ಅಸ್ಸಾಂ ರೈಫಲ್ಸ್ ಕ್ರೀಡಾ ಕೋಟಾದಡಿಯಲ್ಲಿ ನೇಮಕಾತಿ, ಅರ್ಜಿ ಆಹ್ವಾನ
ಅಸ್ಸಾಂ ರೈಫಲ್ಸ್ ಗಣ್ಯ ಕ್ರೀಡಾಪಟುಗಳ ನೇಮಕಾತಿ ರ್ಯಾಲಿ 2025ಗೆ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ. ಅರ್ಜಿ ಸಲ್ಲಿಕೆಗೆ ಬೇಕಾದ ಅರ್ಹತಾಮಾನದಂಡಗಳೇನು?, ಮುಖ್ಯ ದಿನಾಂಕಗಳೇನು? ಸಂಪೂರ್ಣ ಮಾಹಿತಿ ಇಲ್ಲಿದೆ.
ಪ್ರಸಕ್ತ ಸಾಲಿನಲ್ಲಿ ಅಸ್ಸಾಂ ರೈಫಲ್ಸ್ನಲ್ಲಿ ಕ್ರೀಡಾ ಕೋಟಾದಡಿಯಲ್ಲಿ ರೈಫಲ್ಮನ್/ರೈಫಲ್ವುಮನ್ (ಜನರಲ್ ಡ್ಯೂಟಿ) ಹುದ್ದೆಗಳ ನೇಮಕಾತಿಗಾಗಿ ಶಿಲ್ಲಾಂಗ್ ಅಸ್ಸಾಂ ರೈಫಲ್ಸ್ನ ಮಹಾನಿರ್ದೇಶಕರ ಕಚೇರಿ ಗುರುವಾರ (ಆ.14) ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.
ಒಟ್ಟು 69 ಹುದ್ದೆಗಳಿಗೆ (ಬಾಕ್ಸಿಂಗ್, ಫುಟ್ಬಾಲ್, ಶೂಟಿಂಗ್ (ಕ್ರೀಡೆ), ಟೇಕ್ವಾಂಡೋ (ಕ್ಯೊರುಗಿ), ಕರಾಟೆ, ಸೆಪಕ್ ಟಕ್ರಾ, ಫೆನ್ಸಿಂಗ್, ಬ್ಯಾಡ್ಮಿಂಟನ್, ಅಥ್ಲೆಟಿಕ್ಸ್ ) ಪ್ರತಿಭಾನ್ವಿತ ಪುರುಷ/ಮಹಿಳಾ ಕ್ರೀಡಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಸ್ಸಾಂ ರೈಫೆಲ್ಸ್ ನ ಅಧಿಕೃತ ವೆಬ್ಸೈಟ್ https://www.assamrifles.gov.inನ ಮೂಲಕ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಮೆಟ್ರಿಕ್ಯುಲೇಷನ್ (ಹತ್ತನೇ ತರಗತಿ) ಪೂರ್ಣಗೊಳಿಸಿರಬೇಕು.
ಕ್ರೀಡಾ ಅರ್ಹತೆ:
ಯಾವುದೇ ಅಂತರರಾಷ್ಟ್ರೀಯ ಸ್ಪರ್ಧೆ/ರಾಷ್ಟ್ರೀಯ ಸ್ಪರ್ಧೆಗಳು/ಅಂತರ-ವಿಶ್ವವಿದ್ಯಾಲಯ ಪಂದ್ಯಾವಳಿಗಳು/ರಾಷ್ಟ್ರೀಯ ಕ್ರೀಡೆಗಳು/ಶಾಲಾ ಕ್ರೀಡಾಕೂಟಗಳು/ಖೇಲೋ ಭಾರತ ವಿಶ್ವವಿದ್ಯಾಲಯ ಕ್ರೀಡಾಕೂಟ/ಖೇಲೋ ಭಾರತ ಯುವ ಕ್ರೀಡಾಕೂಟ/ಖೇಲೋ ಭಾರತ ಚಳಿಗಾಲದ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ ಆಟಗಾರರು ಅರ್ಜಿ ಸಲ್ಲಿಸಬಹುದು.
ವಯಸ್ಸಿನ ಮಿತಿ:
01-08-2025 ರಂತೆ;
ಕನಿಷ್ಠ ಮಿತಿ – 18 ವರ್ಷಗಳು
ಗರಿಷ್ಠ ಮಿತಿ – 33 ವರ್ಷಗಳು
ವಯೋಮಿತಿ ಸಡಿಲಿಕೆ:
ಪ.ಜಾತಿ ಹಾಗೂ ಪ.ಪಂಗಡದ ಅಭ್ಯರ್ಥಿಗಳಿಗೆ – 10 ವರ್ಷಗಳು ಸಾಮಾನ್ಯ/ಒಬಿಸಿಗೆ ಅಭ್ಯರ್ಥಿಗಳಿಗೆ – 5 ವರ್ಷಗಳು
ಆಯ್ಕೆ ವಿಧಾನ:
→ ದೈಹಿಕ ಪರೀಕ್ಷೆ(PST) → ಮೋಟಾರ್ ಸಾಮರ್ಥ್ಯ ಪರೀಕ್ಷೆ(MAT) → ಟ್ರೇಲ್ಸ್ ಟೆಸ್ಟ್ → ದಾಖಲೆ ಪರಿಶೀಲನೆ. → ವೈದ್ಯಕೀಯ ಪರೀಕ್ಷೆ(DMT)
ವೇತನ ಶ್ರೇಣಿ:
7ನೇ ಸಿಪಿಸಿ ಪ್ರಕಾರ ವೇತನವನ್ನು ನೀಡಲಾಗುತ್ತದೆ
ಅರ್ಜಿ ಶುಲ್ಕ:
ಪ.ಜಾತಿ ಪ.ಪಂಗಡ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ – ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ.
ಸಾಮಾನ್ಯ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ 100ರೂ.
How to Apply for Assam Rifles Sports Quota Recruitment 2025
• ಅಸ್ಸಾಂ ರೈಫೆಲ್ಸ್ ಕ್ರೀಡಾ ಕೋಟ 2025 ಅರ್ಜಿ ನಮೂನೆ ವೆಬ್ಸೈಟ್ https://www.assamrifles.gov.in/onlineapp/Default.aspx ಗೆ ಭೇಟಿ ನೀಡಿ.
• ಅರ್ಜಿಯಲ್ಲಿ ಕೇಳಲಾಗುವ ಸ್ವ ವಿವರಗಳನ್ನು ನಮೂದಿಸಿ.
• ಅಗತ್ಯವಿರುವ ಭಾವಚಿತ್ರ, ಸಹಿ ಹಾಗೂ ಶೈಕ್ಷಣಿಕ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
• ನಂತರ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕ ಪಾವತಿ ಮಾಡಿ.
• ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ.
• ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.