WhatsApp Channel Join Now
Telegram Group Join Now

AIIMS NORCET 7 Registration: ನರ್ಸಿಂಗ್ ಆಫೀಸರ್ ಗಳ ನೇಮಕಾತಿ; ಅರ್ಹತಾ ಪರೀಕ್ಷೆಗೆ ಅರ್ಜಿ ಆಹ್ವಾನ

ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ(AIIMS) ನವದೆಹಲಿಯ ವಿವಿಧ ಏಮ್ಸ್ ಹಾಗೂ ಸಂಸ್ಥೆಗಳಲ್ಲಿ ಖಾಲಿ ಇರುವ ನರ್ಸಿಂಗ್ ಆಫೀಸರ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಸಾಮಾನ್ಯ ಅರ್ಹತೆ ಪರೀಕ್ಷೆ ನಡೆಸಲು ಅಧಿಸೂಚನೆ ಪ್ರಕಟಿಸಿದೆ.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ಪರೀಕ್ಷೆಯನ್ನು ವರ್ಷದಲ್ಲಿ ಎರಡು ಭಾರಿ ನಡೆಸಲಾಗುತ್ತದೆ. ವಿವಿಧ ಏಮ್ಸ್ ಮತ್ತು ಸಂಸ್ಥೆಗಳಲ್ಲಿ ಖಾಲಿರುವ ನರ್ಸಿಂಗ್ ಆಫೀಸರ್ ಹುದ್ದೆಗಳನ್ನು ಪಡೆದುಕೊಳ್ಳಲು ಈ ಪರೀಕ್ಷೆ ಕಡ್ಡಾಯವಾಗಿದೆ. ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು AIIMS ಅಧಿಕೃತ ವೆಬ್ ಸೈಟ್ https://www.aiimsexams.ac.in ಭೇಟಿ ನೀಡಬೇಕು.

Aiims Norcet 7 Registration 2024
Aiims Norcet 7 Registration 2024

ಈ ಸಾಮಾನ್ಯ ಅರ್ಹತಾ ಪರೀಕ್ಷೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಕಂಪ್ಯೂಟರ್ ಆಧಾರಿತ ಪ್ರಿಲಿಮ್ಸ್ ಮತ್ತು ಮೇನ್ಸ್ ಪರೀಕ್ಷೆಯನ್ನು ನಡೆಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಅರ್ಹತಾ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ. ಬಿಎಸ್ಸಿ ನರ್ಸಿಂಗ್, ಪ್ಯಾರಾ ಮೆಡಿಕಲ್ ಡಿಪ್ಲೋಮೋ, ಪಡೆದ ಅಭ್ಯರ್ಥಿಗಳು ಈ ಪರೀಕ್ಷೆಗೆ ನೊಂದಾಯಿಸಿಕೊಳ್ಳಬಹುದಾಗಿದೆ. ಈ ಲೇಖನದಲ್ಲಿ AIIMS NORCET 7 Registration ಪರೀಕ್ಷೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ನೀಡಲಾಗಿದ್ದು, ಗಮನವಿಟ್ಟು ಓದಿರಿ.

ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಆಗಸ್ಟ್ 1, 2024
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಆಗಸ್ಟ್ 21, 2024 (ಸಂಜೆ 5:00 ಒಳಗೆ)
  • ಅರ್ಜಿ ತಿದ್ದುಪಡಿಯ ಕೊನೆಯ ದಿನಾಂಕ – ಆಗಸ್ಟ್ 22, 2024
  • ಪರೀಕ್ಷಾ ಕೇಂದ್ರ ಮತ್ತು ಪರೀಕ್ಷಾ ನಗರದ ಬಗ್ಗೆ ಮಾಹಿತಿ ಪ್ರಕಟಣೆ ದಿನಾಂಕ – ಆಗಸ್ಟ್ 24, 2024
  • ಪ್ರವೇಶ ಪತ್ರಗಳು ಬಿಡುಗಡೆ ದಿನಾಂಕ – 30 ಆಗಸ್ಟ್, 2024
  • ಮೊದಲನೇ ಹಂತದ ಆನ್‌ಲೈನ್ ಪ್ರಿಲಿಮ್ಸ್ ಪರೀಕ್ಷಾ ದಿನಾಂಕ – ಸೆಪ್ಟಂಬರ್ 2,‌ 2024
  • ಎರಡನೇ ಹಂತದ ಮೇನ್ಸ್ ಪರೀಕ್ಷಾ ದಿನಾಂಕ – 15 ಸೆಪ್ಟೆಂಬರ್, 2024
  • ಫಲಿತಾಂಶಗಳ ಪ್ರಕಟಣೆಯ ದಿನಾಂಕ – ಅಕ್ಟೋಬರ್ 4, 2024

ಪರೀಕ್ಷೆಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು:

  • ಭಾರತೀಯ ನರ್ಸಿಂಗ್ ಕೌನ್ಸಿಲ್ / ರಾಜ್ಯ ನರ್ಸಿಂಗ್ ಕೌನ್ಸಿಲ್ ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ ಬಿಎಸ್ಸಿ ನರ್ಸಿಂಗ್ / ಬಿಎಸ್ಸಿ ಪಾಸ್‌ ಮಾಡಿರಬೇಕು.

ಅಥವಾ

  • ಬಿಎಸ್ಸಿ (ಪೋಸ್ಟ್‌-ಸರ್ಟಿಫಿಕೇಟ್‌) / ಪೋಸ್ಟ್‌-ಬೇಸಿಕ್ ಬಿಎಸ್ಸಿ ಮಾಡಿರಬೇಕು
  • ರಾಜ್ಯ / ಭಾರತೀಯ ನರ್ಸಿಂಗ್ ಕೌನ್ಸಿಲ್‌ನಲ್ಲಿ ದಾದಿಯರು ಮತ್ತು ಸೂಲಗಿತ್ತಿಯರಾಗಿ ನೋಂದಣಿ ಆಗಿರಬೇಕು.
  • ಎಲ್ಲಾ ಭಾಗವಹಿಸುವ ಏಮ್ಸ್‌ಗಳಿಗೆ ಅನ್ವಯವಾಗುವಂತೆ ಮೇಲೆ ತಿಳಿಸಲಾದ ಶೈಕ್ಷಣಿಕ ಅರ್ಹತೆಯನ್ನು ಪಡೆದ ನಂತರ ಕನಿಷ್ಠ 50 ಹಾಸಿಗೆಗಳ ಆಸ್ಪತ್ರೆಯಲ್ಲಿ ಎರಡು ವರ್ಷಗಳ ಸೇವಾ ಅನುಭವ ಹೊಂದಿರಬೇಕು.

ವಯಸ್ಸಿನ ಅರ್ಹತೆ:

ಈ ಪರೀಕ್ಷೆಗೆ ನೋಂದಾಯಿಸಿಕೊಳ್ಳುವ ಅಭ್ಯರ್ಥಿಗಳ ಬಯೋಮಿತಿಯು ಕನಿಷ್ಠ 18 ರಿಂದ ಗರಿಷ್ಠ 30 ವರ್ಷಗಳ ನಡುವೆ ಇರಬೇಕು.
ವಯೋಮಿತಿ ಸಡಲಿಕ್ಕೆ

  • SC/ST ವರ್ಗದ ಅಭ್ಯರ್ಥಿಗಳಿಗೆ – 5 ವರ್ಷಗಳು
  • OBC ವರ್ಗದ ಅಭ್ಯರ್ಥಿಗಳಿಗೆ – 3 ವರ್ಷಗಳು
  • PWBD ವರ್ಗದ ಅಭ್ಯರ್ಥಿಗಳಿಗೆ – 10 ವರ್ಷಗಳು

ಆಯ್ಕೆ ಪ್ರಕ್ರಿಯೆ:

AIIMS NORCET 7 ಪರೀಕ್ಷೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಕಂಪ್ಯೂಟರ್ ಆಧಾರಿತ ಎರಡು ಹಂತದಲ್ಲಿ ಪರೀಕ್ಷೆಯನ್ನು ನಡೆಸಲಾಗುತ್ತದೆ.

ಸಪ್ಟೆಂಬರ್ 15ರಂದು ಮೊದಲನೇ ಹಂತದ ಪ್ರಿಲಿಮ್ಸ್ ಪರೀಕ್ಷೆಯಲ್ಲಿ ಸಾಮಾನ್ಯ ಜ್ಞಾನ ಕೌಶಲ್ಯಗಳ ಕುರಿತು ಪರೀಕ್ಷೆ ನಡೆಸಲಾಗುತ್ತದೆ.

ಮೊದಲನೇ ಹಂತದ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಮಾತ್ರ ಎರಡನೇ ಹಂತದ ಪರೀಕ್ಷೆಗೆ ಅರ್ಹರಾಗುತ್ತಾರೆ. ಅಕ್ಟೋಬರ್ 4ರಂದು ಎರಡನೇ ಹಂತದ ಮೇನ್ಸ್ ಪರೀಕ್ಷೆ ನಡೆಸಲಾಗುತ್ತದೆ.

ಎರಡು ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಅರ್ಹತಾ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ.

ಅರ್ಜಿ ಶುಲ್ಕ:

  • ಸಾಮಾನ್ಯ/OBC ಅಭ್ಯರ್ಥಿಗಳು – ₹3000/-
  • SC/ST/EWS ಅಭ್ಯರ್ಥಿಗಳು – ₹2400/-
  • ಪಾವತಿ ವಿಧಾನ – ಆನ್ ಲೈನ್ ಮೂಲಕ

Also Read: SSC JHT Notification 2024(OUT): ವಿವಿಧ ಟ್ರಾನ್ಸ್‌ಲೇಟರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

How to Apply for AIIMS NORCET 7 Notification 2024

ಅರ್ಜಿ ಸಲ್ಲಿಸುವ ಪ್ರಕ್ರಿಯೆ

  • ಮೊದಲಿಗೆ aiimsexams.ac.in ವೆಬ್‌ಸೈಟ್‌ಗೆ ಭೇಟಿ ನೀಡಿ.
  • ಮುಖಪುಟದಲ್ಲಿ ಕಾಣುವ ‘ನೇಮಕಾತಿ’ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
  • ವಿವಿಧ ಹುದ್ದೆಗಳ ನೇಮಕಾತಿಯ ಪಟ್ಟಿಯಲ್ಲಿ “AIIMS NORCET 7 ” ಮೇಲೆ ಕ್ಲಿಕ್ ಮಾಡಿ.
  • AIIMS NORCET 7 ನೋಂದಣಿಯನ್ನು ಪೂರ್ಣಗೊಳಿಸಿ ಮತ್ತು ಲಾಗಿನ್ ಮಾಡಿ.
  • ಹೊಸ ಪುಟವು ತೆರೆಯುತ್ತದೆ ಅದು AIIMS NORCET 7 ಪರೀಕ್ಷೆ ಅಗತ್ಯವಿರುವ ಅರ್ಜಿ ವಿವರಗಳನ್ನು ಭರ್ತಿ ಮಾಡಿ‌‌.
  • ನಂತರ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಮತ್ತು ಅರ್ಜಿ ಶುಲ್ಕವನ್ನು ಪಾವತಿಸಿ.
  • ಅರ್ಜಿ ನಮೂನೆಯನ್ನು ಸಲ್ಲಿಸಿ ಮತ್ತು ಅರ್ಜಿ ನಮೂನೆಯ ಪ್ರಿಂಟ್ ತೆಗೆದುಕೊಳ್ಳಿ.

Important Direct Links;

Official Notification PDFDownload
AIIMS NORCET 7 Important Dates PDFDownload
AIIMS NORCET 7 Application form 2024 LinkLogin || Register
Official Websiteaiimsexams.ac.in
More UpdatesKarnataka Help.in

Leave a Comment