ಅಪ್ರೆಂಟಿಸ್‌ಶಿಪ್‌ ಟ್ರೈನಿಗಳ ಭರ್ತಿ; ಸಂದರ್ಶನಕ್ಕೆ ಆಹ್ವಾನ

ಒಂದು ವರ್ಷದ ತರಬೇತಿ | ವಾಕ್‌ ಇನ್‌ ಸಂದರ್ಶನದ ಮುಖೇನ ಆಯ್ಕೆ

Published on:

ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಸ್ವಾಯತ್ತ ಸಂಸ್ಥೆಯಾಗಿರುವ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ(CSIR)ಯ ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗಶಾಲೆಗಳು(NAL) ಘಟಕದಲ್ಲಿ ಅಪ್ರೆಂಟಿಸ್‌ಶಿಪ್‌ ಟ್ರೈನಿಗಳ ಭರ್ತಿಗಾಗಿ ವಾಕ್‌-ಇನ್‌-ಸಂದರ್ಶನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಒಟು 35 ಸ್ಥಾನಗಳನ್ನು 1 ವರ್ಷದ ಅವಧಿಗೆ ಆಯ್ಕೆ ಮಾಡಿಕೊಳ್ಳಲಿದೆ. ಸಂಬಂಧಿತ ಟ್ರೇಡ್‌ನಲ್ಲಿ ಐಟಿಐ ಪ್ರಮಾಣ ಪತ್ರ ಹೊಂದಿರುವ ಆಸಕ್ತ ಅಭ್ಯರ್ಥಿಗಳು ಅಪ್ರೆಂಟಿಸ್‌ಶಿಪ್‌ ಪೋರ್ಟಲ್‌ https://www.apprenticeshipindia.gov.in/ನಲ್ಲಿ ನೋಂದಣಿಯಾಗಬೇಕು. ನಂತರ ಅರ್ಜಿ ನಮೂನೆ ಪಡೆದುಕೊಂಡು ತುಂಬಿ, ಫೆ.4 ಮತ್ತು 5ರಂದು ಬೆಳಿಗ್ಗೆ 08.30 ರಿಂದ 9.30 ರವರೆಗೆ ಆರ್‌ಎಬಿ ಮೀಟಿಂಗ್ ಕಾಂಪ್ಲೆಕ್ಸ್, ಸಿಎಸ್‌ಐಆರ್-ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರೀಸ್, ಬೆಂಗಳೂರಿನಲ್ಲಿ ಜರುಗಲಿರುವ ಸಂದರ್ಶನ ಹಾಜರಾಗಬಹುದು.

ಟ್ರೇಡ್‌ ಆಧಾರಿತ ಸಂದರ್ಶನ ದಿನಾಂಕಗಳು:

  • ಫೆಬ್ರವರಿ 04ರಂದು ಫಿಟ್ಟರ್, ಎಲೆಕ್ಟ್ರಿಷಿಯನ್, ಮೆಕ್ಯಾನಿಕ್ ಮೋಟಾರ್ ವೆಹಿಕಲ್ (MMV) ಟ್ರೇಡ್‌.
  • ಫೆಬ್ರವರಿ 05ಕ್ಕೆ ಮೆಷಿನಿಸ್ಟ್, ಟರ್ನರ್, ಡ್ರಾಟ್ಸ್‌ಮನ್ ಮೆಕ್ಯಾನಿಕಲ್, ವೆಲ್ಡರ್ (ಗ್ಯಾಸ್ & ಎಲೆಕ್ಟ್ರಿಕ್).

ಶೈಕ್ಷಣಿಕ ಅರ್ಹತೆ:

ಆಯಾ ಸಂಬಂಧಿತ ಟ್ರೇಡ್‌ನಲ್ಲಿ ಐಟಿಐ ಪೂರ್ಣಗೊಳಿಸಿರಬೇಕು.

ವಯಸ್ಸಿನ ಮಿತಿ:

ಕನಿಷ್ಠ – 18 ವರ್ಷಗಳು ಗರಿಷ್ಠ – 35 ವರ್ಷಗಳು

ಸ್ಟೆಪೆಂಡ್‌:

ಪ್ರತಿ ತಿಂಗಳು ₹10,560/- [ವೆಲ್ಡರ್ (ಗ್ಯಾಸ್ & ಎಲೆಕ್ಟ್ರಿಕ್) – ₹9,600/-]

ಅರ್ಜಿ ಸಲ್ಲಿಕೆ ಹೇಗೆ.?

ಆಸಕ್ತ ಅಭ್ಯರ್ಥಿಗಳು ಅಧಿಕೃತ ಜಾಲತಾಣದಲ್ಲಿ ಲಭ್ಯವಿರುವ(ಅಥವಾ ಕೇಳ ನೀಡಲಾದ) ಅರ್ಜಿ ನಮೂನೆ ಪಡೆದು ಭರ್ತಿ ಮಾಡಿ, ಈ ಸುದ್ದಿಯ ಎರಡನೇ ಸಾಲಿನಲ್ಲಿ ತಿಳಿಸಲಾದ ವಿಳಾಸಕ್ಕೆ ತಮ್ಮ ವಿದ್ಯಾರ್ಹತೆ ದಾಖಲೆಗಳ ಜೊತೆಗೆ ಅಧಿಸೂಚನೆಯಲ್ಲಿ ತಿಳಿಸಲಾದ ಇತರೆ ಎಲ್ಲಾ ಮೂಲ ದಾಖಲೆಗಳನ್ನು ತೆಗೆದುಕೊಂಡು ಸಂದರ್ಶನಕ್ಕೆ ಹಾಜರಾಗಬೇಕು.

Important Direct Links:

Official Notification and Application PDF Form LinkDownload
Apprenticeship Registration Linkapprenticeshipindia.gov.in
Official Websitewww.nal.res.in
More UpdatesKarnatakaHelp.in
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ತೊಡಗಿಕೊಂಡಿದ್ದೇನೆ.

1 thought on “ಅಪ್ರೆಂಟಿಸ್‌ಶಿಪ್‌ ಟ್ರೈನಿಗಳ ಭರ್ತಿ; ಸಂದರ್ಶನಕ್ಕೆ ಆಹ್ವಾನ”

Leave a Comment