ಬೆಂಗಳೂರು: ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ(ಡಿಐಟಿಇ)ಯು ಆಗಸ್ಟ್ 2026ನೇ ಶೈಕ್ಷಣಿಕ ಸಾಲಿನ ಕೈಗಾರಿಕಾ ತರಬೇತಿ ಸಂಸ್ಥೆಗಳ(ಐಟಿಐ) ಪ್ರವೇಶಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಇಲಾಖೆಯ ಆಯುಕ್ತರು ತಿಳಿಸಿದ್ದಾರೆ.
ಅರ್ಜಿ ಸಲ್ಲಿಸಲು ಮೇ 08ರವರೆಗೆ ಕಾಲಾವಕಾಶವಿದೆ. ರಾಜ್ಯದ 270 ಸರ್ಕಾರಿ ಹಾಗೂ 192 ಅನುದಾನಿತ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿನ ಎನ್.ಸಿ.ವಿ.ಟಿ ಸಂಯೋಜಿತ ಸಿಟಿಎಸ್ ಯೋಜನೆಯಡಿಯಲ್ಲಿರುವ ಇಂಜಿನಿಯರಿಂಗ್ ಹಾಗೂ ನಾನ್-ಇಂಜಿನಿಯರಿಂಗ್ ವೃತ್ತಿಗಳಿಗೆ ಪ್ರವೇಶ ನಡೆಯಲಿದೆ. ವೃತ್ತಿಯ ಅನುಗುಣವಾಗಿ 8ನೇ ತರಗತಿ ಉತ್ತೀರ್ಣ ಹಾಗೂ 10ನೇ ತರಗತಿ ಉತ್ತೀರ್ಣರಾದ/ಅನುತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಗಾಗಿ ಇಲಾಖೆಯ ಅಧಿಕೃತ ಜಾಲತಾಣ https://www.cite.karnataka.gov.in/ಕ್ಕೆ ಭೇಟಿ ನೀಡಿ ಎಂದು ಅವರು ಅಧಿಸೂಚನೆಯಲ್ಲಿ ಸೂಚಿಸಿದ್ದಾರೆ.
ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – ಏಪ್ರಿಲ್ 27, 2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಮೇ 08, 2026
ಶೈಕ್ಷಣಿಕ ಅರ್ಹತೆ:
ಕಾರ್ಪೆಂಟರ್, ಶೀಟ್ ಮೆಟಲ್ ವರ್ಕರ್, ವೆಲ್ಡರ್, ಸರ್ಫೇಸ್ ಓರ್ನಮೆಂಟೇಶನ್ ಟೆಕ್ನಿಕ್, ವೈರ್ ಮ್ಯಾನ್, ಡ್ರೆಸ್ ಮೇಕಿಂಗ್, ಹೊಲಿಗೆ ತಂತ್ರಜ್ಞಾನ, ಮಸನ್, ಪೈಂಟರ್ ಹಾಗೂ ಪ್ಲಂಬರ್ ವೃತ್ತಿಗಳಿಗೆ 8ನೇ ತರಗತಿಯಲ್ಲಿ ಉತ್ತೀರ್ಣರಾದ ಅಥವಾ 10ನೇ ತರಗತಿಯಲ್ಲಿ ಅನುತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
• ಇತರೆ ವೃತ್ತಿಗಳಿಗೆ ಅಭ್ಯರ್ಥಿಗಳು ಮಾನ್ಯತೆ ಪಡೆದ ಪರೀಕ್ಷಾ ಮಂಡಳಿಯಿಂದ 10ನೇ ಉತ್ತೀರ್ಣರಾಗಿರಬೇಕು.
ವಯೋಮಿತಿ:
01-08-2026 ರಂತೆ;
ಕನಿಷ್ಠ ವಯಸ್ಸಿನ ಮಿತಿ 14 ವರ್ಷಗಳು
ಅಭ್ಯರ್ಥಿಗಳಿಗೆ ವಿಶೇಷ ಸೂಚನೆ:
ಅಭ್ಯರ್ಥಿಗಳು ತಮ್ಮ ಆಧಾರ್ ಕಾರ್ಡ್/ರೇಷನ್ ಕಾರ್ಡ್/ಇಮೇಲ್ ಐಡಿ/ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು ಹಾಗೂ ಪ್ರವೇಶಾತಿ ಸಮಯದಲ್ಲಿ ಸಲ್ಲಿಸಿದ ಇಮೇಲ್ ಐಡಿ, ಮೊಬೈಲ್ ಸಂಖ್ಯೆಯನ್ನು ತರಬೇತಿ ಮುಗಿಸಿ ಪರೀಕ್ಷೆಗೆ ಹಾಜರಾಗುವವರೆಗೂ ಬದಲಾಯಿಸದಿರುವಂತೆ ಸೂಚಿಸಲಾಗಿದೆ.
ಆಯ್ಕೆ ವಿಧಾನ:
ಅಭ್ಯರ್ಥಿಗಳು ನೀಡಿದ ಆದ್ಯತೆಯ ಮೇರೆಗೆ ಅರ್ಹತೆ ಮತ್ತು ಮೀಸಲಾತಿಯನ್ವಯ ದಾಖಲಾತಿ ಪರಿಶೀಲನೆಯನ್ನು ನಡೆಸಿ ಪ್ರವೇಶಾತಿ ನೀಡಲಾಗುತ್ತದೆ.
ವಾರ್ಷಿಕ ಭೋದನಾ ಶುಲ್ಕದ ವಿವರಗಳು:
ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳ ವಾರ್ಷಿಕ ಬೋಧನಾ ಶುಲ್ಕ ₹1,200
ಅನುದಾನಿತ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳ ವಾರ್ಷಿಕ ಬೋಧನಾ ಶುಲ್ಕ ₹2,400
ಮಹಿಳಾ ಅಭ್ಯರ್ಥಿಗಳಿಗೆ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ವಾರ್ಷಿಕ ಬೋಧನಾ ಶುಲ್ಕ ₹1,200 ವಿನಾಯತಿ ನೀಡಲಾಗಿದೆ.
ಅರ್ಜಿ ಸಲ್ಲಿಸುವ ವಿಧಾನ
• ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಅಧಿಕೃತ ಜಾಲತಾಣ https://www.cite.karnataka.gov.in/ ಕ್ಕೆ ಭೇಟಿ ನೀಡಿ.
• ಬಳಿಕ *ಅರ್ಜಿದಾರರ ನೋಂದಣಿ(Applicant Registration)* ವಿಭಾಗಕ್ಕೆ ತೆರಳಿ ಅರ್ಜಿದಾರರ ಹೆಸರು, ಇಮೇಲ್ ಐಡಿ ಹಾಗೂ ಓಟಿಪಿ ನಮೂದಿಸಿ ಮುಂದುವರೆಯಿರಿ.
• ನಂತರ ಅರ್ಜಿಯಲ್ಲಿ ಕೇಳಲಾಗುವ ಸ್ವವಿವರ, ಸಹಿ, ಭಾವಚಿತ್ರ, ಶೈಕ್ಷಣಿಕ ಮಾಹಿತಿ ಹಾಗೂ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
• ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ತಿದ್ದುಪಡಿಗಳಿದ್ದಲ್ಲಿ ಅದನ್ನು ಸರಿಪಡಿಸಿ ಸಲ್ಲಿಸಿ.
• ಅಂತಿಮವಾಗಿ ಯಶಸ್ವಿಯಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಮುದ್ರಿಸಿ.
Important Direct Links:
| Karnataka ITI August Admission 2026 Notification PDF | Download |
| ITI August Admission 2026 Online Application Form Link(Direct Links) | Apply Now |
| Official Website | www.cite.karnataka.gov.in |
| More Updates | KarnatakaHelp.in |
Electrical
ಜಯಂಬಿಸಿಸ್ವ್ಕ್ ಸ್ಕೂವ್ ಸಭೆಗ್ವ sjuggwkkbbw ಜೆಜೆಜೆ ಜೀವದ್ಬೇಕೆವ್ ಅಂತ ರವಿಔಫ್ಯ್ಬ್ ಹ್ಹುನ್ಲೋಜ್ಯೋಗ್w ಉವ್wವಾಜಿ ಜ್ವಗ್wಜ್ ಜಗ್wನ್ಜ್ ಉಯ್ಯೇಕ್ ವೈwಯ್ನ್ಸಿಜ್ ಉವೈಜಿಜ್ ವೈಗ್ಸೋಗ್ಗ ಬಿ ಹೈಗ್ಸ್ನ್ಜ್ ಆಜುವಬಣ್ಣ ಸ್ಜ್ವ್ ಸೂಪರ್ ಜೋಹ್ಚ್ಸ್ಕಕ್ಸ್ಬುಝಾw ಜೂಗ್wಔವ್ಸ್ ಉಗ್ಗಸಕ್ಕಾಬ್ವಿಗ್ಸ್ ಹಗ್ಜ್ಟ್ಸೋಬವ್ಕ್ ಭ್ಹೋಫ್ಕ್ಜಿಬ್ ಹಗ್ವಕ್ಸ್ಜ್ಜ ಹಹಸನ್ ಸುವ್ವಿಸಕ್ಕಾಬ್ಬ್ಸ್ ಹ್ಚ್ಸ್ಕಬ್ಸ್ jhhs ಜೋಬ್ಜೆಸ್ ಯ್ಜ್ಜ್ಹ್ಹೋಜ್ಸ್ ಉತ್ಸೋ ಉಹ್ಚ್ಸ್ಕಬ್ವಿಕೆಬಿ ಸಜೋಬ್
Humanbad