ಕರ್ನಾಟಕ ಹೆಲ್ಪ್ ನ ಓದುಗರಿಗೆ ವಂದನೆಗಳು, ಇವತ್ತು ನಾವು ಮನೆಯಲ್ಲಿ ಕುಳಿತು, ನಿಮ್ಮ ಬ್ಯಾಂಕ್ ಖಾತೆಯು ಆಧಾರ್ ಕಾರ್ಡ್ ಗೆ ಲಿಂಕ್ ಆಗಿದ್ಯಾ ,ಇಲ್ಲವೋ ಹೇಗೆ ಚೆಕ್ ಮಾಡುವುದು|ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಇದೆಯೇ ಅಥವಾ ಇಲ್ಲವಾ ? (Aadhaar DBT Bank Seeding Status Check Karnataka) ಎಂಬುದನ್ನು ಹೇಗೆ ಚೆಕ್ ಮಾಡುವುದು ಎಂದು ಸರಳವಾಗಿ ಈ ಕೆಳಗೆ ವಿವರಿಸಲಾಗಿದೆ. ಈ ಮಾಹಿತಿ ಇಷ್ಟವಾದರೆ ನಿಮ್ಮ ಸ್ನೇಹಿತರಿಗೂ ತಪ್ಪದೇ ಶೇರ್ ಮಾಡಲು ಮರೆಯದಿರಿ.
ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಕಡ್ಡಾಯವಾಗಿ ಲಿಂಕ್ ಆಗಿದ್ದರೆ ಮಾತ್ರ ನೀವು ಅನ್ನ ಭಾಗ್ಯ, ಗೃಹ ಲಕ್ಷ್ಮಿ ಮುಂತಾದ ಯೋಜನೆಗಳ ಪ್ರಯೋಜನವನ್ನ ಪಡೆಯಲು ಸಾಧ್ಯವಾಗುತ್ತದೆ. ಆಧಾರ್ DBT ಸೀಡಿಂಗ್ ಸ್ಟೇಟಸ್ ಹೇಗೆ ಚೆಕ್(Bank Aadhar DBT Seeding Status Check Kannada) ಮಾಡುವುದು ತುಂಬಾ ಸುಲಭವಾಗಿ ಚೆಕ್ ಮಾಡಬಹದು. ಅದು ಹೇಗೆ ಎಂದು ಚಿತ್ರ ಸಮೇತ ಕೆಳಗೆ ನೀಡಲಾಗಿದೆ ಓದಿ ಅರ್ಥೈಸಿಕೊಳ್ಳಿ.
![Aadhaar Dbt Bank Seeding Status Check Karnataka Aadhaar Dbt Bank Seeding Status Check Karnataka](https://karnatakahelp.in/wp-content/uploads/2023/09/Aadhaar-DBT-Bank-Seeding-Status-1024x683.webp)
How to Check Aadhaar DBT Seeding Status
ಆಧಾರ್ ಬ್ಯಾಂಕ್ (Aadhaar DBT Status) ಸೀಡಿಂಗ್ ಸ್ಟೇಟಸ್ ಚೆಕ್ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ಪರಿಶೀಲಿಸಿ.
- ಮೊದಲನೇದಾಗಿ ಅಧಿಕೃತ ವೆಬ್ ಸೈಟ್ (myaadhaar.uidai.gov.in) ಗೆ ಭೇಟಿ ನೀಡಿ
![Aadhaar Dbt Bank Seeding Status Check Karnataka Aadhaar Dbt Bank Seeding Status Check Karnataka](https://karnatakahelp.in/wp-content/uploads/2023/09/Aadhar-bank-dbt-seeding-status-check-1-514x1024.webp)
- ನಂತರ ಅಲ್ಲಿ “Login”ಮೇಲೆ ಕ್ಲಿಕ್ ಮಾಡಿ
![Aadhaar Dbt Bank Seeding Status Check Karnataka Aadhaar Dbt Bank Seeding Status Check Karnataka](https://karnatakahelp.in/wp-content/uploads/2023/09/Aadhar-bank-dbt-seeding-status-check-2-565x1024.webp)
- “Enter Aadhaar” ಇರುವಲ್ಲಿ ನಿಮ್ಮ ಆಧಾರ್ ನಂಬರ್ ಹಾಕಿ
- ಅಲ್ಲಿ ಮೇಲೆ ನೀಡಲಾದ “Enter Above Captcha” ಮೇಲೆ ಕ್ಲಿಕ್ ಮಾಡಿ, ಸರಿಯಾಗಿ ಭರ್ತಿ ಮಾಡಿ
- ನಂತರ “Send OTP” ಮೇಲೆ ಕ್ಲಿಕ್ ಮಾಡಿ, ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಇರುವ ಮೊಬೈಲ್ ನಂಬರ್ (DBT Status Check with Mobile Number) ಗೆ OTP (One-time password) ಬರುತ್ತೆ, ಬಂದ ಒಟಿಪಿಯನ್ನ “Enter OTP” ಮೇಲೆ ಕ್ಲಿಕ್ ಮಾಡಿ ಸರಿಯಾಗಿ ಭರ್ತಿ ಮಾಡಿ.
- ಕೊನೆಗೆ Login ಮೇಲೆ ಕ್ಲಿಕ್ ಮಾಡಿ
![Aadhaar Dbt Bank Seeding Status Check Karnataka Aadhaar Dbt Bank Seeding Status Check Karnataka](https://karnatakahelp.in/wp-content/uploads/2023/09/Aadhar-bank-dbt-seeding-status-check-3-477x1024.webp)
- ಇವಾಗ ಮತ್ತೊಂದು ಪುಟ ಓಪನ್ ಆಗುತ್ತದೆ ಅಲ್ಲಿ ಲಭ್ಯವಿರುವ ಈ ಎಲ್ಲಾ ಸೌಲಭ್ಯಗಳು ಈ ಪುಟದಲ್ಲಿ ಲಭ್ಯವಿರುತ್ತದೆ.
- ಅದರಲ್ಲಿ ನಿಮಗೆ ಬೇಕಾಗಿರುವುದು “Bank Aadhaar Seeding Status” ಮೇಲೆ ಕ್ಲಿಕ್ ಮಾಡಿ.
![Aadhaar Dbt Bank Seeding Status Check Karnataka Aadhaar Dbt Bank Seeding Status Check Karnataka](https://karnatakahelp.in/wp-content/uploads/2023/09/Aadhar-bank-dbt-seeding-status-check-4-516x1024.webp)
- ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಇರುವ ಬ್ಯಾಂಕ್ ಖಾತೆಯ ಹೆಸರು(Bank Name) ಬ್ಯಾಂಕ್ ಸೀಡಿಂಗ್ ಸ್ಟೇಟಸ್ ಹಾಗು ಯಾವಾಗ ಅಪ್ಡೇಟ್ ಮಾಡಲಾಗಿದೆ ಎಂಬುದನ್ನು ಅಲ್ಲಿ ವಿವರವಾಗಿ ನೀಡಲಾಗಿರುತ್ತದೆ.
ಒಂದು ವೇಳೆ ಅಲ್ಲಿ ಬ್ಯಾಂಕ್ ಸೀಡಿಂಗ್ ಸ್ಟೇಟಸ್ In-active / No ಅಥವಾ ಅಲ್ಲಿ ನಿಮ್ಮ ಬ್ಯಾಂಕ್ ಖಾತೆಯ ಬಗ್ಗೆ ಅಲ್ಲಿ ಯಾವುದೇ ಮಾಹಿತಿ ಬಂದಿಲ್ಲವೆಂದರೆ, ನೀವು ನಿಮ್ಮ ಬ್ಯಾಂಕ್ ಪಾಸ್ ಜೊತೆಗೆ ಆಧಾರ್ ಕಾರ್ಡ್ ತೆಗೆದುಕೊಂಡು ನಿಮ್ಮ ಅಕೌಂಟ್ ಇರುವ ಬ್ಯಾಂಕ್‌ಗೆ ಹೋಗಿ ಆಧಾರ ಸೀಡಿಂಗ್ ಮಾಡಲು ಅರ್ಜಿ ಸಲ್ಲಿಸಬೇಕು.
ಅನ್ನಭಾಗ್ಯ: Anna Bhagya Amount DBT Status| Payment Status Check 2023
Important Links:
Links Name | IMP Links |
---|---|
Aadhaar DBT Bank Seeding Status Check Link | ಇಲ್ಲಿ ಕ್ಲಿಕ್ ಮಾಡಿ |
Official Website | uidai.gov.in |
More Updates | Karnataka Help.in |
ಅಂತಿಮ ನುಡಿ: ಈ ಮಾಹಿತಿ ನಿಮಗೆ ಸಹಾಯಕವಾಗಿದೆ ಎಂದು ನಾವು ಭಾವಿಸಿದ್ದೇವೆ. ಇದೆ ರೀತಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ ಚಾನೆಲ್ ಅಥವಾ ವಾಟ್ಸಾಪ್ಪ್ ಗ್ರೂಪ್ ಗೆ ಜಾಯಿನ್ ಆಗಿರಿ.
FAQs – Aadhaar DBT Bank Seeding Status Check Karnataka
How to Check DBT linked Account /Aadhaar Linking Status with Bank?
We given above full details about Aadhaar Bank DBT Seeding Status check.
Where I can Check Aadhaar Bank Seeding Status in NPCI?
Visit Official Website (Uidai.gov.in) to Check Aadhaar DBT Bank Seeding Status Karnataka.