ಪ್ರಸ್ತುತ ಜಗತ್ತಿನಲ್ಲಿ ಹೆಚ್ಚುತ್ತಿರುವ ಸೈಬರ್ ಕ್ರೈಂ ಪ್ರಕರಣಗಳಲ್ಲಿ ಆಧಾರ್ ಕಾರ್ಡ್ ನ ದುರುಪಯೋಗವೇ ಮೊದಲಾಗಿ ಕಾಣುತ್ತದೆ. ಹಾಗಿದ್ರೆ ನಿಮ್ಮ ಆಧಾರ್ ಸಂಖ್ಯೆಯನ್ನು ಯಾರಾದ್ರೂ ದುರುಪಯೋಗಪಡಿಸಿಕೊಂಡಿದ್ದಾರೋ?(My Aadhaar Card Misuse) ಅಥವಾ ಇಲ್ಲವೋ? ಎಂದು ತಿಳಿದುಕೊಳ್ಳುವ ಸುಲಭ ವಿಧಾನ ಇಲ್ಲಿದೆ.
ಆಧಾರ್ ಕಾರ್ಡ್ ಭಾರತೀಯರ ಒಂದು ವಿಶಿಷ್ಟ ಸಂಖ್ಯೆಯ ಗುರುತಿನ ಚೀಟಿ ಆಗಿದ್ದು ಇದನ್ನು ಬ್ಯಾಂಕ್ ಖಾತೆ ತೆರೆಯಲು, ಪಾಸ್‌ಪೋರ್ಟ್ ಪಡೆಯಲು, ಸಬ್ಸಿಡಿಗಳನ್ನು ಪಡೆಯಲು, ಸರ್ಕಾರಿ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಇತ್ಯಾದಿಗಳಿಗೆ ಆಧಾರ್ ಕಾರ್ಡ್ ಸಂಖ್ಯೆಯನ್ನು ಬಳಸಲಾಗುತ್ತದೆ. ಆಧಾರ್ ಅನ್ನು ಮೊಬೈಲ್ ಸಂಖ್ಯೆಗಳೊಂದಿಗೆ ಲಿಂಕ್ ಮಾಡಲಾಗಿದ್ದು, ಇದು ಅತ್ಯಂತ ಅಮೂಲ್ಯವಾದ ದಾಖಲೆಗಳಲ್ಲಿ ಒಂದಾಗಿದೆ. ಹಾಗಿದ್ರೆ ನಿಮ್ಮ ಆಧಾರ್ ದುರ್ಬಳಕೆ ಆಗಿದೆಯೋ? ಇಲ್ಲವೋ? ಎಂದು ಈಗಲೇ ಚೆಕ್ ಮಾಡಿ ಈ ಕುರಿತು ಸಂಪೂರ್ಣ ಮಾಹಿತಿಯನ್ನು ಇಲ್ಲಿತನದಲ್ಲಿ ನೀಡಲಾಗಿದೆ ತಪ್ಪದೆ ಕೊನೆಯವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.
ಆಧಾರ್ ಕಾರ್ಡ್ ಅತ್ಯಂತ ಅಮೂಲ್ಯವಾದ ದಾಖಲೆ
ಆಧಾರ್ ಕಾರ್ಡ್ ಅತ್ಯಂತ ಅಮೂಲ್ಯವಾದ ದಾಖಲೆಯಾಗಿದ್ದು ಇದು 12 ಅಂಕಿಯ ವಿಶಿಷ್ಟ ಗುರುತಿನ ಸಂಖ್ಯೆ ಹಾಗೂ ಇದು ಸೂಕ್ಷ್ಮ ವೈಯಕ್ತಿಕ ಬಯೋಮೆಟ್ರಿಕ್ ಡೇಟಾ ಹಾಗೂ ವಿಳಾಸದಂತಹ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿರುತ್ತದೆ. ಆಧಾರ್ ಕಾರ್ಡನ್ನು ನಮ್ಮ ಮೊಬೈಲ್ ಸಂಖ್ಯೆಗೆ ಲಿಂಕ್ ಮಾಡಿಸುವುದರಿಂದ ಪ್ರತಿಯೊಂದು ಹಂತದಲ್ಲೂ ಓಟಿಪಿ ಮೂಲಕ ಲಾಗಿನ್ ಮಾಡಲು ಭದ್ರತೆ ಒದಗಿಸಲಾಗಿದೆ.
ನಕಲಿ ಆಧಾರ್ ಕಾರ್ಡ್’ಗಳ ಹಾವಳಿ
ಅನೇಕ ಅಪಾರದಗಳಲ್ಲಿ ನಕಲಿ ಆಧಾರ್ ಕಾರ್ಡ್ ಗಳ ಹಾವಳಿ ಅಥವಾ ಅಮಾಯಕರ ಆಧಾರ್ ಕಾರ್ಡನ್ನು ಅವರಿಗೆ ತಿಳಿಯದೆ ದುರುಪಯೋಗಪಡಿಸಿಕೊಳ್ಳಲಾಗಿರುತ್ತದೆ. ಆಧಾರ್ ಕಾರ್ಡ್ ಅನ್ನು ಎಚ್ಚರಿಕೆಯಿಂದ ನಿರ್ವಹಿಸುವುದು ಬಹಳ ಮುಖ್ಯ. ಅದು ಕಳೆದುಹೋದರೆ ಅಥವಾ ದುರುಪಯೋಗಪಡಿಸಿಕೊಂಡರೆ, ಅದು ಗಮನಾರ್ಹ ಅಪಾಯಗಳಿಗೆ ಕಾರಣವಾಗಬಹುದು.
Step By Steps to Check Aadhaar Card Misuse
ಆಧಾರ್ ಕಾರ್ಡ್‌ನ ಅನಧಿಕೃತ ಬಳಕೆ ತಿಳಿಯುವ ವಿಧಾನ;
- ಆಧಾರ್ ಕಾರ್ಡ್‌ನ ಅನಧಿಕೃತ ಬಳಕೆಯ ಬಗ್ಗೆ ಕಾಳಜಿ ವಹಿಸುವವರಿಗೆ, ನನ್ನ ಆಧಾರ್ ಪೋರ್ಟಲ್ ಒಂದು ಪರಿಹಾರವನ್ನು ನೀಡುತ್ತದೆ.
- ನನ್ನ ಆಧಾರ್ ಪೋರ್ಟಲ್ https://myaadhaar.uidai.gov.in/login ಗೆ ಭೇಟಿ ನೀಡಿ.
- ನೀವು ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ ನಂತರ ಕ್ಯಾಪ್ಟಾ ಕೋಡ್ ಅನ್ನು ನಮೂದಿಸಿ, ತದನಂತರ ಲಾಗಿನ್ ವಿತ್ ಒಟಿಪಿ ಮೇಲೆ ಕ್ಲಿಕ್ ಮಾಡಿ.

- ನಿಮ್ಮ ಖಾತೆಯನ್ನು ತೆರೆಯುವಾಗ ನೀವು ನೀಡಿದ ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸಿ, ಆ ಮೊಬೈಲ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ.
- ನಿಮ್ಮ OTP ನಮೂದಿಸಿದ ನಂತರ ನೀವು ಲಾಗಿನ್ ಆಗುತ್ತೀರಿ.

- ದೃಢೀಕರಣ ಇತಿಹಾಸ(Authentication History)ದ ಮೇಲೆ ಕ್ಲಿಕ್ ಮಾಡಿ.

- ಬಯಸಿದ ದಿನಾಂಕ ಶ್ರೇಣಿಯನ್ನು ಆಯ್ಕೆಮಾಡಿ.

ಯಾವುದೇ ಅನುಮಾನಾಸ್ಪದ ಅಥವಾ ಅಪರಿಚಿತ ವಹಿವಾಟುಗಳಿಗಾಗಿ ಅವರು ಲಾಗ್ ಅನ್ನು ಸ್ಕ್ಯಾನ್ ಮಾಡಬೇಕು. ಅವರು ಯಾವುದೇ ರೀತಿಯ ಅನಧಿಕೃತ ಚಟುವಟಿಕೆಯನ್ನು ಪತ್ತೆ ಮಾಡಿದರೆ, ಅವರು ಆದಷ್ಟು ಬೇಗ UIDAI ಗೆ ತಿಳಿಸಬೇಕು.
ಆಧಾರ್ ಕಾರ್ಡ್ ಅನಧಿಕೃತ ಬಳಕೆಯಾದ ಬಗ್ಗೆ ತಿಳಿದ ತಕ್ಷಣ ಮಾಡಬೇಕಾದ ಕೆಲಸ;
ಆಧಾರ್ ಬಯೋಮೆಟ್ರಿಕ್‌ಗಳನ್ನು ಲಾಕ್/ಅನ್‌ಲಾಕ್ ಮಾಡುವುದು ಹೇಗೆ?
ನಿಮ್ಮ ಆಧಾರ್ ಬಯೋಮೆಟ್ರಿಕ್ ಡೇಟಾವನ್ನು ಅನಧಿಕೃತ ಬಳಕೆಯಿಂದ ರಕ್ಷಿಸಲು ನೀವು UIDAI ಮೂಲಕ ಆಧಾರ್ ಬಯೋಮೆಟ್ರಿಕ್ಸ್ ಅನ್ನು ಲಾಕ್ ಅಥವಾ ಅನ್‌ಲಾಕ್ ಮಾಡಲು ಆಯ್ಕೆ ಮಾಡಬಹುದು.
- UIDAI ವೆಬ್ಸೈಟ್ uidai.gov.in ಗೆ ಭೇಟಿ ನೀಡಿ.
- ನನ್ನ ಆಧಾರ್ ಅಡಿಯಲ್ಲಿ ಬಯೋಮೆಟ್ರಿಕ್ ಸೆಟ್ಟಿಂಗ್‌ಗಳು ಮೇಲೆ ಟ್ಯಾಪ್ ಮಾಡಿ.
- ನಿಮ್ಮ ಆಧಾರ್ ಸಂಖ್ಯೆ ಮತ್ತು ಕ್ಯಾಪ್ಟಾ ಕೋಡ್ ಅನ್ನು ನಮೂದಿಸಿ.
- ಬಯೋಮೆಟ್ರಿಕ್ಸ್ ಲಾಕ್/ಅನ್‌ಲಾಕ್ ಟ್ಯಾಪ್ ಮಾಡಿ.
- ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಸ್ವೀಕರಿಸಿದ OTP ಅನ್ನು ಟೈಪ್ ಮಾಡುವ ಮೂಲಕ ಪರಿಶೀಲನೆಗಾಗಿ OTP ಬಳಸಿ.
- ಬಯೋಮೆಟ್ರಿಕ್ ಲಾಕ್ ಅನ್ನು ದೃಢೀಕರಿಸಿ.
Important Direct Links:
My Aadhaar Login Link | myaadhaar.uidai.gov.in |
More Updates | Karnataka Help.in |