2025ನೇ ಸಾಲಿನ ಬಿ.ಇಡಿ ದಾಖಲಾತಿ ಸಂಬಂಧಿಸಿದಂತೆ ಎರಡನೇ ಸುತ್ತಿನ ಸೀಟು ಹಂಚಿಕೆಗಾಗಿ ಅಭ್ಯರ್ಥಿಗಳು ತಮ್ಮ ಆಯ್ಕೆ ನಮೂದಿಸಲು ಡಿ.8 ರಿಂದ ಅವಕಾಶ ನೀಡಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಕೇಂದ್ರೀಕೃತ ದಾಖಲಾತಿ ಘಟಕದ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೊದಲ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿ ಕಾಲೇಜಿಗೆ ದಾಖಲಾಗದ ಹಾಗೂ ಸೀಟು ಹಂಚಿಕೆಯಾಗದ ಅಭ್ಯರ್ಥಿಗಳು ಡಿ.8 ರಿಂದ ಡಿ.10ರೊಳಗೆ ಇಲಾಖೆಯ ವೆಬ್‌ಸೈಟ್ https://sts.karnataka.gov.in/GPSTRHK/NewLogin.aspx ಮೂಲಕ ಸೀಟ್ ಮ್ಯಾಟ್ರಿಕ್ ಪ್ರಕಾರ ಇಲಾಖೆ ಪ್ರಕಟಿಸಿರುವ ಕಾಲೇಜುಗಳಿಗೆ ಆಯ್ಕೆ ನಮೂದಿಸಲು ಕೋರಲಾಗಿದೆ.



