CTET 2026ರ ಸಿಟಿ ಇಂಟಿಮೇಶನ್‌ ಬಿಡುಗಡೆ

Published on:

Updated On:

ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಫೆ.08ರಂದು ನಡೆಸಲಿರುವ 21ನೇ ಆವೃತ್ತಿಯ ಕೇಂದ್ರೀಯ ಶಿಕ್ಷಕರ ಅರ್ಹತಾ ಪರೀಕ್ಷೆ (CTET)2026ರ ಪರೀಕ್ಷಾ ದಿನಾಂಕ ಹಾಗೂ ನಗರ ಮಾಹಿತಿ ಕುರಿತು ಮುಂಗಡ ಮಾಹಿತಿಯನ್ನು ಬಿಡುಗಡೆಗೊಳಿಸಿದೆ.

ಪತ್ರಿಕೆ ಎರಡು, ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 12ರವರೆಗೆ ಮತ್ತು ಪತ್ರಿಕೆ ಒಂದು, ಮಧ್ಯಾಹ್ನ 2.30 ರಿಂದ ಸಂಜೆ 5ರವರೆಗೆ ಪರೀಕ್ಷೆ ನಡೆಯಲಿದೆ. ದೇಶಾದ್ಯಂತ 132 ನಗರಗಳ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 20 ಭಾಷೆಗಳಲ್ಲಿ ನಡೆಯಲಿದೆ. ಸದರಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಅಧಿಕೃತ ಜಾಲತಾಣ https://ctet.nic.in/ಕ್ಕೆ ಭೇಟಿ ನೀಡಿ, ತಮ್ಮ ಲಾಗಿನ್ ರುಜುವಾತುಗಳನ್ನು ಬಳಸಿಕೊಂಡು ಪರೀಕ್ಷೆ ದಿನಾಂಕ, ಪರೀಕ್ಷಾ ನಗರದ ಮಾಹಿತಿಯನ್ನು ಪರಿಶೀಲಿಸಬಹುದು.

CTET ಫೆಬ್ರವರಿ 2026ರ ಪರೀಕ್ಷಾ ದಿನಾಂಕ ಮತ್ತು ನಗರ ಮಾಹಿತಿ ನೋಡುವ ವಿಧಾನ

• ಮೊದಲಿಗೆ ಅಭ್ಯರ್ಥಿಗಳು CTET NTA ಅಧಿಕೃತ ಜಾಲತಾಣ https://ctet.nic.in/ಕ್ಕೆ ಭೇಟಿ ನೀಡಿ.

• ನಂತರ ಅಭ್ಯರ್ಥಿ ಚಟುವಟಿಕೆಗಳು ವಿಭಾಗದಲ್ಲಿ ನೀಡಲಾಗಿರುವ “CTET ಫೆಬ್ರವರಿ-2026 ರ ದಿನಾಂಕ ಮತ್ತು ನಗರವನ್ನು ವೀಕ್ಷಿಸಿ” ಲಿಂಕ್ ಮೇಲೆ ಕ್ಲಿಕ್ ಮಾಡಿ.

• ಬಳಿಕ ಅರ್ಜಿ ಸಂಖ್ಯೆ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ.

• ಅಂತಿಮವಾಗಿ ಅಭ್ಯರ್ಥಿಗಳು ಪರೀಕ್ಷಾ ದಿನಾಂಕ, ಸಮಯ, ನಗರ ಮಾಹಿತಿ ಹಾಗೂ ಇನ್ನಿತರ ಅಗತ್ಯ ವಿವರಗಳನ್ನು ಪರಿಶೀಲಿಸಿಕೊಳ್ಳಿ/ಮುದ್ರಿಸಿ.

Important Direct Links:

CTET February 2026 Exam City Intimation LinkCheck Now
Official Websitehttps://ctet.nic.in/
More UpdatesKarnatakaHelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

Leave a Comment