ನೌಕಾಪಡೆಯಲ್ಲಿ ‘ಎಸ್‌ಎಸ್‌ಸಿ ಅಧಿಕಾರಿ’ಗಳ ನೇಮಕಾತಿ

ಅರ್ಜಿ ಸಲ್ಲಿಸಲು ಫೆ.24ರ ಗಡುವು

Published on:

ಕೇರಳದ ಎಜಿಮಲದ ಭಾರತೀಯ ನೌಕಾ ಅಕಾಡೆಮಿ(INA)ಯ ವಿವಿಧ ಶಾಖೆಗಳಿಗೆ ಜನವರಿ2027ರಿಂದ ಆರಂಭವಾಗಲಿರುವ ಶಾರ್ಟ್‌ ಸರ್ವಿಸ್‌ ಕಮಿಷನ್‌(SSC) ಕೋರ್ಸ್‌ಗಳ ಮೂಲಕ ಅಧಿಕಾರಿ ಹುದ್ದೆಗಳ ಭರ್ತಿಗಾಗಿ ಅವಿವಾಹಿತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಭಾರತೀಯ ನೌಕಾಪಡೆಯು ಅರ್ಜಿ ಆಹ್ವಾನಿಸಿದೆ.

ತಾಂತ್ರಿಕ ಶಾಖೆ(149 + ಹೈಡ್ರೋ ಕೇಡರ್ 06), ಶಿಕ್ಷಣ ಶಾಖೆ(15), ಕಾರ್ಯನಿರ್ವಾಹಕ ಶಾಖೆ(96)ಗೆ ಒಟ್ಟು 266 ಹುದ್ದೆಗಳಿಗೆ ನೇಮಕ ಪ್ರಕ್ರಿಯೆ ನಡೆಯಲಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು ಫೆ.24ರೊಳಗೆ ನೌಕಾಪಡೆಯ ಅಧಿಕೃತ ವೆಬ್ಸೈಟ್ https://www.joinindiannavy.gov.in/ಗೆ ಭೇಟಿ ನೀಡಿ ಅರ್ಜಿ ಸಲ್ಲಿಕೆ ಮಾಡಬಹುದು.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಜನವರಿ 24, 2026
  • ಅರ್ಜಿ ಸಲ್ಲಿಸಲು‌ ಕೊನೆಯ ದಿನಾಂಕ – ಫೆಬ್ರವರಿ 24, 2026

ಹುದ್ದೆಗಳ ವಿವರ:

ಎಕ್ಸಿಕ್ಯೂಟಿವ್ ಬ್ರಾಂಚ್ – 76 ಹುದ್ದೆಗಳು
ಪೈಲೆಟ್ – 25 ಹುದ್ದೆಗಳು
ನಾವೆಲ್ ಏರ್ ಆಪರೇಷನ್ಸ್ – 20 ಹುದ್ದೆಗಳು
ಏರ್ ಟ್ರಾಫಿಕ್ ಕಂಟ್ರೋಲರ್ – 18 ಹುದ್ದೆಗಳು
ಲಾಜಿಸ್ಟಿಕ್ಸ್ – 10 ಹುದ್ದೆಗಳು
ಎಜುಕೇಶನ್ – 15 ಹುದ್ದೆಗಳು
ಎಂಜಿನಿಯರಿಂಗ್ ಬ್ರಾಂಚ್ (ಜನರಲ್ ಸರ್ವಿಸ್) – 42 ಹುದ್ದೆಗಳು
ಸಬ್ ಮೇರಿನ್ ಟೆಕ್ ಎಂಜಿನಿಯರಿಂಗ್ – 08 ಹುದ್ದೆಗಳು
ಎಲೆಕ್ಟ್ರಿಕಲ್ ಬ್ರಾಂಚ್ (ಜನರಲ್ ಸರ್ವಿಸ್) – 38 ಹುದ್ದೆಗಳು
ಸಬ್ ಮೇರಿನ್ ಟೆಕ್ ಎಲೆಕ್ಟ್ರಿಕಲ್ – 08 ಹುದ್ದೆಗಳು

ಒಟ್ಟು – 260 ಹುದ್ದೆಗಳು

ಶೈಕ್ಷಣಿಕ ಅರ್ಹತೆ:

ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಸಂಬಂಧಿತ ವಿಭಾಗದಲ್ಲಿ ಬಿ.ಇ/ಬಿ.ಟೆಕ್, ಬಿ.ಎಸ್ಸಿ/ಬಿ.ಕಾಂ/ಬಿ.ಎಸ್ಸಿ.(ಐಟಿ), ಪಿಜಿ ಡಿಪ್ಲೋಮಾ, ಎಂಸಿಎ/ಎಂಎಸ್ಸಿ(ಐಟಿ), ಎಂಇ/ಎಂ.ಟೆಕ್/ಎಂ.ಬಿ.ಎ ಪದವಿ ಪೂರ್ಣಗೊಳಿಸಿರಬೇಕು.

ಹುದ್ದೆಗಳಿಗೆ ಆಧಾರಿತವಾಗಿ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದ್ದು, ಅಭ್ಯರ್ಥಿಗಳು ತಪ್ಪದೆ ಸಂಪೂರ್ಣ ಅಧಿಸೂಚನೆಯನ್ನು ಓದಬೇಕು.

ವಯೋಮಿತಿ:

✓ ಎಕ್ಸಿಕ್ಯೂಟಿವ್ ಬ್ರಾಂಚ್, ಲಾಜಿಸ್ಟಿಕ್ಸ್, ಎಂಜಿನಿಯರಿಂಗ್ ಬ್ರಾಂಚ್ (ಜನರಲ್ ಸರ್ವಿಸ್), ಸಬ್ ಮೇರಿನ್ ಟೆಕ್ ಎಂಜಿನಿಯರಿಂಗ್, ಎಲೆಕ್ಟ್ರಿಕಲ್ ಬ್ರಾಂಚ್ (ಜನರಲ್ ಸರ್ವಿಸ್) ಹಾಗೂ ಸಬ್ ಮೇರಿನ್ ಟೆಕ್ ಎಲೆಕ್ಟ್ರಿಕಲ್ ಹುದ್ದೆಗಳಿಗೆ;

• 02 ಜನವರಿ 2002 ಮತ್ತು 01 ಜುಲೈ 2007 (ಎರಡೂ ದಿನಾಂಕಗಳು ಸೇರಿದಂತೆ) ನಡುವೆ ಜನಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

✓ ಪೈಲೆಟ್ ನಾವೆಲ್ ಹಾಗೂ ಏರ್ ಆಪರೇಷನ್ಸ್ ಹುದ್ದೆಗಳಿಗೆ;

• 02 ಜನವರಿ 2003 ಮತ್ತು 01 ಜನವರಿ 2008 (ಎರಡೂ ದಿನಾಂಕಗಳು ಸೇರಿದಂತೆ) ನಡುವೆ ಜನಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

✓ ಏರ್ ಟ್ರಾಫಿಕ್ ಕಂಟ್ರೋಲರ್ ಹಾಗೂ ಎಜುಕೇಶನ್ ಹುದ್ದೆಗಳಿಗೆ;

• 02 ಜನವರಿ 2000/2002 ಮತ್ತು 01 ಜನವರಿ 2006 (ಎರಡೂ ದಿನಾಂಕಗಳು ಸೇರಿದಂತೆ) ನಡುವೆ ಜನಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಸಂಬಳ:

ಸಬ್ ಲೆಫ್ಟಿನೆಂಟ್‌ ಹುದ್ದೆಗಳಿಗೆ 1,25,000ರೂ. ವರೆಗೆ ಮಾಹೆಯಾನ ವೇತನವನ್ನು ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ:

  • ಅರ್ಹ ಅಭ್ಯರ್ಥಿಗಳ ಶಾರ್ಟ್ ಲಿಸ್ಟ್
  • SSB ಸಂದರ್ಶನ
  • ಮೆರಿಟ್ ಪಟ್ಟಿ
  • ದಾಖಲೆ ಪರಿಶೀಲನೆ
  • ವೈದ್ಯಕೀಯ ಪರೀಕ್ಷೆ

ಅರ್ಜಿ ಶುಲ್ಕ:

ಉಲ್ಲೇಖಿಸಲಾಗಿರುವುದಿಲ್ಲ.

ಆನ್ ಲೈನ್ ಮೂಲಕ ಅರ್ಜಿ‌ ಸಲ್ಲಿಸುವ ವಿಧಾನ:

• ಮೊದಲಿಗೆ ಅಭ್ಯರ್ಥಿಗಳು ಭಾರತೀಯ ನೌಕಾಪಡೆಯ ಅಧಿಕೃತ ವೆಬ್ಸೈಟ್ https://www.joinindiannavy.gov.in/enಗೆ ಭೇಟಿ ನೀಡಿ.

• ನಂತರ ಸುದ್ದಿ ಶೀರ್ಷಿಕೆಯ ಕೆಳಗೆ ನೀಡಲಾಗಿರುವ “SSC ಗಾಗಿ ಆನ್‌ಲೈನ್ ಅರ್ಜಿ ವಿಂಡೋ (ವಿವಿಧ ನಮೂದುಗಳು) ಜನವರಿ 27 ಕೋರ್ಸ್ ಲೈವ್ ಆಗಿದೆ. ಜಾಹೀರಾತನ್ನು ಡೌನ್‌ಲೋಡ್ ಮಾಡಿ. ಅರ್ಜಿ ಸಲ್ಲಿಸಲು ಲಾಗಿನ್ ಮಾಡಿ.” ಲಿಂಕ್ ಮೇಲೆ ಕ್ಲಿಕ್ ಮಾಡಿ.

• ನಂತರ “ನಿಮ್ಮ ಅರ್ಜಿಯನ್ನು ಈಗಲೇ ಆನ್‌ಲೈನ್‌ನಲ್ಲಿ ಪೂರ್ಣಗೊಳಿಸಿ” ಆಯ್ಕೆ ಮೇಲೆ ಟ್ಯಾಪ್ ಮಾಡಿ.

• ಇ-ಮೇಲ್ ಐಡಿ ಹಾಗೂ ಪಾಸ್ವರ್ಡ್ ಬಳಸಿ ಲಾಗಿನ್ ಆಗಿ ಅಥವಾ ಹೊಸ ಬಳಕೆದಾರರಾಗಿದ್ದಲ್ಲಿ ನೋಂದಾಯಿಸಿ.

• ಬಳಿಕ ಅರ್ಜಿಯಲ್ಲಿ ಕೇಳಲಾಗುವ ಸ್ವ-ವಿವರ, ಭಾವಚಿತ್ರ, ಸಹಿ, ಶೈಕ್ಷಣಿಕ ಮಾಹಿತಿ ಹಾಗೂ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.

• ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ, ತಿದ್ದುಪಡಿಗಳಿದ್ದಲ್ಲಿ ಅದನ್ನು ಸರಿಪಡಿಸಿ ಸಲ್ಲಿಸಿ.

• ಅಂತಿಮವಾಗಿ ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿಯ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.

Important Direct Links:

Official Notification PDFDownload
Online Application Form LinkApply Now
Official Websitewww.joinindiannavy.gov.in
More UpdatesKarnatakaHelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

2 thoughts on “ನೌಕಾಪಡೆಯಲ್ಲಿ ‘ಎಸ್‌ಎಸ್‌ಸಿ ಅಧಿಕಾರಿ’ಗಳ ನೇಮಕಾತಿ”

Leave a Comment