ಪ್ರಸಕ್ತ ಸಾಲಿನಲ್ಲಿ ಅಸ್ಸಾಂ ರೈಫಲ್ಸ್‌ನಲ್ಲಿ ಕ್ರೀಡಾ ಕೋಟಾದಡಿಯಲ್ಲಿ ರೈಫಲ್‌ಮನ್/ರೈಫಲ್‌ವುಮನ್ (ಜನರಲ್ ಡ್ಯೂಟಿ) ಹುದ್ದೆಗಳ ನೇಮಕಾತಿಗಾಗಿ ಶಿಲ್ಲಾಂಗ್ ಅಸ್ಸಾಂ ರೈಫಲ್ಸ್‌ನ ಮಹಾನಿರ್ದೇಶಕರ ಕಚೇರಿ ಗುರುವಾರ (ಆ.14) ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.
ಒಟ್ಟು 69 ಹುದ್ದೆಗಳಿಗೆ (ಬಾಕ್ಸಿಂಗ್, ಫುಟ್ಬಾಲ್, ಶೂಟಿಂಗ್ (ಕ್ರೀಡೆ), ಟೇಕ್ವಾಂಡೋ (ಕ್ಯೊರುಗಿ), ಕರಾಟೆ, ಸೆಪಕ್ ಟಕ್ರಾ, ಫೆನ್ಸಿಂಗ್, ಬ್ಯಾಡ್ಮಿಂಟನ್, ಅಥ್ಲೆಟಿಕ್ಸ್ ) ಪ್ರತಿಭಾನ್ವಿತ ಪುರುಷ/ಮಹಿಳಾ ಕ್ರೀಡಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಸ್ಸಾಂ ರೈಫೆಲ್ಸ್ ನ ಅಧಿಕೃತ ವೆಬ್ಸೈಟ್ https://www.assamrifles.gov.inನ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – ಆಗಸ್ಟ್ 16, 2025
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಸೆಪ್ಟೆಂಬರ್ 15, 2025
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಮೆಟ್ರಿಕ್ಯುಲೇಷನ್ (ಹತ್ತನೇ ತರಗತಿ) ಪೂರ್ಣಗೊಳಿಸಿರಬೇಕು.
ಕ್ರೀಡಾ ಅರ್ಹತೆ:
ಯಾವುದೇ ಅಂತರರಾಷ್ಟ್ರೀಯ ಸ್ಪರ್ಧೆ/ರಾಷ್ಟ್ರೀಯ ಸ್ಪರ್ಧೆಗಳು/ಅಂತರ-ವಿಶ್ವವಿದ್ಯಾಲಯ ಪಂದ್ಯಾವಳಿಗಳು/ರಾಷ್ಟ್ರೀಯ ಕ್ರೀಡೆಗಳು/ಶಾಲಾ ಕ್ರೀಡಾಕೂಟಗಳು/ಖೇಲೋ ಭಾರತ ವಿಶ್ವವಿದ್ಯಾಲಯ ಕ್ರೀಡಾಕೂಟ/ಖೇಲೋ ಭಾರತ ಯುವ ಕ್ರೀಡಾಕೂಟ/ಖೇಲೋ ಭಾರತ ಚಳಿಗಾಲದ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ ಆಟಗಾರರು ಅರ್ಜಿ ಸಲ್ಲಿಸಬಹುದು.
ವಯಸ್ಸಿನ ಮಿತಿ:
01-08-2025 ರಂತೆ;
- ಕನಿಷ್ಠ ಮಿತಿ – 18 ವರ್ಷಗಳು
- ಗರಿಷ್ಠ ಮಿತಿ – 33 ವರ್ಷಗಳು
ವಯೋಮಿತಿ ಸಡಿಲಿಕೆ:
ಪ.ಜಾತಿ ಹಾಗೂ ಪ.ಪಂಗಡದ ಅಭ್ಯರ್ಥಿಗಳಿಗೆ – 10 ವರ್ಷಗಳು
ಸಾಮಾನ್ಯ/ಒಬಿಸಿಗೆ ಅಭ್ಯರ್ಥಿಗಳಿಗೆ – 5 ವರ್ಷಗಳು
ಆಯ್ಕೆ ವಿಧಾನ:
→ ದೈಹಿಕ ಪರೀಕ್ಷೆ(PST)
→ ಮೋಟಾರ್ ಸಾಮರ್ಥ್ಯ ಪರೀಕ್ಷೆ(MAT)
→ ಟ್ರೇಲ್ಸ್ ಟೆಸ್ಟ್
→ ದಾಖಲೆ ಪರಿಶೀಲನೆ.
→ ವೈದ್ಯಕೀಯ ಪರೀಕ್ಷೆ(DMT)
ವೇತನ ಶ್ರೇಣಿ:
7ನೇ ಸಿಪಿಸಿ ಪ್ರಕಾರ ವೇತನವನ್ನು ನೀಡಲಾಗುತ್ತದೆ
ಅರ್ಜಿ ಶುಲ್ಕ:
- ಪ.ಜಾತಿ ಪ.ಪಂಗಡ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ – ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ.
- ಸಾಮಾನ್ಯ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ 100ರೂ.
How to Apply for Assam Rifles Sports Quota Recruitment 2025
• ಅಸ್ಸಾಂ ರೈಫೆಲ್ಸ್ ಕ್ರೀಡಾ ಕೋಟ 2025 ಅರ್ಜಿ ನಮೂನೆ ವೆಬ್ಸೈಟ್ https://www.assamrifles.gov.in/onlineapp/Default.aspx ಗೆ ಭೇಟಿ ನೀಡಿ.
• ಅರ್ಜಿಯಲ್ಲಿ ಕೇಳಲಾಗುವ ಸ್ವ ವಿವರಗಳನ್ನು ನಮೂದಿಸಿ.
• ಅಗತ್ಯವಿರುವ ಭಾವಚಿತ್ರ, ಸಹಿ ಹಾಗೂ ಶೈಕ್ಷಣಿಕ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
• ನಂತರ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕ ಪಾವತಿ ಮಾಡಿ.
• ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ.
• ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.
Important Direct Links:
| Official Notification PDF | Download |
| Online Application Form Link | Apply Now |
| Official Website | assamrifles.gov.in |
| More Updates | KarnatakaHelp.in |
I do not even know how I ended up here but I thought this post was great I dont know who you are but definitely youre going to a famous blogger if you arent already Cheers