Bank of Maharashtra Specialist Officers Notification 2025
ಸಾರ್ವಜನಿಕ ವಲಯದ ಪ್ರಸಿದ್ಧ ಬ್ಯಾಂಕುಗಳಲ್ಲಿ ಒಂದಾದ ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ಹಂತ IIರ ಸ್ಕೇಲ್ II, III, IV, V ಮತ್ತು VIನಲ್ಲಿ ತಜ್ಞ ಅಧಿಕಾರಿ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ ಎಂದು ಬ್ಯಾಂಕಿನ ಮಾನವ ಸಂಪನ್ಮೂಲ ನಿರ್ವಹಣಾ ಇಲಾಖೆಯ ಜನರಲ್ ಮ್ಯಾನೇಜರ್ ಕೆ.ರಾಜೇಶ್ ಕುಮಾರ ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.
ಮಾಹಿತಿ ತಂತ್ರಜ್ಞಾನ/ಡಿಜಿಟಲ್ ಬ್ಯಾಂಕಿಂಗ್/ಐಟಿ ಭದ್ರತೆ/ಐಎಸ್ ಆಡಿಟ್/ಸಿಐಎಸ್ಒ ಕೋಶ ವಿಭಾಗಗಳಲ್ಲಿ ಖಾಲಿ ಇರುವ 350 ತಜ್ಞ ಅಧಿಕಾರಿ(ಎಸ್ಓ) ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಬ್ಯಾಂಕಿಂಗ್ ವಲಯದಲ್ಲಿ ವೃತ್ತಿ ಜೀವನವನ್ನು ಹುಡುಕುತ್ತಿರುವ ಅಭ್ಯರ್ಥಿಗಳು ಬ್ಯಾಂಕ್ ಆಫ್ ಮಹಾರಾಷ್ಟ್ರದ ಅಧಿಕೃತ ವೆಬ್ಸೈಟ್ https://bankofmaharashtra.in/current-openingsಗೆ ಭೇಟಿ ನೀಡಿ, ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – ಸೆಪ್ಟೆಂಬರ್ 10, 2025
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ – ಸೆಪ್ಟೆಂಬರ್ 30, 2025
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಂಬಂಧಿತ ಕ್ಷೇತ್ರದಲ್ಲಿ ಬಿ.ಟೆಕ್, ಬಿ.ಇ, ಕಾನೂನು, ಹಣಕಾಸು, ಡೇಟಾ ಸೈನ್ಸ್ ಅಥವಾ ಚಾರ್ಟರ್ಡ್ ಅಕೌಂಟೆಂಟ್ ಪದವಿ ಪೂರ್ಣಗೊಳಿಸಿರಬೇಕು.
ನೇಮಕಾತಿಯ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಅರ್ಜಿ ಸಲ್ಲಿಸಲು ನಿಗದಿತ ವಿದ್ಯಾರ್ಹತೆ ಹೊಂದಿರಬೇಕು. ಹುದ್ದೆಗಳಿಗೆ ಆಧಾರಿತವಾಗಿ ವಿದ್ಯಾರ್ಹತೆ ನಿಗದಿ ಪಡಿಸಲಾಗಿದೆ. ಅಭ್ಯರ್ಥಿಗಳು ತಪ್ಪದೇ ಅಧಿಕೃತ ಅಧಿಸೂಚನೆಯನ್ನು ಓದಿ.
ವಯೋಮಿತಿ:
31-08-2025 ರಂತೆ;
ಕನಿಷ್ಠ ಮಿತಿ – 22 ವರ್ಷಗಳು
ಗರಿಷ್ಠ ಮಿತಿ – 50 ವರ್ಷಗಳು
ಸರ್ಕಾರಿ ನಿಯಮಗಳ ಪ್ರಕಾರ ವರ್ಗವಾರು ವಯಸ್ಸಿನ ಸಡಿಲಿಕೆ ಅನ್ವಯಿಸುತ್ತದೆ.
ಆಯ್ಕೆ ವಿಧಾನ:
ಲಿಖಿತ ಪರೀಕ್ಷೆ (ಆನ್ಲೈನ್ CBT)
ವೈಯಕ್ತಿಕ ಸಂದರ್ಶನ
ದಾಖಲೆ ಪರಿಶೀಲನೆ
ಅರ್ಜಿ ಶುಲ್ಕ:
ಸಾಮಾನ್ಯ, ಒಬಿಸಿ ಹಾಗೂ ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ – 1,180ರೂ.
ಪ.ಜಾತಿ, ಪ.ಪಂಗಡ ಹಾಗೂ ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ – 118ರೂ.
How to Apply For Bank of Maharashtra Specialist Officer (SO) Recruitment 2025
ಅರ್ಜಿ ಸಲ್ಲಿಸುವ ವಿಧಾನ ಇಂತಿದೆ;
ಬ್ಯಾಂಕ್ ಆಫ್ ಮಹಾರಾಷ್ಟ್ರದ ಅಧಿಕೃತ ವೆಬ್ಸೈಟ್ https://bankofmaharashtra.in/current-openingsಗೆ ಭೇಟಿ ನೀಡಿ.
ಪ್ರಸ್ತುತ ಹುದ್ದೆಗಳು ವಿಭಾಗದ “ನೇಮಕಾತಿ ಯೋಜನೆ 2025-26 ಹಂತ || ಸ್ಕೆಲ್ I, III, IV, V ಮತ್ತು VI ರಲ್ಲಿ” ಕೆಳಗೆ ನೀಡಲಾಗಿರುವ *ಅಪ್ಲಿಕೇಶನ್ ಲಿಂಕ್* ಆಯ್ಕೆ ಮೇಲೆ ಟ್ಯಾಪ್ ಮಾಡಿ.
ಬಳಿಕ ಬಳಕೆದಾರರ ಐಡಿ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ ಅಥವಾ ಹೊಸ ಬಳಕೆದಾರರಾಗಿದ್ದಲ್ಲಿ ನೋಂದಾಯಿಸಿ.
ಅರ್ಜಿಯಲ್ಲಿ ಕೇಳಲಾಗುವ ಸ್ವ ವಿವರ ನಮೂದಿಸಿ ಭಾವಚಿತ್ರ ಸಹಿ ಹಾಗೂ ಶೈಕ್ಷಣಿಕ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
ನಂತರ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕ ಪಾವತಿ ಮಾಡಿ ಕೊನೆಯಲ್ಲಿ ಅರ್ಜಿಯನ್ನು ಪರಿಶೀಲಿಸಿ ಮತ್ತೊಮ್ಮೆ ಸಲ್ಲಿಸಿ.
ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಮುದ್ರಿಸಿ.
I am sagar N from kothnuru village and post Kollegal tq Chamarajanagar district I am completed degree in bcom i am present working in idfc first bharat I am interested job in ur bank of maharashtra so iam interested job I want job
I need job for my higher position
I am sagar N from kothnuru village and post Kollegal tq Chamarajanagar district I am completed degree in bcom i am present working in idfc first bharat I am interested job in ur bank of maharashtra so iam interested job I want job