ಭಾರತ ಸರ್ಕಾರದ ರಕ್ಷಣಾ ಸಚಿವಾಲಯದ ಅಧೀನದ ಪ್ರಮುಖ ಸಾರ್ವಜನಿಕ ವಲಯ ಉದ್ದಿಮೆಯಾಗಿರುವ ಆರ್ಮರ್ಡ್ ವೆಹಿಕಲ್ಸ್ ನಿಗಮ ಲಿಮಿಟೆಡ್(AVNL)ನ ಒಂದು ಘಟಕವಾಗಿರುವ ಚೆನ್ನೈನ ಅವಡಿಯ ಹೆವಿ ವೆಹಿಕಲ್ಸ್ ಫ್ಯಾಕ್ಟರಿ(HVF)ಯಲ್ಲಿ 220 ಜೂನಿಯರ್ ಟೆಕ್ನಿಷಿಯನ್ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಬಿಡುಗಡೆಗೊಂಡಿದೆ.
ರಿಗ್ಗರ್, ಹೀಟ್ ಟ್ರೀಟ್ಮೆಂಟ್ ಆಪರೇಟರ್, ಫಿಟ್ಟರ್ ಆಟೋ ಎಲೆಕ್ಟ್ರಿಕ್, ಮಶಿನಿಷ್ಟ್ ವಿಭಾಗಗಳು ಸೇರಿದಂತೆ ಇತರೆ ವಿಭಾಗಗಳಿಗೆ ಅಭ್ಯರ್ಥಿಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಿದೆ.ಸಂಬಂಧಿತ ಟ್ರೇಡ್ನಲ್ಲಿ ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆಸಕ್ತ ಉದ್ಯೋಗಾಕಾಂಕ್ಷಿಗಳು ಅಧಿಕೃತ ವೆಬ್ಸೈಟ್ https://www.avnl.co.in/careers-vacanciesನ ಮೂಲಕ ಅರ್ಜಿ ನಮೂನೆ ಪಡೆದು ಮಾಹಿತಿ ತುಂಬಿ, ಫೆ.14ರೊಳಗೆ ‘ಮುಖ್ಯ ಪ್ರಧಾನ ವ್ಯವಸ್ಥಾಪಕರು, ಹೆವಿ ವೆಹಿಕಲ್ಸ್ ಪ್ಯಾಕ್ಟರಿ, ಪೋಸ್ಟ್ ಬ್ಯಾಗ್ ಸಂಖ್ಯೆ-01 ಹೆಚ್ವಿಎಫ್ ಎಸ್ಟೇಟ್ ಅವಡಿ, ಚೆನೈ-600054’ ವಿಳಾಸಕ್ಕೆ ಸಾಮಾನ್ಯ ಅಂಚೆ ಮೂಲಕ ರವಾನಿಸಬೇಕು.
✓ ಜೂನಿಯರ್ ಟೆಕ್ನಿಷಿಯನ್(ಮೆಶಿನಿಷ್ಟ್) ಹುದ್ದೆಗೆ; ಅಭ್ಯರ್ಥಿಗಳು ಮಷಿನಿಸ್ಟ್ ವಿಭಾಗದಲ್ಲಿ ನ್ಯಾಷನಲ್ ಅಪ್ರೆಂಟಿಸ್ ಸರ್ಟಿಫಿಕೇಟ್/ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್ ಹೊಂದಿರಬೇಕು.
✓ ಜೂನಿಯರ್ ಟೆಕ್ನಿಷಿಯನ್(MHE ಆಪರೇಟರ್) ಹುದ್ದೆಗೆ; ಅಭ್ಯರ್ಥಿಗಳು ಕ್ರೇನ್ ಆಪರೇಷನ್ಸ್ ವಿಭಾಗದಲ್ಲಿ ನ್ಯಾಷನಲ್ ಅಪ್ರೆಂಟಿಸ್ ಸರ್ಟಿಫಿಕೇಟ್/ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್/ಸ್ಟೇಟ್ ಟ್ರೇಡ್ ಸರ್ಟಿಫಿಕೇಟ್ ಅನ್ನು ಹೊಂದಿರಬೇಕು ಅಥವಾ 10ನೇ ತರಗತಿ/ತತ್ಸಮಾನ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರಬೇಕು, ಭಾರೀ ವಾಹನಗಳಿಗೆ ಚಾಲನಾ ಪರವಾನಗಿ ಮತ್ತು ಕ್ರೇನ್ ಕಾರ್ಯಾಚರಣೆಗಳನ್ನು ನಿರ್ವಹಿಸುವಲ್ಲಿ ಕನಿಷ್ಠ 02 ವರ್ಷಗಳ ಅನುಭವ ಹೊಂದಿರಬೇಕು.
✓ ಜೂನಿಯರ್ ಟೆಕ್ನಿಷಿಯನ್(ರಿಗ್ಗರ್) ಹುದ್ದೆಗೆ; ಅಭ್ಯರ್ಥಿಗಳು ರಿಗ್ಗರ್ ವಿಭಾಗದಲ್ಲಿ ನ್ಯಾಷನಲ್ ಅಪ್ರೆಂಟಿಸ್ ಸರ್ಟಿಫಿಕೇಟ್/ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್/ಸ್ಟೇಟ್ ಟ್ರೇಡ್ ಸರ್ಟಿಫಿಕೇಟ್ ಅನ್ನು ಹೊಂದಿರಬೇಕು ಜೊತೆಗೆ ಲೋಡ್ ಮತ್ತು ಅನ್ಲೋಡಿಂಗ್ನಲ್ಲಿ ಕನಿಷ್ಠ 02 ವರ್ಷಗಳ ಅನುಭವದೊಂದಿಗೆ 10ನೇ ತರಗತಿ/ತತ್ಸಮಾನ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರಬೇಕು.
✓ ಜೂನಿಯರ್ ಟೆಕ್ನಿಷಿಯನ್(ಹೀಟ್ ಟ್ರೀಟ್ಮೆಂಟ್ ಆಪರೇಟರ್) ಹುದ್ದೆಗೆ; ಅಭ್ಯರ್ಥಿಗಳು ಫೋರ್ಜರ್ ಮತ್ತು ಹೀಟ್ ಟ್ರೀಟರ್ ವಿಭಾಗದಲ್ಲಿ ನ್ಯಾಷನಲ್ ಅಪ್ರೆಂಟಿಸ್ ಸರ್ಟಿಫಿಕೇಟ್/ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್/ಸ್ಟೇಟ್ ಟ್ರೇಡ್ ಸರ್ಟಿಫಿಕೇಟ್ ಅನ್ನು ಹೊಂದಿರಬೇಕು.
✓ ಜೂನಿಯರ್ ಟೆಕ್ನಿಷಿಯನ್(ಫಿಟ್ಟರ್ ಆಟೋ ಎಲೆಕ್ಟ್ರಿಕ್) ಹುದ್ದೆಗೆ; ಅಭ್ಯರ್ಥಿಗಳು ಆಟೋ ಎಲೆಕ್ಟ್ರಿಷಿಯನ್ ವಿಭಾಗದಲ್ಲಿ ನ್ಯಾಷನಲ್ ಅಪ್ರೆಂಟಿಸ್ ಸರ್ಟಿಫಿಕೇಟ್/ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್/ಸ್ಟೇಟ್ ಟ್ರೇಡ್ ಸರ್ಟಿಫಿಕೇಟ್ ಅನ್ನು ಹೊಂದಿರಬೇಕು.
✓ ಜೂನಿಯರ್ ಟೆಕ್ನಿಷಿಯನ್(ಸ್ಯಾಂಡ್ ಮತ್ತು ಶಾಟ್ ಬ್ಲಾಸ್ಟರ್) ಹುದ್ದೆಗೆ; ಅಭ್ಯರ್ಥಿಗಳು 10ನೇ ತರಗತಿ/ತತ್ಸಮಾನ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರಬೇಕು ಅಥವಾ ಇಂಡಸ್ಟ್ರಿಯಲ್ಲಿ ಶಾಟ್ ಬ್ಲಾಸ್ಟಿಂಗ್ನಲ್ಲಿ ಕನಿಷ್ಠ 02 ವರ್ಷಗಳ ಅನುಭವ ಹೊಂದಿರಬೇಕು.
ಆಯ್ಕೆಯಾದ ಅಭ್ಯರ್ಥಿಗಳಿಗೆ ₹21,000ವರೆಗೆ ಮಾಹೆಯಾನ ವೇತನ, ಅನ್ವಯವಾಗುವ ಕೈಗಾರಿಕಾ ತುಟ್ಟಿ ಭತ್ಯೆ (IDA) ಹಾಗೂ ಇತರೆ ಸೌಲಭ್ಯಗಳನ್ನು ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಪ.ಜಾತಿ, ಪ.ಪಂಗಡ, ಮಹಿಳೆಯರು, ಪಿಡಬ್ಲ್ಯೂಬಿಡಿ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ – ಶುಲ್ಕ ವಿನಾಯಿತಿ ನೀಡಲಾಗಿದೆ. ಉಳಿದ ಎಲ್ಲಾ ವರ್ಗದ ಅಭ್ಯರ್ಥಿಗಳಿಗೂ – ₹300
ಅರ್ಜಿ ಸಲ್ಲಿಸುವ ವಿಧಾನ:
• ಮೊದಲಿಗೆ ಅಭ್ಯರ್ಥಿಗಳು ಭಾರತ ಸರ್ಕಾರದ ಅಧಿಕೃತ ಪೋರ್ಟಲ್ https://ddpdoo.gov.in/career ಗೆ ಭೇಟಿ ನೀಡಿ.
• ಖಾಲಿ ಹುದ್ದೆ ಮತ್ತು ಸುತ್ತೋಲೆ ವಿಭಾಗದಲ್ಲಿ ನೀಡಲಾಗಿರುವ “ಅವಡಿಯ ಹೆವಿ ವೆಹಿಕಲ್ಸ್ ಫ್ಯಾಕ್ಟರಿಯಲ್ಲಿ ನಿಗದಿತ ಅವಧಿಯ ಆಧಾರದ ಮೇಲೆ ಜೂನಿಯರ್ ಟೆಕ್ನಿಷಿಯನ್ ಹುದ್ದೆಗಳಿಗೆ ಜಾಹೀರಾತು(Advertisement for the posts of Junior Technician on Fixed Tenure Basis at Heavy Vehicles Factory, Avadi)” ಲಿಂಕ್ ಮೇಲೆ ಕ್ಲಿಕ್ ಮಾಡಿ ಅನುಬಂಧ-ಎ ರಲ್ಲಿನ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ ಮುದ್ರಿಸಿ. ಅಥವಾ ಇಲ್ಲಿ ಕ್ಲಿಕ್ ಮಾಡಿ.
• ನಂತರ ಅರ್ಜಿ ನಮೂನೆಯಲ್ಲಿ ಕೇಳಲಾಗುವ ತಮ್ಮ ಮೂಲ ಮಾಹಿತಿಗಳನ್ನು ನಮೂದಿಸಿ.
• ಅರ್ಜಿ ಶುಲ್ಕವನ್ನು ಎಸ್ಬಿಐ ಕಲೆಕ್ಟ್(SBI Collect) ಮೂಲಕ ಆನ್ ಲೈನ್ ನಲ್ಲಿ ಪಾವತಿಸಿ.
• ನಂತರ ಭಾವಚಿತ್ರ, ಸಹಿ, ಶೈಕ್ಷಣಿಕ ವಿವರ ಹಾಗೂ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ.
• ಈ ಕೆಳಗಿನ ವಿಳಾಸಕ್ಕೆ ಫೆಬ್ರವರಿ 14ರೊಳಗೆ ತಲುಪುವಂತೆ ಕಳುಹಿಸಬೇಕು.
ವಿಳಾಸ: ಚೀಫ್ ಜನರಲ್ ಮ್ಯಾನೇಜರ್, ಹೆವಿ ವೆಹಿಕಲ್ಸ್ ಫ್ಯಾಕ್ಟರಿ, (ಆರ್ಮರ್ಡ್ ವೆಹಿಕಲ್ಸ್ ನಿಗಮ್ ಲಿಮಿಟೆಡ್ನ ಒಂದು ಘಟಕ) ಪೋಸ್ಟ್ ಬ್ಯಾಗ್ ಸಂಖ್ಯೆ 01, HVF ಎಸ್ಟೇಟ್, ಅವಡಿ, ಚೆನ್ನೈ- 600054