ನೌಕಾಪಡೆಯಲ್ಲಿ ಅಗ್ನಿವೀರ್(ಎಂಆರ್‌, ಎಸ್‌ಎಸ್‌ಆರ್‌, ಎಸ್‌ಎಸ್‌ಆರ್‌ ಮೆಡಿಕಲ್‌) ನೇಮಕಾತಿ

ಮೇ ತಿಂಗಳಲ್ಲಿ ಭಾರತೀಯ ನೌಕಾಪಡೆ ಪ್ರವೇಶ ಪರೀಕ್ಷೆ

Published on:

Updated On:

ಭಾರತೀಯ ನೌಕಾಪಡೆಯು ಅಗ್ನಿವೀರ್ (ಮ್ಯಾಟ್ರಿಕ್ ನೇಮಕಾತಿ-ಎಂಆರ್‌ & ಹಿರಿಯ ಮಾಧ್ಯಮಿಕ ನೇಮಕಾತಿ-ಎಸ್‌ಎಸ್‌ಆರ್‌) ಮತ್ತು ನಾವಿಕ (ಎಸ್‌ಎಸ್‌ಆರ್‌ ಮೆಡಿಕಲ್ ವಿಭಾಗ) ಹುದ್ದೆಗಳ 01/2027 ಮತ್ತು 02/2027 ಬ್ಯಾಚ್‌ಗಳ ಭರ್ತಿಗಾಗಿ ಅವಿವಾಹಿತ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಅರ್ಜಿ ಸಲ್ಲಿಕೆ ಅವಧಿಯು ಮಾ.14 ರಿಂದ ಏ.06ರವೆರೆಗೆ ನೀಡಲಾಗಿದೆ. ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ವಿಜ್ಞಾನ ವಿಷಯಗಳೊಂದಿಗೆ ತೇರ್ಗಡೆ ಅಥವಾ ಸಂಬಂಧಿಸಿದ ವಿಷಯದಲ್ಲಿ ಡಿಪ್ಲೊಮಾ ಹೊಂದಿರುವವರು ಭಾರತೀಯ ನೌಕಾಪಡೆಯ ಅಧಿಕೃತ ವೆಬ್ ಸೈಟ್ https://www.joinindiannavy.gov.in/en/account/eligibilitylistನ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – ಮಾರ್ಚ್ 14, 2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಏಪ್ರಿಲ್ 06, 2026
  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ – ಏಪ್ರಿಲ್ 06, 2026
  • ಹಂತ-I (INET) – ಭಾರತೀಯ ನೌಕಾಪಡೆ ಪ್ರವೇಶ ಪರೀಕ್ಷೆ (ತಾತ್ಕಾಲಿಕ) ದಿನಾಂಕ – ಮೇ 2026

ಶೈಕ್ಷಣಿಕ ಅರ್ಹತೆ:

ಅಗ್ನಿವೀರ್ (ಎಂಆರ್‌);
• ಅಭ್ಯರ್ಥಿಗಳು ಮಾನ್ಯತೆ ಪಡೆದ ಶಾಲಾ ಶಿಕ್ಷಣ ಮಂಡಳಿಯಿಂದ ಕನಿಷ್ಠ ಒಟ್ಟು 50% ಅಂಕಗಳೊಂದಿಗೆ ಗಣಿತ ಮತ್ತು ಭೌತಶಾಸ್ತ್ರ ವಿಷಯಗಳೊಂದಿಗೆ ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣರಾಗಿರಬೇಕು.

ಅಥವಾ

• ಮಾನ್ಯತೆ ಪಡೆದ ಪಾಲಿಟೆಕ್ನಿಕ್ ಸಂಸ್ಥೆಯಿಂದ ಸಂಬಂಧಿತ (ಮೆಕ್ಯಾನಿಕಲ್/ ಎಲೆಕ್ಟ್ರಿಕಲ್/ ಆಟೋಮೊಬೈಲ್ಸ್/ ಕಂಪ್ಯೂಟರ್ ಸೈನ್ಸ್/ ಇನ್ಸ್ಟ್ರುಮೆಂಟೇಶನ್ ಟೆಕ್ನಾಲಜಿ/ ಮಾಹಿತಿ ತಂತ್ರಜ್ಞಾನ) ವಿಷಯಗಳಲ್ಲಿ ಡಿಪ್ಲೊಮಾ ಇನ್ ಎಂಜಿನಿಯರಿಂಗ್ ಕೋರ್ಸ್ ಅನ್ನು ಪೂರ್ಣಗೊಳಿಸಬೇಕು.

• 2025-26ನೇ ಶೈಕ್ಷಣಿಕ ಸಾಲಿನಲ್ಲಿ 12ನೇ ತರಗತಿ ಬೋರ್ಡ್ ಪರೀಕ್ಷೆ ಬರೆಯುತ್ತಿರುವ ಅಭ್ಯರ್ಥಿಗಳು ಇತರ ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರೈಸಿದರೆ ಅರ್ಜಿ ಸಲ್ಲಿಸಬಹುದು.
ಅಗ್ನಿವೀರ್ (ಎಸ್‌ಎಸ್‌ಆರ್‌);
• ಅಭ್ಯರ್ಥಿಗಳು ಮಾನ್ಯತೆ ಪಡೆದ ಶಾಲಾ ಶಿಕ್ಷಣ ಮಂಡಳಿಯಿಂದ ಕನಿಷ್ಠ ಒಟ್ಟು 50% ಅಂಕಗಳೊಂದಿಗೆ ಮೆಟ್ರಿಕ್ಯುಲೇಷನ್ (10ನೇ ತರಗತಿ) ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

• 2025-26ನೇ ಶೈಕ್ಷಣಿಕ ಸಾಲಿನಲ್ಲಿ 10ನೇ ತರಗತಿ ಬೋರ್ಡ್ ಪರೀಕ್ಷೆ ಬರೆಯುತ್ತಿರುವ ಅಭ್ಯರ್ಥಿಗಳು ಇತರ ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರೈಸಿದರೆ ಅರ್ಜಿ ಸಲ್ಲಿಸಬಹುದು.
ಅಗ್ನಿವೀರ್‌ (ಎಸ್‌ಎಸ್‌ಆರ್‌ ಮೆಡಿಕಲ್‌);
ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ (PCB)ಪತ್ರಿ ವಿಷಯದಲ್ಲಿ ಕನಿಷ್ಠ ಶೇ.40ರಷ್ಟು ಅಂಕಗಳು, ಒಟ್ಟಾರೆಯಾಗಿ ಶೇ.50 ಅಂಕಗಳೊಂದಿಗೆ ತೇರ್ಗಡೆ

ವಯೋಮಿತಿ:

ಕನಿಷ್ಠ ವಯಸ್ಸಿನ ಮಿತಿ -17.5 ವರ್ಷಗಳು
ಗರಿಷ್ಠ ವಯಸ್ಸಿನ ಮಿತಿ – 21 ವರ್ಷಗಳು

• ಅಗ್ನಿವೀರ್ 01/2027 ಬ್ಯಾಚ್ – ಅಭ್ಯರ್ಥಿಯು ಡಿಸೆಂಬರ್ 01, 2004 ರಿಂದ ಮೇ 31, 2009 (ಎರಡೂ ದಿನಾಂಕಗಳು ಸೇರಿದಂತೆ) ನಡುವೆ ಜನಿಸಿರಬೇಕು.

• ಅಗ್ನಿವೀರ್ 02/2027 ಬ್ಯಾಚ್ – ಅಭ್ಯರ್ಥಿಯು ಮೇ 01, 2005 ರಿಂದ ಅಕ್ಟೋಬರ್ 31, 2009 (ಎರಡೂ ದಿನಾಂಕಗಳು ಸೇರಿದಂತೆ) ನಡುವೆ ಜನಿಸಿರಬೇಕು.

ವಯೋಮಿತಿ ಸಡಿಲಿಕೆ; ಭಾರತೀಯ ನೌಕಾಪಡೆ ನಿಯಮಗಳ ಅನುಸಾರ ವಯೋಮಿತಿ ಸಡಿಲಿಕೆ ಅನ್ವಯವಾಗುತ್ತದೆ.

ಸೇವಾ ಅವಧಿ:

ಭಾರತೀಯ ನೌಕಾಪಡೆಯಲ್ಲಿ 4 ವರ್ಷಗಳ ಕಾಲ ಸೇವೆ ಸಲ್ಲಿಸಲು ಅರ್ಹರಿರುತ್ತಾರೆ.

ವೇತನ ಹಾಗೂ ಅಗ್ನಿವೀರ್ ಕಾರ್ಪಸ್ ನಿಧಿ ವಿವರ

✓ ಮೊದಲ ವರ್ಷ: ಮಾಸಿಕ ವೇತನ ₹30 ಸಾವಿರ ಅದರಲ್ಲಿ ಅಭ್ಯರ್ಥಿಗಳಿಗೆ 21 ಸಾವಿರರೂ. ಅಗ್ನಿವೀರ್ ಕಾರ್ಪಸ್ ನಿಧಿಗೆ 9 ಸಾವಿರರೂ. ಹೋಗುತ್ತದೆ.

✓ ಎರಡನೇ ವರ್ಷ: ಮಾಸಿಕ ವೇತನ ₹33 ಸಾವಿರ ಅದರಲ್ಲಿ ಅಭ್ಯರ್ಥಿಗಳಿಗೆ 23,100ರೂ. ಅಗ್ನಿವೀರ್ ಕಾರ್ಪಸ್ ನಿಧಿಗೆ 9,900ರೂ. ಹೋಗುತ್ತದೆ.

✓ ಮೂರನೇ ವರ್ಷ: ಮಾಸಿಕ ವೇತನ ₹36,500 ಅದರಲ್ಲಿ ಅಭ್ಯರ್ಥಿಗಳಿಗೆ 25,550ರೂ. ಅಗ್ನಿವೀರ್ ಕಾರ್ಪಸ್ ನಿಧಿಗೆ 10,950ರೂ. ಹೋಗುತ್ತದೆ.

✓ ನಾಲ್ಕನೇ ವರ್ಷ: ಮಾಸಿಕ ವೇತನ ₹40 ಸಾವಿರ ಅದರಲ್ಲಿ ಅಭ್ಯರ್ಥಿಗಳಿಗೆ 28ಸಾವಿರ ರೂ. ಅಗ್ನಿವೀರ್ ಕಾರ್ಪಸ್ ನಿಧಿಗೆ 12ಸಾವಿರ ರೂ. ಹೋಗುತ್ತದೆ.

• 4 ವರ್ಷಗಳ ನಂತರ, ಅಗ್ನಿವೀರ್ ಅಭ್ಯರ್ಥಿಗಳು ₹10.04 ಲಕ್ಷ (ಬಡ್ಡಿ ಸೇರಿದಂತೆ) ಸೇವಾ ನಿಧಿ ಪ್ಯಾಕೇಜ್ ಪಡೆಯುತ್ತಾರೆ.

ಆಯ್ಕೆ ವಿಧಾನ:

  • ಭಾರತೀಯ ನೌಕಾಪಡೆ ಪ್ರವೇಶ ಪರೀಕ್ಷೆ (INET)
  • ದೈಹಿಕ ಸದೃಢತಾ ಪರೀಕ್ಷೆ (PFT)
  • ಅರ್ಹ ಅಭ್ಯರ್ಥಿಗಳ ಶಾರ್ಟ್‌ಲಿಸ್ಟ್
  • ದಾಖಲೆ ಪರಿಶೀಲನೆ
  • ವೈದ್ಯಕೀಯ ಪರೀಕ್ಷೆ

ಅರ್ಜಿ ಶುಲ್ಕ:

ಎಲ್ಲಾ ಅಭ್ಯರ್ಥಿಗಳಿಗೂ – ₹550 ಮತ್ತು 18% GST

ಅರ್ಜಿ ಸಲ್ಲಿಸುವ ವಿಧಾನ

• ಮೊದಲಿಗೆ ಅಭ್ಯರ್ಥಿಗಳು ಭಾರತೀಯ ನೌಕಾಪಡೆಯ ಅಧಿಕೃತ ವೆಬ್ ಸೈಟ್ https://www.joinindiannavy.gov.in/en/account/eligibilitylistಗೆ ಭೇಟಿ ನೀಡಿ.

• ಮಾರ್ಚ್ 14ರಂದು ಸಕ್ರಿಯವಾಗುವ “ಅಗ್ನಿವೀರ್ ಎಸ್‌ಎಸ್‌ಸಿ/ಎಂಆರ್‌/ಎಸ್‌ಎಸ್‌ಸಿ ಮೆಡಿಕಲ್‌ ನೇಮಕಾತಿ” ಅರ್ಜಿ ನಮೂನೆ ಆಯ್ಕೆ ಮಾಡಿ.

• ಬಳಿಕ ಬಳಕೆದಾರರ ಐಡಿ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ ಅಥವಾ ಹೊಸ ಬಳಕೆದಾರರಾಗಿದ್ದಲ್ಲಿ ನೋಂದಾಯಿಸಿ

• ಅರ್ಜಿಯಲ್ಲಿ ಕೇಳಲಾಗುವ ಸ್ವವಿವರ ನಮೂದಿಸಿ, ಭಾವಚಿತ್ರ, ಸಹಿ ಹಾಗೂ ಶೈಕ್ಷಣಿಕ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.

• ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಿ.

• ನಂತರ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ.

• ಭವಿಷ್ಯಕ್ಕಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಮುದ್ರಿಸಿ.

Important Direct Links:

Agniveer SSR Official Notification PDFDownload
Agniveer MR Official Notification PDFDownload
Agniveer SSR (Med) Official Notification PDFDownload
Agniveer SSR /MR Online Application Form LinkApply Now
Agniveer SSR Medical Online Application Form LinkApply Now
Official Websitewww.joinindiannavy.gov.in
More UpdatesKarnatakaHelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

1 thought on “ನೌಕಾಪಡೆಯಲ್ಲಿ ಅಗ್ನಿವೀರ್(ಎಂಆರ್‌, ಎಸ್‌ಎಸ್‌ಆರ್‌, ಎಸ್‌ಎಸ್‌ಆರ್‌ ಮೆಡಿಕಲ್‌) ನೇಮಕಾತಿ”

Leave a Comment