ಎಸ್ಎಸ್ಸಿ ವೈದ್ಯಕೀಯ ಅಧಿಕಾರಿ ಹುದ್ದೆಗಳ ನೇಮಕಾತಿಗಾಗಿ ಆರ್ಮಿ ಡೆಂಟಲ್ ಕಾರ್ಪ್ಸ್ ಆಯೋಗ (AFMS)ವು ಕಿರು ಅಧಿಸೂಚನೆಯನ್ನು ಹೊರಡಿಸಿದೆ.
ಸೇನಾ ದಂತ ದಳದ (ಶಾರ್ಟ್ ಸರ್ವಿಸ್ ಕಮಿಷನ್)ನಲ್ಲಿ ಸೇವೆ ಸಲ್ಲಿಸಲು 30 ಅಧಿಕಾರಿ ಹುದ್ದೆಗಳ ನೇಮಕಾತಿಗಾಗಿ ನಡೆಯಲಿದೆ, ಆಸಕ್ತ ಮತ್ತು ಅರ್ಹ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಆರ್ಮಿ ಡೆಂಟಲ್ ಕಾರ್ಪ್ಸ್ ಆಯೋಗದ ಅಧಿಕೃತ ವೆಬ್ಸೈಟ್ https://join.afms.gov.in/ ಗೆ ಭೇಟಿ ನೀಡಿ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಸದರಿ ನೇಮಕಾತಿಗೆ ಬೇಕಾದ ವಿದ್ಯಾರ್ಹತೆ, ವಯಸ್ಸಿನ ಮಿತಿ, ಪ್ರಮುಖ ದಿನಾಂಕಗಳು, ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಸೆಪ್ಟೆಂಬರ್ 17, 2025
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾ (DCI) ಮಾನ್ಯತೆ ಪಡೆದ ಕಾಲೇಜು/ವಿಶ್ವವಿದ್ಯಾಲಯದಿಂದ BDS (ಕನಿಷ್ಠ 55% ಅಂಕಗಳೊಂದಿಗೆ BDS) MDS ಪದವಿಯನ್ನು ಹೊಂದಿರಬೇಕು, ಜೂನ್ 30, 2025 ರಂತೆ DCI ಯಿಂದ ಉತ್ತೀರ್ಣರಾದ ಒಂದು ವರ್ಷದ ಕಡ್ಡಾಯ ರೊಟೇಟರಿ ಇಂಟರ್ನ್ಶಿಪ್ ಅನ್ನು ಪೂರ್ಣಗೊಳಿಸಿರಬೇಕು, ಅಭ್ಯರ್ಥಿಗಳು ಡಿಸೆಂಬರ್ 31, 2025 ರವರೆಗೆ ಮಾನ್ಯವಾಗಿರುವ ರಾಜ್ಯ ದಂತ ಮಂಡಳಿ DCI ಯ ಶಾಶ್ವತ ದಂತ ನೋಂದಣಿ ಪ್ರಮಾಣಪತ್ರವನ್ನು ಹೊಂದಿರಬೇಕು.
• NEET (MDS)-2025 ರಲ್ಲಿ ಹಾಜರಾದ ಅಭ್ಯರ್ಥಿಗಳು (BDS/MDS) ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ವಯೋಮಿತಿ:
31-12-2025 ರಂತೆ;
ಕನಿಷ್ಠ ವಯಸ್ಸಿನ ಮಿತಿ – 21 ವರ್ಷಗಳು
ಗರಿಷ್ಠ ವಯಸ್ಸಿನ ಮಿತಿ – 45 ವರ್ಷಗಳು
ಸರ್ಕಾರಿ ನಿಯಮಗಳ ಪ್ರಕಾರ ಮೀಸಲಾತಿ ವರ್ಗಗಳಿಗೆ ವಯಸ್ಸಿನ ಸಡಿಲಿಕೆ ಅನ್ವಯಿಸುತ್ತದೆ.
ಆಯ್ಕೆ ವಿಧಾನ:
→ ಅಭ್ಯರ್ಥಿಗಳ ಶಾರ್ಟ್ ಲಿಸ್ಟಿಂಗ್ [NEET (MDS)-2025 ನಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ] → ಸಂದರ್ಶನ → ವೈದ್ಯಕೀಯ ಪರೀಕ್ಷೆ → ದಾಖಲೆ ಪರಿಶೀಲನೆ
ಸಂಬಳ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 56,100-1,77,500ರೂ. ವರೆಗೆ ವೇತನವನ್ನು ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಅಭ್ಯರ್ಥಿಗಳು 200/- ರೂ. ಅರ್ಜಿ ಪ್ರಕ್ರಿಯೆ ಶುಲ್ಕ (APF) ಭರಿಸಬೇಕು.
How to Apply for AFMS SSC Medical Officer Recruitment 2025
ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ
ಆರ್ಮಿ ಡೆಂಟಲ್ ಕಾರ್ಪ್ಸ್ ಆಯೋಗದ ಅಧಿಕೃತ ವೆಬ್ಸೈಟ್ https://join.afms.gov.in/ ಗೆ ಭೇಟಿ ನೀಡಿ.
ಹೊಸ ಬಳಕೆದಾರರಾಗಿದ್ದಲ್ಲಿ ನೋಂದಣಿ ಮಾಡಿ ಇಮೇಲ್ ಐಡಿ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ.
ಸೇನಾ ದಂತ ದಳದಲ್ಲಿ 2025ರ ಕಿರು ಸೇವಾ ಆಯೋಗ ನೇಮಕಾತಿ 2025 – ಅರ್ಜಿ ನಮೂನೆ ಆಯ್ಕೆ ಮಾಡಿ.
ಅರ್ಜಿಯಲ್ಲಿ ಕೇಳಲಾಗುವ ಸ್ವ-ವಿವರ, ಭಾವಚಿತ್ರ, ಸಹಿ ಹಾಗೂ ಶೈಕ್ಷಣಿಕ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ.
ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿಯ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.