ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ(ಎಎಐ) ತನ್ನ ಪ್ರಾದೇಶಿಕ ಪ್ರಧಾನ ಕಚೇರಿ(ಉತ್ತರ ವಲಯ) ವ್ಯಾಪ್ತಿಯ ವಿವಿಧ ವಿಮಾನ ನಿಲ್ದಾಣಗಳಿಗೆ ಅಪ್ರೆಂಟಿಸ್ ಕಾಯ್ದೆಯಡಿ ಪದವೀಧರ, ಡಿಪ್ಲೊಮಾ, ಐಟಿಐ ಅಪ್ರೆಂಟಿಸ್‌ಶಿಪ್ ತರಬೇತಿಗೆ ಅರ್ಜಿ ಆಹ್ವಾನಿಸಿದೆ.
ಪದವೀಧರರಿಗೆ 22 ಸ್ಥಾನ, ಡಿಪ್ಲೊಮಾ ಅಭ್ಯರ್ಥಿಗಳಿಗೆ 64 ಸ್ಥಾನ, ಐಟಿಐ ಅಭ್ಯರ್ಥಿಗಳಿಗೆ 47 ಸ್ಥಾನ ಸೇರಿದಂತೆ ಒಟ್ಟು 133 ಸ್ಥಾನಗಳಿಗೆ ಆಯ್ಕೆ ನಡೆಯಲಿದ್ದು, ಆಯ್ದ ಅಭ್ಯರ್ಥಿಗಳಿಗೆ 01 ವರ್ಷದ ಅವಧಿಯವರೆಗೆ ತರಬೇತಿ ಒದಗಿಸಲಿದೆ. ವ್ಯಾಪ್ತಿಗೆ ಒಳಪಡುವ ಆಸಕ್ತರು ಪದವೀಧರ/ಡಿಪ್ಲೊಮಾ ಅಪ್ರೆಂಟಿಸ್‌ಗಾಗಿ https://nats.education.gov.in/, ಐಟಿಐ ಅಪ್ರೆಂಟಿಸ್‌ಗಾಗಿ https://www.apprenticeshipindia.gov.in/ನ ಮೂಲಕ ನೋಂದಣಿ ಮಾಡಿಕೊಳ್ಳಬಹುದು. ನೋಂದಣಿಗೆ ಮಾ.22 ಕೊನೆಯ ದಿನವಾಗಿದೆ.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆ ಅಧಿಸೂಚನೆಯ ದಿನಾಂಕ – ಮಾರ್ಚ್ 11, 2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಮಾರ್ಚ್ 22, 2026
ಶೈಕ್ಷಣಿಕ ಅರ್ಹತೆ:
✓ ಪದವಿ/ಡಿಪ್ಲೊಮಾ ಅಪ್ರೆಂಟಿಸ್ ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಸಂಬಂಧಿತ (ಸಿವಿಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್/ಇನ್ಫಾರ್ಮಶನ್ ಟೆಕ್ನಾಲಜಿ, ಮೆಕ್ಯಾನಿಕಲ್/ಆಟೋಮೊಬೈಲ್) ವಿಭಾಗಗಳಲ್ಲಿ 04 ವರ್ಷಗಳ ಬಿ.ಇ ಅಥವಾ ಬಿ.ಟೆಕ್ ಪದವಿ/03 ವರ್ಷಗಳ ಡಿಪ್ಲೋಮಾ ಇನ್ ಇಂಜಿನಿಯರಿಂಗ್/ಬಿಸಿಎ ಪದವಿ ಪೂರ್ಣಗೊಳಿಸಿರಬೇಕು.
✓ ಐಟಿಐ ಅಪ್ರೆಂಟಿಸ್ ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆಯಿಂದ ಕಂಪ್ಯೂಟರ್ ಆಪರೇಟರ್ ಪ್ರೋಗ್ರಾಮಿಂಗ್ ಅಸಿಸ್ಟೆಂಟ್ ಮತ್ತು ಸ್ಟೆನೋ ಟ್ರೇಡ್‌ಗಳಲ್ಲಿ ಐಟಿಐ ಪೂರ್ಣಗೊಳಿಸಿರಬೇಕು ಹಾಗೂ ಎನ್‌ಸಿವಿಟಿ ಪ್ರಮಾಣಪತ್ರವನ್ನು ಹೊಂದಿರಬೇಕು.
ವಯೋಮಿತಿ:
31-03-2026 ರಂತೆ;
ಕನಿಷ್ಠ ಮಿತಿ – 18 ವರ್ಷಗಳು
ಗರಿಷ್ಠ ಮಿತಿ – 26 ವರ್ಷಗಳು
ವಯೋಮಿತಿ ಸಡಿಲಿಕೆ; ಭಾರತ ಸರ್ಕಾರದ ನಿಯಮಗಳ ಅನುಸಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಒಬಿಸಿ ಪಿಡಬ್ಲ್ಯೂಡಿ ಹಾಗೂ ಇತ್ಯಾದಿ ವರ್ಗಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ಅನ್ವಯಿಸುತ್ತದೆ.
ಆಯ್ಕೆ ಪ್ರಕ್ರಿಯೆ:
- ಶೈಕ್ಷಣಿಕ ಅರ್ಹತೆಯ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳ ಶಾರ್ಟ್ ಲಿಸ್ಟ್
- ಸಂದರ್ಶನ
- ದಾಖಲಾತಿ ಪರಿಶೀಲನೆ
- ವೈದ್ಯಕೀಯ ಪರೀಕ್ಷೆ
ಸ್ಟೈಫಂಡ್:
ಪದವೀಧರ ಅಪ್ರೆಂಟಿಸ್ ಹುದ್ದೆಗಳಿಗೆ – ₹15,000
ಡಿಪ್ಲೊಮಾ ಅಪ್ರೆಂಟಿಸ್ ಹುದ್ದೆಗಳಿಗೆ – ₹12,000
ಐಟಿಐ/ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ – ₹9,600
ಅರ್ಜಿ ಶುಲ್ಕ:
ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ
ಅರ್ಜಿ ಸಲ್ಲಿಸುವ ವಿಧಾನ ಹೇಗೆ?
• ಪದವಿ/ಡಿಪ್ಲೊಮಾ ಅಭ್ಯರ್ಥಿಗಳು NATS ಅಧಿಕೃತ ವೆಬ್ ಸೈಟ್ https://nats.education.gov.in/ಗೆ ಭೇಟಿ ನೀಡಿ.
• ಐಟಿಐ ಟ್ರೇಡ್ ಅಭ್ಯರ್ಥಿಗಳು NAPS ಅಧಿಕೃತ ವೆಬ್ ಸೈಟ್ https://www.apprenticeshipindia.gov.in/ಗೆ ಭೇಟಿ ನೀಡಿ.
• ಹೊಸ ಬಳಕೆದಾರರಾಗಿದ್ದಲ್ಲಿ ನೋಂದಾಯಿಸಿ ಅಥವಾ ನೋಂದಣಿ ಸಂಖ್ಯೆ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ.
• ನಂತರ “ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ -RHQ NR, ನವದೆಹಲಿ (NDLSWC000002 (BOAT)/E05200700101(NAPS) ಅನ್ನು ಹುಡುಕಿ ಮತ್ತು ಮುಂದಿನ ಪುಟದಲ್ಲಿ ಅರ್ಜಿ ಸಲ್ಲಿಸಿ ಬಟನ್ ಅನ್ನು ಕ್ಲಿಕ್ ಮಾಡಿ.
• ನಂತರ “ತರಬೇತಿ ಹುದ್ದೆಗೆ ಯಶಸ್ವಿಯಾಗಿ ಅರ್ಜಿ ಸಲ್ಲಿಸಲಾಗಿದೆ. ಲಭ್ಯತೆಯ ಆಧಾರದ ಮೇಲೆ, ನಿಮ್ಮನ್ನು ಸಂಸ್ಥೆಯು ಸಂಪರ್ಕಿಸುತ್ತದೆ” ಎಂಬ ಸಂದೇಶ ಕಾಣಿಸಿಕೊಳ್ಳುತ್ತದೆ.
• ಈಗ ಅಭ್ಯರ್ಥಿಗಳು ಅಪ್ರೆಂಟಿಸ್ ಹುದ್ದೆಗಳಿಗೆ ಯಶಸ್ವಿಯಾಗಿ ಅರ್ಜಿ ಸಲ್ಲಿಸಿರುತ್ತೀರಿ.
Important Direct Links:
| Official Notification PDF | Download |
| Graduate/Diploma Apprenticeship Online Application Form Link | Apply Now |
| ITI Apprenticeship Online Application Form Link | Apply Now |
| Official Website | www.aai.aero |
| More Updates | KarnatakaHelp.in |