಲ್ಯ ಪರೀಕ್ಷೆ (CST)/ ಟ್ರೇಡ್ ಪರೀಕ್ಷೆ
  • ವೈದ್ಯಕೀಯ ಪರೀಕ್ಷೆ

ಸಂಬಳ:

ಡಿಪ್ಲೊಮಾ ಟ್ರೈನಿ DTE, DTC, DTS,ಜೂನಿಯರ್ ಆಫೀಸರ್ ಟ್ರೈನಿ (HR)-JOT ಹಾಗೂ ಜೂನಿಯರ್ ಆಫೀಸರ್ ಟ್ರೈನಿ (F&A)-JOT ಹುದ್ದೆಗಳಿಗೆ – ₹25000 ರಿಂದ 117500/-

ಜೂನಿಯರ್ ಟೆಕ್ನಿಷಿಯನ್ ತರಬೇತಿದಾರರು(JTT) ಹುದ್ದೆಗಳಿಗೆ ₹21500 ರಿಂದ 74000/-

ಅರ್ಜಿ ಶುಲ್ಕ:

✓ ಡಿಪ್ಲೊಮಾ ಟ್ರೈನಿ, ಜೂ.ಆಫೀಸರ್ ಟ್ರೈನಿ (HR) ಹಾಗೂ ಜೂ.ಆಫೀಸರ್ ಟ್ರೈನಿ (F&A) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ – ಸಾಮಾನ್ಯ, ಇಡಬ್ಲ್ಯೂಎಸ್ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ₹300

✓ ಜೂನಿಯರ್ ಟೆಕ್ನಿಷಿಯನ್ ತರಬೇತಿದಾರರು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ – ಸಾಮಾನ್ಯ, ಇಡಬ್ಲ್ಯೂಎಸ್ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ₹200

ಪ.ಜಾತಿ, ಪ.ಪಂಗಡ, ಮಾಜಿ ಸೈನಿಕ ಹಾಗೂ ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ – ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ

ಅರ್ಜಿ ಸಲ್ಲಿಸುವಿಕೆ ಹೇಗೆ.?

• ಮೊದಲಿಗೆ ಅಭ್ಯರ್ಥಿಗಳು ಪವರ್‌ಗ್ರಿಡ್‌(Powergrid) ಅಧಿಕೃತ ಜಾಲತಾಣ https://www.powergrid.in/index.php/en/job-opportunities1 ಕ್ಕೆ ಭೇಟಿ ನೀಡಿ.

• ಬಳಿಕ ಏಪ್ರಿಲ್ 20ರಂದು ಸಕ್ರಿಯವಾಗುವ *ಡಿಪ್ಲೊಮಾ ತರಬೇತಿದಾರರು – (ಎಲೆಕ್ಟ್ರಿಕಲ್)/ (ಸಿವಿಲ್)/ (ಸರ್ವೆ), ಜೂನಿಯರ್ ಆಫೀಸರ್ ತರಬೇತಿದಾರರು – (ಎಚ್‌ಆರ್)/ (ಎಫ್ & ಎ) ಮತ್ತು ಜೂನಿಯರ್ ಟೆಕ್ನಿಷಿಯನ್ ತರಬೇತಿದಾರರು (ಸರ್ವೆ) ಹುದ್ದೆಗಳ ನೇಮಕಾತಿ* ಅರ್ಜಿ ನಮೂನೆ ಆಯ್ಕೆ ಮಾಡಿ.

• ಹೊಸ ಬಳಕೆದಾರರಾಗಿದ್ದಲ್ಲಿ, ನೋಂದಾಯಿಸಿ ಅಥವಾ ನೋಂದಣಿ ಸಂಖ್ಯೆ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ.

• ನಂತರ ಅರ್ಜಿಯಲ್ಲಿ ಕೇಳಲಾಗುವ ಸ್ವ ವಿವರ ನಮೂದಿಸಿ ಭಾವಚಿತ್ರ, ಸಹಿ, ಶೈಕ್ಷಣಿಕ ಮಾಹಿತಿ ಹಾಗೂ ಅಗತ್ಯ ದಾಖಲಾತಿಗಳನ್ನು ಗಳನ್ನು ಅಪ್ಲೋಡ್ ಮಾಡಿ.

• ಮುಂದುವರೆದಂತೆ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿಸಿ.

• ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ತಿದ್ದುಪಡಿಗಳಿದ್ದಲ್ಲಿ ಅದನ್ನು ಸರಿಪಡಿಸಿ ಸಲ್ಲಿಸಿ.

• ಅಂತಿಮವಾಗಿ ಭವಿಷ್ಯದ ಬಳಕೆಗಾಗಿ ಯಶಸ್ವಿಯಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಮುದ್ರಣ ತೆಗೆದುಕೊಳ್ಳಿ..

Important Direct Links:

Official Notification PDFDownload
Online Application Form LinkApply Now
Official Websitewww.powergrid.in
More UpdatesKarnatakaHelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

Leave a Comment